ಬೆಂಗಳೂರು: ಮುಂದಿನ ಜನ್ಮದಲ್ಲಿ ದಲಿತರ ಮನೆಯಲ್ಲಿ ಹುಟ್ಟಿ ಮೇಲ್ವರ್ಗದವರನ್ನು ಆಟ ಆಡಿಸುವಂತಾಗಬೇಕು ಎಂದು ಶಾಸಕ ಪ್ರದೀಪ್ ಈಶ್ವರ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕೆಲವರಿಗೆ ಮುಂದಿನ ಚುನಾವಣೆ ಮುಖ್ಯವಾಗಿದ್ದರೆ, ನನಗೆ ಮುಂದಿನ ಪೀಳಿಗೆ ಮುಖ್ಯ. ಬಾಬಾ ಸಾಹೇಬ್ ಅಂಬೇಡ್ಕರ್ ನನ್ನ ದೇವರು. ನಾನು ಪ್ರಮಾಣ ವಚನ ಸ್ವೀಕರಿಸಿದ್ದು ಕೂಡ ಅವರ ಹೆಸರಿನಲ್ಲೇ ಎಂದು ಹೇಳಿದರು.
ಮುಂದಿನ ಜನ್ಮ ಎಂಬುದು ಇದ್ದರೆ ದಲಿತರ ಮನೆಯಲ್ಲಿ ಹುಟ್ಟಬೇಕು ಎಂಬುದು ನನ್ನ ಆಸೆ. ನಾನು ಒಬಿಸಿ ಸಮುದಾಯದಲ್ಲಿ ಹುಟ್ಟಿದ್ದರೂ ದಲಿತರ ಪರವಾಗಿ ಇಷ್ಟು ಹೋರಾಟ ಮಾಡುತ್ತಿದ್ದೇನೆ. ಮುಂದಿನ ಜನ್ಮದಲ್ಲಿ ದಲಿತನಾಗಿ ಹುಟ್ಟಿ ಮೇಲ್ವರ್ಗದವರನ್ನು ಆಟ ಆಡಿಸುತ್ತೇನೆ ಎಂದು ಪ್ರದೀಪ್ ಈಶ್ವರ್ ಹೇಳಿಕೆ ನೀಡಿದ್ದಾರೆ.
ಇನ್ನು ಸಾಮಾಜಿಕ ಮಾಧ್ಯಮದ ಕಾಮೆಂಟ್ಗಳ ಬಗ್ಗೆ ಮಾತನಾಡಿದ ಅವರು, ನಾನು ಹೇಳಬೇಕಾದುದನ್ನು ಹೇಳುತ್ತೇನೆ, ಅದಕ್ಕೆ ಯಾರು ಏನು ಹೇಳುತ್ತಾರೆ ಎಂಬುದನ್ನು ನೋಡುವುದಿಲ್ಲ. ಕಾಮೆಂಟ್ಸ್ ಸೆಕ್ಷನ್ಗೆ ಹೋಗುವುದಿಲ್ಲ, ವಿಡಿಯೋಗಳನ್ನೂ ನೋಡಲ್ಲ. ಹೀಗಾಗಿ ನಾನು ಆರಾಮಾಗಿದ್ದೇನೆ ಎಂದು ಹೇಳಿದರು.