ನವದೆಹಲಿ: ನೇಪಾಳದಲ್ಲಿ ಭೀಕರ ಜಲಪ್ರಳಯ ಹಿನ್ನಲೆ ಭಾರತ ಸಹಾಯ ಹಸ್ತ ಚಾಚಿದೆ, ಪ್ರವಾಹದ ಹಿನ್ನಲೆ ನೇಪಾಳ ಪ್ರಧಾನಿ ಬಾಲೇಂದ್ರ ಶಾ ಜೊತೆ ಮಾತನಾಡಿದ್ದ ಪ್ರಧಾನಿ ಮೋದಿ, ಅಗತ್ಯ ನೆರವು ನೀಡುವುದಾಗಿ ತಿಳಿಸಿದ್ದರು, ಇದರ ಬೆನ್ನಲ್ಲೇ ಭಾರತ ಸರ್ಕಾರ ನೇಪಾಳಕ್ಕೆ ರಕ್ಷಣಾ ಮತ್ತಯ ಪರಿಹಾರ ಕಾರ್ಯಚರಣೆಗೆ ಬೆಂಬಲವಾಗಿ ಸುಮಾರು 10 ಟನ್ ಮಾನವೀಯ ಮತ್ತು ವಿಪತ್ತು ಪರಿಹಾರ ಸಾಮಗ್ರಿಗಳನ್ನ ಹಾಗೂ ಔಷಧಗಳನ್ನ ರವಾನಿಸಿದೆ, ಈ ಕುರಿತು ವಿದೇಶಾಂಗ ಸಚಿವ ಜೈ ಶಂಕರ್ ಟ್ವೀಟ್ ಮಾಡಿದ್ದು, ನೇಪಾಳದ ಜನರೊಂದಿಗೆ ಭಾರತ ಗಟ್ಟಿಯಾಗಿ ನಿಲ್ಲಲಿದೆ ಎಂದು ತಿಳಿಸಿದ್ದಾರೆ.
ಈಗಾಗಲೇ ನೇಪಾಳ ಪ್ರವಾಹದಲ್ಲಿ 160 ಜನ ಸಾವನ್ನಪ್ಪಿದ್ದಾರೆ ಎಂದು ಅಧಿಕೃತ ಮಾಹಿತಿ ಲಭಿಸಿದ್ದು, ಭಾರತದ 133 ಮಂದಿ ಸೇರಿದಂತೆ ಸುಮಾರು 700 ಮಂದಿ ನಾಪತ್ತೆಯಾಗಿದ್ದಾರೆ. ಭಾರತದ ಗಡಿಯಿಂದ ಸುಮಾರು 160 ಕಿಮೀ ದೂರದಲ್ಲಿರುವ ನೇಪಾಳದ ಫರ್ಕೆ ಖೋಲಾ ಬಳಿಯ ತ್ರಿಶೂಲಿ ನದಿ ನೀರಿನ ಮಟ್ಟದಲ್ಲಿ ಹಠಾತ್ ಏರಿಕೆ ಕಂಡುಬಂದಿದೆ. ಇದರಿಂದ ಭಾರತದಲ್ಲೂ ರೆಡ್ ಅಲರ್ಟ್ ಘೋಷಿಸಿದ್ದು, ಉತ್ತರಪ್ರದೇಶ ಮತ್ತು ಬಿಹಾರದಲ್ಲಿ ಎಚ್ಚರಿಕೆಯಿಂದ ಇರುಲು ಮತ್ತು ಪರಿಸ್ಥಿತಿಯನ್ನ ಸೂಕ್ಷ್ಮವಾಗಿ ಗಮನಿಸಲು ಸೂಚಿಸಲಾಗಿದೆ.
ನೇಪಾಳದ ಪ್ರವಾಹಕ್ಕೆ ಕಾರಣವೇನು?:
ನೇಪಾಳದ ಭೋಟೆ ಕೋಶಿ ನದಿಯಲ್ಲಿ ನೀರಿನ ಮಟ್ಟ ಹಠಾತ್ ಏರಿಕೆಗೆ ನಿಖರವಾದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ, ಆದರೆ ನೇಪಾಳದ ಜಲವಿಜ್ಞಾನ ಮತ್ತು ಹವಾಮಾನ ಇಲಾಖೆ ರಸುವಾದಲ್ಲಿ ಮಳೆಯಿಂದ ಪ್ರವಾಹ ಉಂಟಾಗಿಲ್ಲ ಎಂದು ಸ್ಪಷ್ಟಪಡಿಸಿದೆ. ಹಿಮನದಿ ಸರೋವರದ ಸ್ಫೋಟದ ಪ್ರವಾಹ, ಭೂಕುಸಿತ ಅಥವಾ ಗಡಿಯ ಟಿಬೆಟಿಯನ್ ಭಾಗದಲ್ಲಿನ ಇನ್ನಾವುದಾದರೂ ಘಟನೆಯಿಂದ ಇದು ಸಂಭವಿಸಿರಬಹುದೇ ಎಂದು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.