ಬೆಂಗಳೂರು: ಹಿಂದೂಳಿದ ವರ್ಗಗಳ ಹಾಗೂ ಶೋಷಿತ ವರ್ಗದ ದನಿಯಾಗಿದ್ದ, ಮಾಜಿ ಸಿಎಂ ದೇವರಾಜ್ ಅರಸು ಅವರ ಪುಣ್ಯಸ್ಮರಣೆ ಹಿನ್ನಲೆಯಲ್ಲಿ, ರಾಜ್ಯ ಸರ್ಕಾರ ಪತ್ರಿಕೆಗಳಿಗೆ ನೀಡಿದ್ದ ಜಾಹೀರಾತು ವಿವಾದಕ್ಕೆ ಕಾರಣವಾಗಿದೆ. ಕಳೆದ ವರ್ಷ ಪ್ರಕಟವಾಗಿದ್ದ ದಿನ ಪತ್ರಿಕೆಯಲ್ಲಿ ಮುಖ್ಯಮಂತ್ರಿಗಳ ಭಾವಚಿತ್ರ ಜೊತೆಗೆ ಉಪ ಮುಖ್ಯಮಂತ್ರಿಗಳ ಪೋಟೊವನ್ನು ಪತ್ರಿಕೆಯಲ್ಲಿ ಪ್ರಕಟಿಸಲಾಗಿತ್ತು, ಆದರೆ ಈ ಬಾರಿ ಪ್ರಕಟವಾಗಿರುವ ಪತ್ರಿಕೆಯಲ್ಲಿ ಕೇವಲ ಸಿಎಂ ಪೋಟೋಗೆ ಮಾತ್ರ ಅವಕಾಶ ನೀಡಲಾಗಿದ್ದು, ಡಿಸಿಎಂ ಪೋಟೋವನ್ನ ಕಡೆಗಣಿಸಲಾಗಿದೆ. ಇದಕ್ಕೆ ಜೆಡಿಎಸ್ ಪಕ್ಷ ಖಾರವಾಗಿ ಪ್ರತಿಕ್ರಿಯೆ ನೀಡಿದ್ದು. ದಲಿತ ನಾಯಕರಿಗೆ ಅವಮಾನವಾಗಿದೆ ಎಂದು ಆರೋಪಿಸಿದ್ದಾರೆ.
ಕರ್ನಾಟಕದಲ್ಲಿ ಅಭಿವೃದ್ದಿಯ ಹರಿಕಾರ ಎಂದು ಹೆಸರಾಗಿದ್ದ ದೇವರಾಜ್ ಅರಸು ಅವರ 44ನೇ ಪುಣ್ಯಸ್ಮರಣೆ ನಿಮಿತ್ತ, ರಾಜ್ಯ ಸರ್ಕಾರ ದಿನ ಪತ್ರಿಕೆಗಳಿಗೆ ಜಾಹೀರಾತು ನೀಡಿತ್ತು, ಈ ಜಾಹೀರಾತಿನಲ್ಲಿ ಮುಖ್ಯಮಂತ್ರಿ ಡಿಕೆ. ಶಿವಕುಮಾರ್ ಅವರ ಪೋಟೋವನ್ನ ಪ್ರಕಟಿಸಿದ್ದು, ದಲಿತ ನಾಯಕ, ನೂತನ ಉಪ ಮುಖ್ಯಮಂತ್ರಿಯಾಗಿರುವ ಪರಮೇಶ್ವರ್ ಅವರ ಪೋಟೋ ಪ್ರಕಟಿಸಿಲ್ಲ, ಆದರೆ ಕಳೆದ ವರ್ಷ ಇದೇ ಸಮಯದಲ್ಲಿ ರಾಜ್ಯ ಸರ್ಕಾರ ಪ್ರಕಟಿಸಿದ್ದ ಜಾಹೀರಾತಿನಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆಶಿ ಅವರಿಬ್ಬರ ಪೋಟೋವನ್ನು ಪ್ರಕಟಿಸಲಾಗಿತ್ತು,
ಇದೀಗ ಈ ಜಾಹೀರಾತನ್ನೇ ಇಟ್ಟುಕೊಂಡು ಜನತಾ ದಳ ಪಕ್ಷ ಕಾಂಗ್ರೆಸ್ ವಿರುದ್ದ ಆಕ್ರೋಶ ವ್ಯಕ್ತಪಡಿಸಿ, ಟ್ವಿಟ್ವೊಂದನ್ನ ಮಾಡಿದೆ, ಇದರಲ್ಲಿ " ದೇವರಾಜ್ ಅರಸು ಅವರು ಹಿಂದುಳಿದ ಮತ್ತು ದಲಿತ ವರ್ಗಗಳ ಕಲ್ಯಾಣಕ್ಕಾಗಿ ಬದುಕಿದ್ದರು, ಆದರೆ ಅವರ ಕಾರ್ಯಕ್ರಮದ ಜಾಹೀರಾತಿನಲ್ಲಿ ಹಾಲಿ ಉಪ ಮುಖ್ಯಮಂತ್ರಿ ಪರಮೇಶ್ವರ್ ಅವರ ಭಾವಚಿತ್ರವನ್ನ ಕೈಬಿಟ್ಟು, ಕೇವಲ ಮುಖ್ಯಮಂತ್ರಿಗಳ ಏಕಸ್ವಾಮ್ಯವನ್ನ ಪ್ರದರ್ಶಿಸಿದ್ದಾರೆ.
2025ರಲ್ಲಿ ಡಿಕೆಶಿವರಿಗೊಂದು ನ್ಯಾಯ, 2026ರಲ್ಲಿ ದಲಿತರಿಗೊಂದು ನ್ಯಾಯವೇ? ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಾಹೀರಾತಿನಲ್ಲಿ ದಲಿಯ ನಾಯಕರಿಗೆ ಈ ಮಟ್ಟದ ನಿರ್ಲಕ್ಷವೇಕೆ? ದಲಿತರನ್ನ ಕೇವಲ ವೋಟ್ ಬ್ಯಾಂಕ್ ಮಾಡಿಕೊಂಡ ಕಾಂಗ್ರೆಸ್ ಅಹಂಕಾರಕ್ಕೆ ಜನರೇ ತಕ್ಕ ಪಾಠ ಕಲಿಸಿದ್ದಾರೆ ಎಂದು ಜನತಾ ದಳ ತಮ್ಮ ಎಕ್ಷ್ ಖಾತೆಯಲ್ಲಿ ಪೋಸ್ಟ್ವೊಂದನ್ನ ಹಾಕಿ, ಆಕ್ರೋಶ ವ್ಯಕ್ತಪಡಿಸಿದೆ.