Search


ಮತ್ತೆ ಶುರು ಮಾಡೋಣ್ವ ಎಂದ ಕಿಚ್ಚ ; ಮತ್ತೆ ಬರ್ತಿದೆ ಬಿಗ್‌ಬಾಸ್ ಸೀಸನ್ 13

ಬೆಂಗಳೂರು: ಬಿಗ್‌ಬಾಸ್ ಕನ್ನಡ ಅಭಿಮಾನಿಗಳಿಗೆ ಗುಡ್‌ನ್ಯೂಸ್ ಸಿಕ್ಕಿದೆ. ಬಹುನಿರೀಕ್ಷಿತ ಬಿಗ್‌ಬಾಸ್ ಕನ್ನಡ ಸೀಸನ್‌ 13ಕ್ಕೆ ಸಿದ್ಧತೆ ಆರಂಭವಾಗಿದ್ದು, ಕಾರ್ಯಕ್ರಮದ ನಿರೂಪಕ ಕಿಚ್ಚ ಸುದೀಪ್ ಅವರ ಮೊದಲ ಪ್ರೋಮೋ ಬಿಡುಗಡೆಯಾಗಿದೆ. ಪ್ರೋಮೋದಲ್ಲಿ ಸುದೀಪ್ ಬಿಗ್‌ಬಾಸ್ ಮನೆಯ ಬಾಗಿಲು ತೆರೆಯುವ ಮೂಲಕ ಹೊಸ ಸೀಸನ್‌ಗೆ ಎಂಟ್ರಿ ಕೊಟ್ಟಿದ್ದಾರೆ.

ಮತ್ತೆ ಶುರು ಮಾಡೋಣ್ವಎಂದ ಕಿಚ್ಚ

ಹೊಸ ಪ್ರೋಮೋದ ಕೊನೆಯಲ್ಲಿ ಸುದೀಪ್ ಅವರ “ಮತ್ತೆ ಶುರು ಮಾಡೋಣ್ವ” ಎಂಬ ಮಾತು ಬಿಗ್‌ಬಾಸ್‌ನ ಹೊಸ ಅಧ್ಯಾಯಕ್ಕೆ ಸೂಚನೆಯಂತಿದೆ. ಇದೀಗ ಪ್ರೋಮೋ ಬಿಡುಗಡೆಯಾಗಿರುವ ಬೆನ್ನಲ್ಲೇ ಸೀಸನ್‌ 13 ಯಾವಾಗ ಆರಂಭವಾಗಲಿದೆ ಮತ್ತು ಮೊದಲ ದಿನ ಬಿಗ್‌ಬಾಸ್ ಮನೆಗೆ ಯಾರೆಲ್ಲಾ ಎಂಟ್ರಿ ಕೊಡಲಿದ್ದಾರೆ ಎಂಬ ಪ್ರಶ್ನೆಗಳು ಅಭಿಮಾನಿಗಳಲ್ಲಿ ಹೆಚ್ಚಾಗಿವೆ. ಒಟ್ಟಿನಲ್ಲಿ, ಕಿಚ್ಚ ಸುದೀಪ್ ಅವರ ಮರಳುವಿಕೆಯೊಂದಿಗೆ ಬಿಗ್‌ಬಾಸ್ ಕನ್ನಡ ಸೀಸನ್‌ 13 ಬಗ್ಗೆ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ. ಅಧಿಕೃತವಾಗಿ ಸ್ಪರ್ಧಿಗಳ ಪಟ್ಟಿ ಹಾಗೂ ಪ್ರಸಾರ ದಿನಾಂಕ ಹೊರಬಂದ ಬಳಿಕ ಕಾರ್ಯಕ್ರಮದ ಮೇಲಿನ ಕುತೂಹಲ ಇನ್ನಷ್ಟು ಜೋರಾಗುವ ಸಾಧ್ಯತೆಯಿದೆ

ಬಿಗ್‌ಬಾಸ್ ಕನ್ನಡ ಕಾರ್ಯಕ್ರಮಕ್ಕೆ ಸುದೀಪ್ ಅವರ ನಿರೂಪಣೆ ಪ್ರಮುಖ ಆಕರ್ಷಣೆಯಾಗಿದೆ. ಸ್ಪರ್ಧಿಗಳ ಜೊತೆಗಿನ ಮಾತುಕತೆ, ವಾರಾಂತ್ಯದ ಪಂಚಾಯಿತಿ ಹಾಗೂ ತಮ್ಮದೇ ಶೈಲಿಯ ಪಂಚ್‌ಗಳ ಮೂಲಕ ಸುದೀಪ್ ಹಲವು ವರ್ಷಗಳಿಂದ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಹೀಗಾಗಿ ಹೊಸ ಸೀಸನ್‌ನ ಮೊದಲ ಪ್ರೋಮೋದಲ್ಲೇ ಸುದೀಪ್ ಕಾಣಿಸಿಕೊಂಡಿರುವುದು ಬಿಗ್‌ಬಾಸ್ ಅಭಿಮಾನಿಗಳಿಗೆ ಮತ್ತಷ್ಟು ಖುಷಿ ನೀಡಿದೆ.

ಸೀಸನ್‌ 13ರಲ್ಲಿ ಯಾರೆಲ್ಲಾ?

ಹೊಸ ಸೀಸನ್‌ನಲ್ಲಿ ಯಾರೆಲ್ಲಾ ಸ್ಪರ್ಧಿಗಳಾಗಿ ಬಿಗ್‌ಬಾಸ್ ಮನೆಗೆ ಪ್ರವೇಶಿಸಲಿದ್ದಾರೆ ಎಂಬುದು ಸದ್ಯದ ದೊಡ್ಡ ಕುತೂಹಲ. ಸಿನಿಮಾ, ಕಿರುತೆರೆ ಹಾಗೂ ಸೋಶಿಯಲ್ ಮೀಡಿಯಾ ಕ್ಷೇತ್ರದ ಹಲವು ಹೆಸರುಗಳು ಚರ್ಚೆಗೆ ಬರುತ್ತಿದ್ದರೂ, ಅಧಿಕೃತ ಘೋಷಣೆ ಆಗುವವರೆಗೆ ಯಾವುದನ್ನೂ ಖಚಿತ ಎಂದು ಹೇಳಲು ಸಾಧ್ಯವಿಲ್ಲ. ಈ ಬಾರಿ ಬಿಗ್‌ಬಾಸ್ ಮನೆಯಲ್ಲಿ ಯಾವ ರೀತಿಯ ಟಾಸ್ಕ್‌ಗಳು ಇರಲಿವೆ, ಸ್ಪರ್ಧಿಗಳ ಆಯ್ಕೆ ಹೇಗಿರಲಿದೆ ಮತ್ತು ಮನೆಗೆ ಯಾವ ಹೊಸ ರೂಪ ನೀಡಲಾಗಿದೆ ಎಂಬುದನ್ನು ತಿಳಿದುಕೊಳ್ಳಲು ವೀಕ್ಷಕರು ಕಾತರದಿಂದ ಕಾಯುತ್ತಿದ್ದಾರೆ.

By Ravikumar - 02-08-2026


Ads in Post