Search


ನೀಟ್‌-ಯುಜಿ ಪರೀಕ್ಷೆ ನಡೆಸಲು ಭಾರತೀಯ ಸೇನೆ ಸಹಾಯ..!

ನವದೆಹಲಿ : ನೀಟ್‌-ಯುಜಿ ಪ್ರಶ್ನೆ ಪತ್ರಿಕೆಯನ್ನ ಸುರಕ್ಷಿತವಾಗಿ ಸಾಗಿಸಲು ಭಾರತೀಯ ವಾಯುಪಡೆಯನ್ನ ಬಳಸಿಕೊಳ್ಳಲು ಕೇಂದ್ರ ಶಿಕ್ಷಣ ಇಲಾಖೆ ಮುಂದಾಗಿದೆ. ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆಯಾದ ಹಿನ್ನಲೆ ಕೇಂದ್ರ ಸರ್ಕಾರ ಇಂತಹ ಕ್ರಮ ತೆಗೆದುಕೊಂಡಿದೆ.

ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದ ನೀಟ್-ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ಹಗರಣದ ಬಳಿಕ, ಕೇಂದ್ರ ಸರ್ಕಾರ ಜೂನ್ 21 ರಂದು ನಡೆಯಲಿರುವ ಮರುಪರೀಕ್ಷೆಯನ್ನು ಅತ್ಯಂತ ಕಟ್ಟುನಿಟ್ಟಾಗಿ ಮತ್ತು ಸುರಕ್ಷಿತವಾಗಿ ನಡೆಸಲು ಸಾರಥ್ಯ ವಹಿಸಿದೆ. ಈ ಬಾರಿ ಯಾವುದೇ ಲೋಪದೋಷಗಳಿಗೆ ಅವಕಾಶ ನೀಡದಂತೆ ಪ್ರಶ್ನೆಪತ್ರಿಕೆಗಳನ್ನು ಸುರಕ್ಷಿತವಾಗಿ ಸಾಗಿಸಲು ಭಾರತೀಯ ವಾಯುಪಡೆಯನ್ನು  ಬಳಸಿಕೊಳ್ಳಲು ಸರ್ಕಾರ ನಿರ್ಧರಿಸಿದೆ.

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ನಿವಾಸದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸಭೆಯಲ್ಲಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಸೇರಿದಂತೆ ಪ್ರಮುಖ ಅಧಿಕಾರಿಗಳು ಭಾಗವಹಿಸಿದ್ದರು. ವಾಯುಪಡೆ ಮತ್ತು ಸೇನೆಯ ನೆರವು: ಬಿಗಿಯಾದ ಸಮಯದ ಮಿತಿ ಮತ್ತು ಹವಾಮಾನ ವೈಪರೀತ್ಯದ ಸವಾಲುಗಳನ್ನು ಎದುರಿಸಲು ಅಂಚೆ ಸೇವೆಗಳ ಜೊತೆಗೆ ವಾಯುಪಡೆಯ ವಿಮಾನಗಳನ್ನು ಬಳಸಲಾಗುತ್ತದೆ. ಅಷ್ಟೇ ಅಲ್ಲದೆ, ಕೇವಲ ಸಾಗಣೆಯ ಸುರಕ್ಷತೆಗಾಗಿ ಭಾರತೀಯ ಭೂಸೇನೆಯ ಲಾಜಿಸ್ಟಿಕ್ಸ್ ನೆರವನ್ನು ಪಡೆಯುವ ಬಗ್ಗೆಯೂ ಸರ್ಕಾರ ಚಿಂತನೆ ನಡೆಸಿದೆ.
 

By thebigbulletin.com - 29-05-2026


Ads in Post