Search


ಟ್ರಂಪ್‌ ಪುತ್ರಿ ಹತ್ಯೆಗೆ IRGC ಸ್ಕೆಚ್‌; ಇರಾನ್‌ ಮೇಲಿನ ದಾಳಿಗೆ ಪ್ರತಿಕಾರ..!

ವಾಷಿಂಗ್ಟನ್‌: ಇಸ್ಲಾಮಿಕ್‌ ರೆವಲ್ಯೂಷನರಿ ಗಾರ್ಡ್‌ ಕಾರ್ಪ್ಸ್‌ನಿಂದ ತರಭೇತಿ ಪಡೆದಿದ್ದ ತಂಡವೊಂದು ಅಮೇರಿಕಾದ ಅಧ್ಯಕ್ಷ ಡೋನಾಲ್ಡ್‌ ಅವರ ಮೊದಲ ಪುತ್ರಿ ಇವಾಂಕಾ ಟ್ರಂಪ್‌ರನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದರು ಎಂಬ ಸ್ಪೋಟಕ ವಿಚಾರ ಬೆಳಕಿಗೆ ಬಂದಿದೆ.

ಅಮೆರಿಕಾದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮೇಲೆ ಈಗಾಗಲೇ ಅನೇಕ ಭಾರಿ ಹತ್ಯೆಯ ಸಂಚುಗಳು ನಡೆದಿವೆ. ಮಧ್ಯಪ್ರಾಚ್ಯದಲ್ಲಿ ಟ್ರಂಪ್‌ ತೆಗೆದುಕೊಳ್ಳುತ್ತಿರುವ ನಿರ್ಧಾರಗಳಿಂದ ಅನೇಕ ಸಂಘಟನೆಗಳು ಬಹಿರಂಗವಾಗಿಯೇ ಟ್ರಂಪ್‌ ಹತ್ಯೆಗೆ ಕರೆಕೊಟ್ಟಿವೆ. ಆದರೆ ಇದೀಗ ಈ ಹಂತಕರಿಂದ ಡೊನಾಲ್ಡ್‌ ಟ್ರಂಪ್‌ ಕುಟುಂಬ ಸದಸ್ಯರಿಗೂ ಅಪಾಯವಿದೆ ಎಂಬ ಮಾಹಿತಿ ಬಹಿರಂಗಗೊಂಡಿದೆ.

ಇರಾಕಿನಲ್ಲಿರುವ ಇಸ್ಲಾಮಿಕ್‌ ರೆವಲ್ಯೂಷನರಿ ಗಾರ್ಡ್‌ ಕಾರ್ಪ್ಸ್‌ನಿಂದ ತರಬೇತಿ ಪಡೆದಿದ್ದ 32 ವರ್ಷದ ಮೊಹಮ್ಮದ್ ಬಕರ್ ಸಾದ್ ದಾವೂದ್ ಅಲ್-ಸಾದಿ ಎಂಬಾತನನ್ನ ಟರ್ಕಿ ಪೊಲೀಸರು ಬಂಧಿಸಿ ಅಮೆರಿಕಾಗೆ ಹಸ್ತಾಂತರಿಸಿದ್ದು, ಈ ವೇಳೆ ಅನೇಕ ಮಾಹಿತಿಗಳು ಹೊರಬಿದ್ದಿವೆ. ಈತ 2020ರಲ್ಲಿ ಅಮೇರಿಕ ನಡೆಸಿದ ಡ್ರೋನ್‌ ದಾಳಿಯಲ್ಲಿ ಸಾವನ್ನಪ್ಪಿದ್ದ ಇರಾನಿನ ಮಿಲಿಟರಿ ಕಮಾಂಡರ್‌ ಖಾಸಿಮ್‌ ಸುಲೈಮನಿ ಹತ್ಯೆಗೆ ಸೇಡು ತೀರಿಸಿಕೊಳ್ಳಲು ಪ್ರಯತ್ನಿಸುತ್ತಿದ್ದ ಎಂಬ ಆರೋಪಗಳು ಕೇಳಿಬಂದಿವೆ.

ಜೊತೆಗೆ ಟ್ರಂಪ್‌ ಪುತ್ರಿ ಇವಾಂಕಾ ಟ್ರಂಪ್ ಅವರ ಫ್ಲೋರಿಡಾ ನಿವಾಸದ ನೀಲನಕ್ಷೆಯನ್ನು ಆರೋಪಿ ಹೊಂದಿದ್ದ. ‘ನಿಮ್ಮ ಅರಮನೆಗಳು ಅಥವಾ ರಹಸ್ಯ ಸೇವೆಗಳು ನಿಮ್ಮನ್ನು ರಕ್ಷಿಸುವುದಿಲ್ಲ’ ಎಂದು ಅಮೆರಿಕನ್ನರಿಗೆ ಎಚ್ಚರಿಕೆ ನೀಡುವ ಆನ್‌ಲೈನ್ ಬೆದರಿಕೆಗಳನ್ನು ಪೋಸ್ಟ್ ಮಾಡಿದ್ದ. ‘ಟ್ರಂಪ್ ನಮ್ಮ ಮನೆಯನ್ನು ಸುಟ್ಟುಹಾಕಿದ ರೀತಿಯಲ್ಲಿಯೇ ಅವರ ಮನೆಯನ್ನು ಸುಟ್ಟುಹಾಕಲು’ ಎಂದು ಬೆದರಿಕೆ ಹಾಕಿದ್ದ. ಇವಾಂಕಾ ಟ್ರಂಪ್ ಅವರನ್ನು ಕೊಲ್ಲುವ ಬಗ್ಗೆ ಅಲ್-ಸಾದಿ ಪದೇ ಪದೇ ಮಾತನಾಡಿದ್ದಾನೆ ಎಂದು ಇರಾಕಿನ ಮಾಜಿ ರಾಜತಾಂತ್ರಿಕ ಎಂಟಿಫಾದ್ ಕಾನ್ಬರ್ ತಿಳಿಸಿದ್ದಾರೆ.

ಈತ ಯುರೋಪ್ ಮತ್ತು ಉತ್ತರ ಅಮೆರಿಕಾದಾದ್ಯಂತ 18 ದಾಳಿಗಳು ಮತ್ತು ದಾಳಿ ಪ್ರಯತ್ನಗಳಲ್ಲಿ ಭಾಗಿಯಾಗಿದ್ದಾನೆ ಎಂದು ಅಧಿಕಾರಿಗಳು ಆರೋಪಿಸಿದ್ದಾರೆ, ಇದರಲ್ಲಿ ಫೈರ್‌ ಬಾಂಬ್ ದಾಳಿ, ಗುಂಡಿನ ದಾಳಿ, ಯಹೂದಿ ಸ್ಥಳಗಳು ಮತ್ತು ಅಮೆರಿಕನ್ ರಾಜತಾಂತ್ರಿಕ ಸೌಲಭ್ಯಗಳನ್ನು ಗುರಿಯಾಗಿಸಿಕೊಂಡು ನಡೆದ ದಾಳಿಗಳು ಸೇರಿವೆ

By thebigbulletin.com - 23-05-2026


Ads in Post