Search


ತಲೆನೋವು ಇದ್ದರೆ ಸೈಂಧವ ಉಪ್ಪನ್ನು ಒಂದು ಲೋಟ ನೀರಿಗೆ ನಿಂಬೆರಸ ಬೆರಸಿ ಕುಡಿಯಬೇಕು.ಅದು ಎಲ್ಲಿ ಸಿಗುತ್ತೆ ಗೊತ್ತ ,ನೀವು ಪಾಕಿಸ್ತಾನ ಹೋಗಬೇಕು

ಇದಕ್ಕೆ ಕಲ್ಲುಪ್ಪು, ರಾಕ್ ಸಾಲ್ಟ್ ಎಂದೂ ಕರೆಯುತ್ತಾರೆ. ಇದು ಆಯುರ್ವೇದ ಅಂಗಡಿಗಳಲ್ಲಿ ಸಾಮಾನ್ಯವಾಗಿ ಸಿಗುತ್ತದೆ. ಇದರ ಬಣ್ಣ ಗುಲಾಬಿ (ಪಿಂಕ್) , ಕಪ್ಪು ಇರುತ್ತದೆ. ಸಾಮಾನ್ಯ ಅಡಿಗೆಗೆ ಬಳಸುವ ಬಿಳಿ ಉಪ್ಪಿಗಿಂತ ಇದರ ಬೆಲೆ ಜಾಸ್ತಿ.

ಈ ಸೈಂಧವ ಲವಣ ಹಿಮಾಲಯದ ಶ್ರೇಣಿಗಳಲ್ಲಿ ಗಣಿಗಾರಿಕೆ ಮಾಡಿ ತೆಗೆಯುತ್ತಾರೆ. ಹಾಗಾಗಿ ಇದಕ್ಕೆ. ಹಿಮಾಲಯನ್ ಉಪ್ಪು ಎಂದೂ ಕರೆಯುತ್ತಾರೆ. ಪಾಕಿಸ್ಥಾನ, ಭಾರತ, ನೇಪಾಳ ಗಳಲ್ಲಿ ಕಂಡುಬರುತ್ತದೆ. ಪ್ರಸ್ತುತ ಪಾಕಿಸ್ಥಾನದಲ್ಲಿ ಗಣಿಗಾರಿಕೆ ಮಾಡುತಿದ್ದಾರೆ.

ಖೇವ್ರಾ (Khewra) ಸೈಂಧವ ಉಪ್ಪಿನ ಗಣಿ, ಪಾಕಿಸ್ಥಾನ:

ಇದು ಪಾಕಿಸ್ಥಾನದಲ್ಲಿ ಖೇವ್ರಾ ಉಪ್ಪಿನ ಗಣಿ , ಜೀಲಂ ಜಿಲ್ಲೆಯ ಪಂಜಾಬ್ ಪ್ರದೇಶದಲ್ಲಿ ಇದೆ. ವರ್ಷಕ್ಕೆ 3 ರಿಂದ 4 ಲಕ್ಷ ಟನ್ ಸೈಂಧವ ಉಪ್ಪನ್ನು ಗಣಿಗಾರಿಕೆ ಮಾಡುತ್ತಾರೆ. ಭಾರತಕ್ಕೂ ರಫ್ತು ಮಾಡುತ್ತಾರೆ. ಭಾರತ ಇದನ್ನು ಸಂಸ್ಕರಿಸಿ, ಪ್ಯಾಕ್ ಮಾಡಿ ವಿದೇಶಗಳಿಗೆ ರಫ್ತು ಮಾಡುವುದು.

ಖೇವ್ರಾದಲ್ಲಿ ಸೈಂಧವ ಉಪ್ಪಿನಲ್ಲಿ ಕಲಾಕೃತಿಗಳನ್ನು ಮಾಡಿ ಮಾರಾಟಕ್ಕಿಟ್ಟಿರುವುದು.—

ಸಾಮಾನ್ಯ ಉಪ್ಪಿನಲ್ಲಿ ಸೋಡಿಯಮ್ ಮತ್ತು ಕ್ಲೋರೈಡ್ ಎರಡು ಅಂಶಗಳು ಕಂಡುಬರುತ್ತವೆ.

ಆದರೆ ಪಿಂಕ್ (ಗುಲಾಬಿ) ಉಪ್ಪಿನಲ್ಲಿ ಕಬ್ಬಿಣ, ಸತು, ನಿಕಲ್, ಕೋಬಾಲ್ಟ್, ಮ್ಯಾಂಗನೀಸ್, ತಾಮ್ರ ಇರುವುದರಿಂದ ಆರೋಗ್ಯಕ್ಕೆ ಅಗತ್ಯವಾದ ಅಂಶಗಳಿವೆ.

ಇದರ ಉಪಯೋಗಗಳು : ನಿಮಗೆ ಶೀತ, ಜೀರ್ಣಕಾರಿ ಸಮಸ್ಯೆ ಇದ್ದರೆ ಸೈಂಧವ ಲವಣದಿಂದ ಪರಿಹಾರ ಪಡೆಯಬಹುದು.

ನಿದ್ರಾಹೀನತೆಯ ಸಮಸ್ಯೆ ಇದ್ದರೆ ಅಹಾರದಲ್ಲಿ ಸೈಂಧವ ಲವಣ ಬಳಸೋದರ ಮೂಲಕ ಆ ಸಮಸ್ಯೆಯನ್ನು ಹೋಗಲಾಡಿಸಬಹುದು. ಈ ಉಪ್ಪನ್ನು ಜೇನುತುಪ್ಪದೊಂದಿಗೆ ಸೇವಿಸಬೇಕು.ಗಾಡವಾದ ನಿದ್ರೆಯನ್ನು ಹೊಂದಬಹುದು.

ತೆಂಗಿನೆಣ್ಣೆಯಲ್ಲಿ ಗುಲಾಬಿ ಉಪ್ಪನ್ನು ಬೆರಸಿ ಮುಖದ ಮೇಲೆ ಲಘು ಕೈಗಳಿಂದ ಮಸಾಜ್ ಮಾಡಿದ್ರೆ ಇದು ಉತ್ತಮ ಸ್ಕ್ರಬ್ ಆಗಿ ಕೆಲಸ ಮಾಡತ್ತೆ.

ತಲೆನೋವು ಇದ್ದರೆ ಸೈಂಧವ ಉಪ್ಪನ್ನು ಒಂದು ಲೋಟ ನೀರಿಗೆ ನಿಂಬೆರಸ ಬೆರಸಿ ಕುಡಿಯಬೇಕು.

ಇದರ ತೊಂದರೆಗಳು : ಔಷದೀಯ ಗುಣ ಹೊಂದಿರುವ ಸೈಂಧವ ಲವಣ ಬಳಕೆ ಅತಿಯಾದರೆ ರಕ್ತದೊತ್ತಡ ಹೆಚ್ಚಾಗಿ ಅಪಾಯ ಉಂಟಾಬಹುದು.

By S M Swathi - 23-06-2026


Ads in Post