Search


ನೆಹರು ದಾಖಲೆ ಸರಿಗಟ್ಟಿ ನೂತನ ದಾಖಲೆ ನಿರ್ಮಿಸಿದ ಮೋದಿ : ಏನು ಗೊತ್ತಾ..?

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇದೇ ಜೂನ್‌ 10ನೇ ತಾರೀಖಿಗೆ ವಿಶೇಷ ಸಾಧನೆಯೊಂದನ್ನ ಮಾಡುತ್ತಿದ್ದು, ಪ್ರಜಾ ಪ್ರಭುತ್ವ ವ್ಯವಸ್ಥೆಯಲ್ಲಿ ಅತಿ ಹೆಚ್ಚು ಕಾಲ ಆಡಳಿತ ಮಾಡಿದ ದೇಶದ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗುತ್ತಿದ್ದಾರೆ. ಮಾಜಿ ಪ್ರಧಾನಿ ಜವಹರ್‌ಲಾಲ್‌ ನೆಹರು ಅವರ ಈ ದಾಖಲೆಯನ್ನ ಮೋದಿ ಮುರಿಯುತ್ತಿದ್ದು,  ಚುನಾವಣೆಯಲ್ಲಿ ಆಯ್ಕೆಯಾಗಿ ಅತಿ ಹೆಚ್ಚು ಕಾಲ ಪ್ರಧಾನಿಯಾದ ಹೆಗ್ಗಳಿಕೆ ಮೋದಿಗೆ ಸಿಗುತ್ತಿದೆ. 

1951-52 ರ ದೇಶದ ಮೊದಲ ಸಾರ್ವತ್ರಿಕ ಚುನಾವಣೆಗೂ ಮುನ್ನ ಇದ್ದ ಮಧ್ಯಂತರ ಅವಧಿಯನ್ನು ಹೊರತುಪಡಿಸಿ, ಕೇವಲ ಚುನಾಯಿತ ಸರ್ಕಾರದ ದಿನಗಳನ್ನು ಲೆಕ್ಕ ಹಾಕಿದಾಗ ಪ್ರಧಾನಿ ಮೋದಿ ಅವರು ಕಾಂಗ್ರೆಸ್ ದಿಗಜ, ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ ಸುದೀರ್ಘ ದಾಖಲೆಯನ್ನು ಮುರಿಯಲಿದ್ದಾರೆ. 2014 ರ ಮೇ 26 ರಂದು ದೇಶದ ಪ್ರಧಾನಿಯಾಗಿ ಮೊದಲ ಬಾರಿಗೆ ಪ್ರಮಾಣ ವಚನ ಸ್ವೀಕರಿಸಿದ ನರೇಂದ್ರ ಮೋದಿ ಅವರು, 2026 ರ ಜೂನ್ 10ರ ವೇಳೆಗೆ ಸತತವಾಗಿ 4,399 ದಿನಗಳ ಕಾಲ ಅಧಿಕಾರ ಪೂರೈಸಿದಂತಾಗುತ್ತದೆ.

ಜವಾಹರಲಾಲ್ ನೆಹರು ಅವರು ದೇಶದ ಮೊದಲ ಸಾರ್ವತ್ರಿಕ ಚುನಾವಣೆಯ ನಂತರ ಅಂದರೆ, 1952 ರ ಮೇ 13 ರಿಂದ 1964 ರ ಮೇ 27ರಂದು ನಿಧನರಾಗುವವರೆಗೂ ಚುನಾಯಿತ ಪ್ರಧಾನಿಯಾಗಿ ಒಟ್ಟು 4,398ದಿನಗಳ ಕಾಲ ಸೇವೆ ಸಲ್ಲಿಸಿದ್ದು ಎರಡನೇ ಸ್ಥಾನ ಪಡೆಯಲಿದ್ದಾರೆ.  ಇದೇ ಪಟ್ಟಿಯಲ್ಲಿ ನೆಹರೂ ಅವರ ಪುತ್ರಿ ಇಂದಿರಾ ಗಾಂಧಿ ಅವರು4077 ದಿನಗಳ ಕಾಲ (1966 ರಿಂದ 1977ರವರೆಗೆ) ಸತತ ಅಧಿಕಾರ ನಡೆಸಿ ಮೂರನೇ ಸ್ಥಾನದಲ್ಲಿದ್ದಾರೆ.

By Ravikumar - 04-06-2026


Ads in Post