ಬೆಂಗಳೂರು: ಬಿಡದಿ ಟೌನ್‌ಶಿಪ್ ವಿಚಾರವಾಗಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಪ್ರತಿಕ್ರಿಯೆ ನೀಡಿದ್ದು "ನಾವು ಭೂಮಿ ಕೊಡಿ ಎಂದು ರೈತರಿಗೆ ಬಲವಂತ ಮಾಡಲ್ಲ ನಾವು ಯಾವತ್ತೂ ಬಲವಂತವಾಗಿ ರೈತರ ಭೂಮಿಯನ್ನ ಪಡೆದಿಲ್ಲ ಎಂದು ಹೇಳಿದರು.
ನಗರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಚಿವರರು, ʻಭೂಸ್ವಾಧೀನ ನಿಯಮಗಳು ಬಹಳ ಸ್ಪಷ್ಟವಾಗಿವೆ. ಯಾರು ಕೂಡ ಒತ್ತಾಯಪೂರ್ವಕವಾಗಿ ಭೂಮಿ ತೆಗೆದುಕೊಳ್ಳಲು ಆಗಲ್ಲ. ರೈತರು ಸ್ವ ಇಚ್ಛೆಯಿಂದ ಎಲ್ಲಿ ಕೊಡುತ್ತಾರೆ ಅದನ್ನು ಪರಿಗಣನೆ ಮಾಡ್ತೀವಿ. ಯಾರು ಸ್ವ ಇಚ್ಛೆಯಿಂದ ಭೂಮಿ ಕೊಡುವುದಿಲ್ಲವೋ ಅಲ್ಲಿ ಯೋಜನೆ ಆಗಲ್ಲ. 90 ರಿಂದ 95% ವಿರೋಧ ಆಗಿದ್ರೆ ಈ ನಿಯಮ ಅನ್ವಯ ಆಗುತ್ತೆ ಎಂದು ಸ್ಪಷ್ಟನೆ ನೀಡಿದ್ದಾರೆ.
ದೇವನಹಳ್ಳಿ, ಚನ್ನರಾಯಪಟ್ಟಣದ ಬಳಿ ನಾವು ಭೂಸ್ವಾಧೀನ ಕೈಬಿಟ್ಟಿಲ್ವಾ? ಕೃಷಿ ವಲಯ ಅಂತಾನೇ ಘೋಷಣೆ ಮಾಡಿದ್ದೇವೆ. ಕೆಲವರು ಇಂಡಸ್ಟ್ರಿ ಮಾಡಬೇಕು ಅಂತ ಈಗ ಬಂದಿದ್ದರು. ಅದನ್ನು ಪರಿಶೀಲನೆ ಮಾಡಿ ಒಂದು ತೀರ್ಮಾನಕ್ಕೆ ಬರುತ್ತೇವೆ ಎಂದಿದ್ದಾರೆ.
ಇನ್ನು ಬಿಡದಿ ಟೌನ್‌ಶಿಪ್ ವಿಚಾರವಾಗಿ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಮತ್ತು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ನಡುವೆ ನಡೆಯುತ್ತಿರುವ ವಾಗ್ಯುದ್ದ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು. ಕಳೆದ ಶನಿವಾರ ಬಹಿರಂಗ ಚರ್ಚೆಗೆ ಆಹ್ವಾನಿಸಿದ್ದ ಹೆಚ್‌ಡಿಕೆ, ಬೈರಮಂಗಲದಲ್ಲಿ ಡಿಕೆ ಶಿವಕುಮಾರ್ ಅವರ ಆಗಮನಕ್ಕಾಗಿ ಕಾಯುತ್ತಿದ್ದರು, ಆದರೆ ಡಿಕೆ ಶಿವಕುಮಾರ್ ಈ ಚರ್ಚೆಗೆ ಹಾಜರಾಗಿರಲಿಲ್ಲ.