Search


ಹಿಂದೂ ಧರ್ಮ ನೊಂದಣಿಯಾಗಿಲ್ಲ ಎನ್ನುವುದು ಹಿಂದೂ ಧರ್ಮಕ್ಕೆ ಮೋಹನ್ ಭಾಗವತ್ ಮಾಡಿದ ಅವಮಾನವಲ್ಲವೇ.

'ಹಿಂದೂ ಧರ್ಮ ನೊಂದಣಿಯಾಗಿಲ್ಲ' ಎನ್ನುವುದು ಹಿಂದೂ ಧರ್ಮಕ್ಕೆ ಮೋಹನ್ ಭಾಗವತ್ ಮಾಡಿದ ಅವಮಾನವಲ್ಲವೇ ?

ಆರ್ ಎಸ್ ಎಸ್ (ರಾಷ್ಟ್ರೀಯ ಸ್ವಯಂ ಸೇವಕ ಸಂಘ)ವನ್ನು ನೊಂದಣಿ ಮಾಡಿ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆಯವರು ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಗೆ ಪತ್ರ ಬರೆಯುತ್ತಿದ್ದಂತೆ, ಮೋಹನ್ ಭಾಗವತ್ ವಿಚಿತ್ರ ಉತ್ತರವೊಂದನ್ನು ನೀಡಿದ್ದಾರೆ. "ಹಿಂದೂ ಧರ್ಮ ನೊಂದವಣಿಯಾಗಿದೆಯೇ ? ಅಂತೆಯೇ ಆರ್ ಎಸ್ ಎಸ್ ನೊಂದಣಿ ಅಗತ್ಯವಿಲ್ಲ" ಎಂದು ಮೋಹನ್ ಭಾಗವತ್ ಹೇಳಿದ್ದಾರೆ.

ಮೋಹನ್ ಭಾಗವತ್ ಗೆ ಹಿಂದೂ ಧರ್ಮ ಮತ್ತು ದೇಶದ ಸಂವಿಧಾನದ ಬಗ್ಗೆ ಕನಿಷ್ಠ ಅರಿವೂ ಇಲ್ಲ ಎಂಬುದು ಅವರ ಹೇಳಿಕೆಯಿಂದ ಸ್ಪಷ್ಟವಾಗುತ್ತದೆ. ಹಿಂದೂ ಧರ್ಮವು ಸಂವಿಧಾನದ ಮಾನ್ಯತೆ ಪಡೆದಿದೆ. ಸಂವಿಧಾನದ ಮಾನ್ಯತೆ ಪಡೆದ ಯಾವುದೇ ಧರ್ಮವೂ ಪ್ರತ್ಯೇಕ ನೊಂದಣಿ ಅಗತ್ಯವಿಲ್ಲ.‌ ಸಂವಿಧಾನವೇ ಈ ನೆಲದಲ್ಲಿ ಪರಮೊಚ್ಚವಾಗಿರುವುದರಿಂದ, ಅಲ್ಲಿ ಮಾನ್ಯತೆ ಪಡೆದ ಬಳಿಕ ರಿಜಿಸ್ಟ್ರೇಶನ್ ಮಾಡಬೇಕಿಲ್ಲ ಎಂಬುದು ಕಾಮನ್ ಸೆನ್ಸ್.  ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಸಿಖ್, ಬೌದ್ದ ಧರ್ಮಗಳು ಸಂವಿಧಾನದ ಮಾನ್ಯತೆ ಪಡೆದಿವೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘ ಒಂದು ಸರ್ಕಾರೇತರ ಸಂಘಟನೆಯಾಗಿದ್ದು ಯಾವುದೇ ಸಾಂವಿಧಾನಿಕ ಮಾನ್ಯತೆ ಹೊಂದಿಲ್ಲ. ಹಾಗಾಗಿ ಸರ್ಕಾರೇತರ ಲಾಭದಾಯಕ, ದೇಶದೆಲ್ಲೆಡೆ ಆಸ್ತಿ ಹೊಂದಿರುವ ಆರ್ ಎಸ್ ಎಸ್ ಸಂಘಟನೆಯ ನೊಂದಣಿ ಕಡ್ಡಾಯವಾಗಿದೆ.

'ಹಿಂದೂ ಧರ್ಮವೂ ನೊಂದಣಿಯಾಗಿಲ್ಲ' ಎಂದು ಮೋಹನ್ ಭಾಗವತ್ ಹೇಳುವುದು ಕೋಟ್ಯಾಂತರ ಹಿಂದೂ ಧರ್ಮಿಯರಿಗೆ ಮಾಡುವ ಅವಮಾನವಾಗುತ್ತದೆ. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಸಿಖ್, ಬೌದ್ದ ಎಂಬ ಪದ ಸಂವಿಧಾನದಲ್ಲೇ ಹಲವು ಬಾರಿ ಉಲ್ಲೇಖಗೊಂಡು, ಪ್ರತ್ಯೇಕ ಕಾಯ್ದೆಗಳಿಗೆ ಮಾನ್ಯತೆ ನೀಡಿದೆ.

ಹಿಂದೂ ಮ್ಯಾರೇಜ್ ಅ್ಯಕ್ಟ್, ಕ್ರಿಶ್ಚಿಯನ್ ಮ್ಯಾರೇಜ್ ಅ್ಯಕ್ಟ್, ಮುಸ್ಲಿಂ ಮ್ಯಾರೇಜ್ ಅ್ಯಕ್ಟ್ ಸೇರಿದಂತೆ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಬೌದ್ದ, ಸಿಖ್ ಧರ್ಮೀಯರ ಪ್ರತ್ಯೇಕ ಕಾಯ್ದೆಗಳು ಸಂವಿಧಾನದಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಆಸ್ತಿ ಹಕ್ಕುಗಳು, ವೈಯಕ್ತಿಕ ಕಾನೂನುಗಳು, ಆರಾಧನೆಯ ಹಕ್ಕು, ಪೂಜೆ, ಪ್ರಾರ್ಥನೆಯ ಹಕ್ಕುಗಳು, ದೇವಸ್ಥಾನ/ಮಸೀದಿ/ಚರ್ಚ್ ಹಕ್ಕುಗಳು ಪ್ರತ್ಯೇಕ ಪ್ರತ್ಯೇಕ ಕಾನೂನಿನ ಮೂಲಕ ಸಂವಿದಾನಿಕ‌ ಮಾನ್ಯತೆ ಪಡೆದಿವೆ.

'ಧರ್ಮಗಳು ರಿಜಿಸ್ಟರ್ ಆಗದೆಯೇ ಕಾರ್ಯನಿರ್ವಹಿಸುತ್ತಿದೆ. ಹಾಗಾಗಿ ಆರ್ ಎಸ್ ಎಸ್ ಸಂಘಟನೆಯನ್ನೂ ನೊಂದಾಯಿಸದೇ ನಮ್ಮ ಪಾಡಿಗೆ ನಾವು ಕೆಲಸ‌ ಮಾಡುತ್ತೇವೆ' ಎನ್ನುವುದು ಮೋಹನ್ ಭಾಗವತ್ ವಾದ ! ಹೀಗೆ ಮಾನ್ಯತೆ ಪಡೆಯದೇ ಅಥವಾ ರಿಜಿಸ್ಟರ್ ಆಗದೇ ಧರ್ಮಗಳು ಕಾರ್ಯನಿರ್ವಹಿಸುವುದಾದರೆ ಊರಿಗೊಂದು ಧರ್ಮಗಳು ಹುಟ್ಟಿಕೊಳ್ಳುತ್ತಿದ್ದವು. ಉದಾಹರಣೆಗೆ : ಲಿಂಗಾಯತ ಪ್ರತ್ಯೇಕ ಧರ್ಮ‌ ಮಾಡಬೇಕು ಎಂದು ರಾಜ್ಯ ಸರ್ಕಾರವೇ ಸಚಿವ ಸಂಪುಟದಲ್ಲಿ ನಿರ್ಣಯ ತೆಗೆದುಕೊಂಡು, ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದರೂ ಕೇಂದ್ರ ಸರ್ಕಾರ ಇನ್ನೂ ಕೂಡಾ ಲಿಂಗಾಯತ ಪ್ರತ್ಯೇಕ‌ ಧರ್ಮ ಎಂದು ಅಧಿಸೂಚನೆ ಹೊರಡಿಸಿಲ್ಲ. ಹೀಗೆ ಅಧಿಸೂಚನೆ ಹೊರಡಿಸುವುದಕ್ಕೂ ಮೊದಲು ಹತ್ತಾರು ಪ್ರಕ್ರಿಯೆಗಳಿವೆ. ಧರ್ಮವೊಂದರ ಹುಟ್ಟಿನ ಬಗ್ಗೆ ರಾಜ್ಯದ ಶಿಫಾರಸ್ಸು, ಕೇಂದ್ರದ ಅಧಿಸೂಚನೆಗಿಂತ ದೊಡ್ಡ ರಿಜಿಸ್ಟ್ರೇಶನ್ ಪ್ರಕ್ರಿಯೆ ಏನಿದೆ ? ಹೊಸದಾಗಿ ಹುಟ್ಟಿಕೊಂಡ ಧರ್ಮ ಹಾಗೆ ಅಧಿಸೂಚನೆಗೊಂಡ ಬಳಿಕ ಸಂವಿಧಾನದಲ್ಲಿ ಮಾನ್ಯತೆ ಪಡೆಯುತ್ತದೆ. ಒಂದು ಧರ್ಮವನ್ನು ಸ್ವತಂತ್ರ ಧರ್ಮ ಎಂದು ಘೋಷಿಸಲು ಘನ ರಾಜ್ಯ ಸರ್ಕಾರಕ್ಕೆ ಸಾಧ್ಯವಿಲ್ಲದೇ ಇರುವಾಗ ನಮ್ಮದು 'ಸ್ವತಂತ್ರ ಸಂಘಟನೆ' ಎಂದು ಘೋಷಿಸಿಕೊಳ್ಳಲು ಆರ್ ಎಸ್ ಎಸ್ ಗೆ ಹೇಗೆ ಸಾದ್ಯ ?

ಭಾರತದಲ್ಲಿ ಯಾರಾದರೂ ನಾಳೆ ಬೆಳಿಗ್ಗೆ ಎದ್ದು "ನಾನು ಹೊಸ ಧರ್ಮ ಸ್ಥಾಪಿಸಿದ್ದೇನೆ" ಎಂದು ಘೋಷಿಸಿದರೆ ಅದು ಕಾನೂನುಬದ್ಧ ಧರ್ಮವಾಗುವುದಿಲ್ಲ. ಜನಗಣತಿ, ಸರ್ಕಾರಿ ದಾಖಲೆಗಳು, ನ್ಯಾಯಾಂಗ ವ್ಯಾಖ್ಯಾನಗಳು, ಆಡಳಿತಾತ್ಮಕ ನಿರ್ಧಾರಗಳು, ಕಾನೂನುಗಳು ಮತ್ತು ರಾಜ್ಯದ ಅಧಿಕೃತ ಗುರುತಿಸುವಿಕೆಗಳ ಮೂಲಕವೇ ಅಂತಹ ಸ್ಥಾನಮಾನ ರೂಪುಗೊಳ್ಳುತ್ತದೆ.

ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಬೌದ್ದ, ಸಿಖ್ ಇತ್ಯಾದಿ ಧರ್ಮಗಳು ಸಂವಿಧಾನ ಬರೆಯುವಾಗಲೇ ಮಾನ್ಯತೆ ಪಡೆದ ಧರ್ಮವಾಗಿದೆ. ಸಂವಿಧಾನದಲ್ಲಿ ಎಲ್ಲರಿಗೂ ಧಾರ್ಮಿಕ ಸ್ವಾತಂತ್ರ್ಯವನ್ನು ಆರ್ಟಿಕಲ್  25 ನೀಡುತ್ತದೆ. ಈ ಅನುಚ್ಛೇದಗಳು ಧರ್ಮಗಳ ಅಸ್ತಿತ್ವವನ್ನು ಗುರುತಿಸಿಯೇ ನೀಡುತ್ತದೆ. ಯಾವುದೇ ಧರ್ಮವನ್ನು ವೈಯಕ್ತಿಕವಾಗಿ ಆಚರಿಸುವ ಸಂಪೂರ್ಣ ಸ್ವಾತಂತ್ರ್ಯ ದೇಶದ ನಾಗರಿಕರಿಗಿದ್ದರೂ ಅಂತಹ ನಾಗರಿಕ ಸಂವಿಧಾನ ಗುರುತಿಸಿದ ಧರ್ಮಗಳ ಜೊತೆ ಮಾತ್ರ ಸಾರ್ವಜನಿಕವಾಗಿ ವ್ಯವಹರಿಸಬೇಕಾಗುತ್ತದೆ.‌ ಸಂವಿಧಾನ ಗುರುತಿಸಿದ ಅಧಿಸೂಚಿತ ಧರ್ಮವನ್ನು ಮಾತ್ರ ಆತ ದಾಖಲೆಗಳಲ್ಲಿ ಉಲ್ಲೇಖಿಸಬೇಕಾಗುತ್ತದೆ. ಇಂತಹ ಕನಿಷ್ಠ ಜ್ಞಾನ ಇಲ್ಲದ ಮೋಹನ್ ಭಾಗವತ್ ಆರ್ ಎಸ್ ಎಸ್ ನ ಮುಖ್ಯಸ್ಥರು ಎಂದರೆ, ಇನ್ನು ಅದರ ಕಾರ್ಯಕರ್ತರ ಬುದ್ದಿಮಟ್ಟ ಯಾವ ರೀತಿಯಾದ್ದಾಗಿರಬಹುದು ಎಂಬುದು ಸ್ಪಷ್ಟ

- ನವೀನ್ ಸೂರಿಂಜೆ

ಅವರ ಫೇಸ್ಬುಕ್ ಪೇಜ್ ನಲ್ಲಿ ಪೋಸ್ಟ್ ಮಾಡಿರುವ ಬರಹವಿದು .

By thebigbulletin.com - 16-06-2026


Ads in Post