Search


ಭಾರತಕ್ಕೆ ಪಾಠವಾಗಲಿದೆ ಮೊರಾಕ್ಕೋ ಫುಟ್‍ಬಾಲ್ ಕ್ರಾಂತಿ..!

ಹಾಗಂತ... ಇದು ಖಂಡಿತವಾಗಿಯೂ ಫುಟ್‍ಬಾಲ್ ಜಗತ್ತಿನ ಕಾಲ್ಪನಿಕ ಕಥೆಯಂತೂ ಅಲ್ಲವೇ ಅಲ್ಲ. ಬದಲಾಗಿ ಮತ್ತೊಂದು ಸಣ್ಣ ದೇಶದ ಫುಟ್‍ಬಾಲ್ ಆಟದ ಮಹೋನ್ನತ ಪರ್ವದ ನೈಜ ಚಿತ್ರಣ. ಒಬ್ಬ ರಾಜನ ದೂರದೃಷ್ಟಿಯ ಯೋಜನೆ. ಒಂದು ಖಡಕ್ ರಾಜಾಜ್ಞೆಯ ರಣಕಹಳೆ. ಯುವ ಫುಟ್‍ಬಾಲ್ ಆಟಗಾರರ ಅದಮ್ಯ ಚೇತನ. ಕೇವಲ 17 ವರ್ಷಗಳಲ್ಲಿ ಇಡೀ ದೇಶದ ಫುಟ್‍ಬಾಲ್ ಆಟದ ಹಣೆಬರಹವನ್ನೇ ಬದಲಾಯಿಸಿದ ಅಭೂತಪೂರ್ವ ಸಾಧನೆ. ತನ್ನ ಮಣ್ಣಿನ ಸಂಪತ್ತು ಮೈದಾನದಲ್ಲಿ ಚಿನ್ನವಾಗಿ ಬೆಳೆದ ರೋಚಕ ಇತಿಹಾಸದ ಕಥಾಹಂದರ...!

ಹೌದು, ತುಕ್ಕು ಹಿಡಿದಿದ್ದ ತನ್ನ ದೇಶದ ಫುಟ್‍ಬಾಲ್ ಎಂಬ ಹಳೆಯ ಇಂಜಿನ್‍ಗೆ, ನೈಸರ್ಗಿಕ ಸಂಪತ್ತನ್ನೇ ಇಂಧನವಾಗಿಸಿಕೊಂಡು, ಜಾಗತಿಕ ಫುಟ್‍ಬಾಲ್‍ನಲ್ಲಿ ಮಿಂಚಿನಂತೆ ಸಂಚರಿಸುತ್ತಿರುವ ಒಂದು ದೇಶದ ಫುಟ್‍ಬಾಲ್ ಪಯಣದ ಯಶೋಗಾಥೆ ಇದು. ಆಫ್ರಿಕಾ ಮಣ್ಣಿನ ಫಲವತ್ತತೆ ಮತ್ತು ಅರಬ್ಬರ ಶಕ್ತಿ, ಯುಕ್ತಿಯಿಂದ ಇಡೀ ಫುಟ್‍ಬಾಲ್ ಜಗತ್ತೇ ತನ್ನತ್ತ ತಿರುಗಿನೋಡುವಂತೆ ಮಾಡಿದ್ಧ ಕ್ರಾಂತಿಕಾರಿ ರಾಷ್ಟ್ರದ ವಿಸ್ಮಯಕಾರಿ ಫುಟ್‍ಬಾಲ್ ಚರಿತ್ರೆ..!

ಆ ದೇಶದ ಹೆಸರು ಮೊರಾಕ್ಕೋ..! 

ಉತ್ತರ ಆಫ್ರಿಕಾ ಖಂಡದ ತುತ್ತ ತುದಿಯಲ್ಲಿರುವ ಸಣ್ಣ ಅರಬ್ ರಾಷ್ಟ್ರ. ಇತಿಹಾಸದ ಪುರಾವೆಗಳ ಪ್ರಕಾರ ಪ್ರಾಚೀನ ಮೊರಾಕ್ಕೋದಲ್ಲಿ ಬರ್ಬರ್ ಎಂಬ ಬುಡಕಟ್ಟು ಜನಾಂಗದವರು ವಾಸ ಮಾಡುತ್ತಿದ್ದರು. ಆದ್ರೆ ಏಳನೇ ಶತಮಾನದಲ್ಲಿ ಮೊರಾÀಕ್ಕೋ ಸಂಪೂರ್ಣವಾಗಿ ಅರಬ್ಬರ ವಶವಾಗಿತ್ತು. ಕಾಲಕ್ರಮೇಣ ಬರ್ಬರ್ ಜನಾಂಗದ ಬಹತೇಕರು ಇಸ್ಲಾಂ ಧರ್ಮವನ್ನು ಒಪ್ಪಿಕೊಂಡು ಅರಬ್ಬರ ಜೊತೆ ಒಂದಾಗಿ ಬೆರೆತು ಹೋದ್ರು. ಇಂದಿಗೂ ಮೊರಾÀಕ್ಕೋದಲ್ಲಿ ಅರಬ್ಬರು ಮತ್ತು ಬರ್ಬರ್À ಜನಾಂಗದವರು ಒಟ್ಟಾಗಿ ದೇಶದ ಶಕ್ತಿಯಾಗಿ ಜೀವನ ಸಾಗಿಸುತ್ತಿದ್ದಾರೆ.

ಗದ್ದುಗೆಯಿಂದ ಗುಲಾಮಗಿರಿ.. ಸ್ವಾತಂತ್ರ್ಯವಿದ್ರೂ ರಾಜನೇ ಸರ್ವಾಧಿಕಾರಿ..! 

ಅಷ್ಟೇ ಅಲ್ಲ, ಒಂದು ಕಾಲದಲ್ಲಿ ಸ್ಪೇನ್ ದೇಶ ಕೂಡ ಅರಬ್ಬರ ಪಾಲಾಗಿತ್ತು. ಸುಮಾರು 800 ವರ್ಷಗಳ ಕಾಲ ಮೊರಾಕ್ಕೋದಲ್ಲಿದ್ದ ಅರಬ್ಬರು, ಸ್ಪೇನ್ ದೇಶದ ಮೇಲೆ ಆಕ್ರಮಣ ಮಾಡಿ ತನ್ನ ಹಿಡಿತದಲ್ಲಿಟ್ಟುಕೊಂಡಿದ್ದರು. ಆದ್ರೆ ಬದಲಾದ ಕಾಲಚಕ್ರದಲ್ಲಿ ಸ್ಪೇನ್ ಮತ್ತು ಫ್ರಾನ್ಸ್ ದೇಶಗಳ ರಾಜರು ಒಟ್ಟಾಗಿ ಅರಬ್ಬರನ್ನು ಮತ್ತೆ ಮೊರಾಕ್ಕೋಗೆ ಓಡಿಸಿದ್ದರು. ಅಚ್ಚರಿ ಅಂದ್ರೆ ಸ್ಪೇನ್ ದೇಶವನ್ನು ಅಧೀನದಲ್ಲಿಟ್ಟುಕೊಂಡಿದ್ದ ಮೊರಾಕ್ಕೋ, 1912ರಿಂದ 1956ರವರೆಗೆ ಸ್ಪೇನ್ ದೇಶದ ಸಂಕೋಲೆಯಲ್ಲಿ ಬಂಧಿಯಾಗಿತ್ತು. ಆದ್ರೆ 1956ರಲ್ಲಿ ಸ್ವಾತಂತ್ರ್ಯ ಪಡೆದ ಮೊರಾಕ್ಕೋದಲ್ಲಿ ಪ್ರಧಾನ ಮಂತ್ರಿ, ಸಂಸತ್ತು ಎಲ್ಲವೂ ಇದೆ. ಆದ್ರೆ ಇಂದಿಗೂ ಮೊರಾಕ್ಕೋ ದೇಶದ ಸರ್ವಧಿಕಾರಿ ಮಾತ್ರ ರಾಜನೇ..!

ಫಿಫಾ ವಿಶ್ವಕಪ್‍ನಲ್ಲಿ ಮೊರಾಕ್ಕೋ ಫುಟ್‍ಬಾಲ್ ತಂಡ..!

ಅಂದ ಹಾಗೇ, ಫುಟ್‍ಬಾಲ್ ಮತ್ತು ಮೊರಾಕ್ಕೋಗೆ ಶತಮಾನಗಳ ಚರಿತ್ರೆ ಇದೆ. 19ನೇ ಶತಮಾನದಲ್ಲಿ ಫ್ರೆಂಚ್ ವಲಸಿಗರು ಮೊರಾಕ್ಕೋದಲ್ಲಿ ಫುಟ್‍ಬಾಲ್ ಆಟವನ್ನು ಪರಿಚಯಿಸಿದ್ರು. ಶೇಕಡಾ 55ರಷ್ಟು ಮಂದಿ ಇಂದಿಗೂ ಕಾಲ್ಚೆಂಡಿನ ಆಟವನ್ನು ಇಷ್ಟಪಟ್ಟು ಆಡುತ್ತಿದ್ದಾರೆ. 1956ರಲ್ಲಿ ಫಿಫಾದ ಮಾನ್ಯತೆ ಪಡೆದ್ರೂ, 1970ರಲ್ಲಿ ಮೊದಲ ಬಾರಿ ಫಿಫಾ ವಿಶ್ವಕಪ್‍ನಲ್ಲಿ ಆಡುವ ಅರ್ಹತೆ ಪಡೆದುಕೊಂಡಿತ್ತು. ನಂತರ 1986ರಲ್ಲಿ ಮತ್ತೆ ಅರ್ಹತೆ ಪಡೆದುಕೊಂಡು ಪ್ರೀ ಕ್ವಾರ್ಟರ್ ಫೈನಲ್‍ಗೂ ಪ್ರವೇಶಿಸಿತ್ತು. ಇನ್ನು, 1994 ಮತ್ತು 1998ರಲ್ಲಿ ಅರ್ಹತೆ ಪಡೆದ್ರೂ ಗ್ರೂಪ್ ಹಂತಕ್ಕೆ ಸೀಮಿತವಾಗಿತ್ತು. ಅಲ್ಲಿಂದ ಮೊರಾಕ್ಕೋ ಫುಟ್‍ಬಾಲ್ ಟೀಮ್ ಅಧಃಪತನದತ್ತ ಸಾಗಿತ್ತು. ಸುಮಾರು 20 ವರ್ಷಗಳ ಕಾಲ ಫಿಫಾ ವಿಶ್ವಕಪ್‍ಗೆ ಎಂಟ್ರಿಯನ್ನೇ ಪಡೆದುಕೊಂಡಿರಲಿಲ್ಲ. ಆದ್ರೆ 2018ರಿಂದ ಸತತವಾಗಿ ಮೂರು ಫಿಫಾ ವಿಶ್ವಕಪ್‍ನಲ್ಲಿ ಆಡುತ್ತಿದೆ. ಅಲ್ಲದೆ, ವಿಶ್ವದ ಬಲಿಷ್ಠ ತಂಡ ಎಂಬ ಹೆಗ್ಗುರುತ್ತನ್ನು ಮೂಡಿಸುತ್ತಿದೆ. ಅಷ್ಟೇ ಅಲ್ಲ, ಹಳೆಯ ದ್ವೇಷವನ್ನು ಮರೆತು ಸ್ಪೇನ್, ಪೋರ್ಚ್‍ಗಲ್ ಜೊತೆ ಸೇರಿಕೊಂಡು 2030ರ ಫಿಫಾ ವಿಶ್ವಕಪ್ ಅನ್ನು ಆಯೋಜನೆ ಮಾಡುತ್ತಿರುವ ರಾಷ್ಟ್ರವಾಗಿದೆ.

ಮೊರಾಕ್ಕೋ ಫುಟ್‍ಬಾಲ್ ಕ್ರಾಂತಿಗೆ ಮುನ್ನುಡಿ ಬರೆದ ರಾಜ..!

By thebigbulletin.com - 13-07-2026


Ads in Post