Search


ನೇಪಾಳ ಪ್ರವಾಹ; 11 ದಿನಗಳ ಬಳಿಕ ಮೃತ್ಯುಕೂಪದಿಂದ ಜೀವಂತವಾಗಿ ಹೊರಬಂದ 64 ವರ್ಷದ ವೃದ್ದೆ

ಕಠ್ಮಂಡು: ಭೀಕರ ಪ್ರವಾಹದಿಂದ ನಲುಗಿರುವ ನೇಪಾಳದಲ್ಲಿ ರಕ್ಷಣಾ ಕಾರ್ಯಚರಣೆ ಮುಂದುವರಿದಿದ್ದು, ಬರೋಬ್ಬರಿ 11 ದಿನಗಳ ಬಳಿಕ ಕೆಸರಿನಲ್ಲಿ ಸಿಲುಕಿದ್ದ ವೃದ್ದೆಯೊಬ್ಬಳನ್ನ ಜೀವಂತವಾಗಿ ರಕ್ಷಿಸಲಾಗಿದೆ. ಇಲ್ಲಿಯವರೆಗೂ 1344ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದು, ಸಾವಿರಾರು ಮಂದಿ ನಾಪತ್ತೆಯಾಗಿದ್ದಾರೆ. 

ಕೇವಲ 11 ದಿನಗಳ ಹಿಂದೆ ಪ್ರವಾಸಿಗರ ಸ್ವರ್ಗದಂತಿದ್ದ ನೇಪಾಳ ಇದೀಗ ಅಕ್ಷರಶಃ ಸ್ಮಶಾಣವಾಗಿದೆ, ಇಲ್ಲಿಯವರೆಗೂ ಬರೋಬ್ಬರಿ 1344 ಮಂದಿ ಸಾವನ್ನಪ್ಪಿದ್ದು, ಕೆಸರಿನ ನಡುವೆ ಹತ್ತಾರು ಶವಗಳು ದೊರೆಯುತ್ತಿವೆ. ಇದರ ನಡುವೆಯೂ ನೇಪಾಳ ಸೇನೆ ರಕ್ಷಣಾ ಕಾರ್ಯಚರಣೆ ಮುಂದುವರಿಸಿದ್ದು, ಪವಾಡ ಸದೃಶ್ಯವೆಂಬಂತೆ ಕೆಲವರು ಜೀವಂತವಾಗಿ ಪತ್ತೆಯಾಗಿದ್ದಾರೆ. ನಿನ್ನಯಷ್ಟೇ ಸುರಂಗದಿಂದ ಇಬ್ಬರು ಪುರುಷರನ್ನ ರಕ್ಷಿಸಿದ್ದ ರಕ್ಷಣಾ ಪಡೆ, ಇಂದು 64 ವರ್ಷದ ವೃದ್ದೆಯನ್ನ ಜೀವಂತವಾಗಿ ರಕ್ಷಿಸಿದ್ದಾರೆ. ಬರೋಬ್ಬರಿ 11 ದಿನಗಳ ಬಳಿಕ (ಚೀನಾ ಮೂಲದ) 64 ವರ್ಷದ ವೃದ್ಧೆಯನ್ನ ರಕ್ಷಿಸಲಾಗಿದೆ.

275 ಭಾರತೀಯರು ನಾಪತ್ತೆ ..ಮೃತಪಟ್ಟವರ ಹುಡುಕಾಟಕ್ಕೆ DNA ಮೊರೆ

ನೇಪಾಳದಲ್ಲಿ ನಾಪತ್ತೆಯಾಗಿರುವ ಭಾರತೀಯರಿಗಾಗಿ ಹುಡುಕಾಟ ನಡೆಸಲಾಗುತ್ತಿದ್ದು, ಇಲ್ಲಿಯವರೆಗೂ 169 ಭಾರತೀಯರನ್ನ ರಕ್ಷಿಸಿ, ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ಆದರೆ ಇನ್ನು 275 ಭಾರತೀಯರು ನಾಪತ್ತೆಯಾಗಿದ್ದಾರೆ ಎಂದು ಕೇಂದ್ರ ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿದೆ. 

ಇನ್ನೂ ನೇಪಾಳಕ್ಕೆ ಪ್ರವಾಸಕ್ಕೆಂದು ಹೋಗಿದ್ದ ಕನ್ನಡಿಗರು ಸಹ ನಾಪತ್ತೆ ಆಗಿದ್ದು, ಈವರೆಗೂ ಸುಳಿವು ಸಿಗುತ್ತಿಲ್ಲ. ಆತಂಕದಲ್ಲಿರುವ ಕುಟುಂಬ ಕಣ್ಣೀರಿಡುತ್ತಿದೆ. ಈ ಮಧ್ಯೆ ಸರ್ಕಾರ ಮಹತ್ವದ ತೀರ್ಮಾನ ಕೈಕೊಂಡಿದ್ದು, ನೇಪಾಳ ಸರ್ಕಾರ ಮತ್ತು ಭಾರತೀಯ ರಾಯಭಾರ ಕಚೇರಿಯೊಂದಿಗೆ ಸಮನ್ವಯ ಸಾಧಿಸಿ ರಾಜ್ಯ ಸರ್ಕಾರವು ಸಾಗರೋಪಾದಿಯಲ್ಲಿ ಡಿಎನ್‌ಎ ಮಾದರಿ ಸಂಗ್ರಹ ಪ್ರಕ್ರಿಯೆ ಆರಂಭಿಸಿದೆ. ಇದಕ್ಕಾಗಿ ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯನ್ನ ನೋಡೆಲ್ ಕೇಂದ್ರವನ್ನಾಗಿ ಆಯ್ಕೆ ಮಾಡಲಾಗಿದೆ.

ನೇಪಾಳದಲ್ಲಿ ಕಣ್ಮರೆ ಆ ಕನ್ನಡಿಗರ ಗುರುತು ಪತ್ತೆ ಹಚ್ಚಲು ಡಿಎನ್‌ಇ ಪರೀಕ್ಷೆ ಮಾಡಲಾಗ್ತಿದೆ. ನೇಪಾಳದಲ್ಲಿ ಸದ್ಯ ಫೋಟೋ ಮತ್ತು ಇತರ ವಿವರಗಳಿಂದ ಗುರುತು ಹಿಡಿಯಲಾಗದ ಮೃತದೇಹಗಳ ಡಿಎನ್‌ಎ ಪ್ರೊಫೈಲ್ ತಯಾರಿಸಲಾಗುತ್ತಿದ್ದು, ಅದನ್ನ ಪರಿಶೀಲಿಸಲು ಸಂತ್ರಸ್ತರ ರಕ್ತಸಂಬಂಧಿಗಳ ಡಿಎನ್‌ಎ ಮಾದರಿ ಅಗತ್ಯವಿದೆ. ಹೀಗಾಗಿ ಬೌರಿಂಗ್ ಆಸ್ಪತ್ರೆಯಲ್ಲಿ ಡಿಎನ್‌ಎಗಾಗಿ ರಕ್ತಮಾದರಿ ಸಂಗ್ರಹಿಸಲಾಗ್ತಿದೆ.

By Ravikumar - 05-09-2026


Ads in Post