Search


ತೈಲ ಬೆಲೆ ಏರಿಕೆ, ಸರಳವಾಗಿ ಪ್ರಮಾಣ ವಚನ ಸ್ವೀಕರಿಸಲು ಡಿಕೆ ನಿರ್ಧಾರ

ಬೆಂಗಳೂರು : ಡಿಕೆ ಶಿವಕುಮಾರ್‌ ಪ್ರಮಾಣ ವಚನಕ್ಕೆ ಮುಹೂರ್ತ ಫಿಕ್ಸ್‌ ಆಗಿದ್ದು, ಜೂನ್‌ 3ರ ಸಂಜೆ ಡಿಕೆ ಶಿವಕುಮಾರ್‌ ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ತಿಳಿದು ಬಂದಿದೆ. ಯಾವುದೇ ಆಡಂಬರವಿಲ್ಲದೆ ಲೋಕಭವನದಲ್ಲಿ ಪದಗ್ರಹಣ ಕಾರ್ಯಕ್ರಮ ನಡೆಯಲಿದೆ ಕೆಪಿಸಿಸಿ ಕಾರ್ಯಧ್ಯಕ್ಷ ಜಿ.ಸಿ ಚಂದ್ರಶೇಖರ್‌ ತಿಳಿಸಿದ್ದಾರೆ.

ಇದನ್ನು ಓದಿ : https://thebigbulletin.com/post/significant-change-in-modi-government-new-president-arrives-for-state

ಹಲವು ಗೊಂದಲಗಳ ನಡುವೆ ಕೊನೆಗೂ ಕರ್ನಾಟಕದ ನೂತನ ಸಿಎಂ ಪಟ್ಟಾಭಿಷೇಕಕ್ಕೆ ಮುಹೂರ್ತ ಫಿಕ್ಸ್‌ ಆಗಿದೆ. ಬುಧವಾರ ಅಂದರೆ ಜೂನ್ 3ರಂದು ಸಂಜೆ 5:15ಕ್ಕೆ ವೃಶ್ಚಿಕ ಲಗ್ನದಲ್ಲಿ ಡಿಕೆ ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಲಿದ್ದಾರೆ. ಡಿಕೆ ಶಿವಕುಮಾರ್ ಅವರು ಇದೇ ಮೊದಲ ಬಾರಿಗೆ ಸಿಎಂ ಆಗುತ್ತಿದ್ದರೂ ಸಹ ಯಾವುದೇ ಆಡಂಬರವಿಲ್ಲದೇ ಲೋಕಭವನದಲ್ಲಿ (ರಾಜಭವನ) ಸರಳವಾದ ಕಾರ್ಯಕ್ರಮದಲ್ಲಿ  ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಈ ಬಗ್ಗೆ ಕೆಪಿಸಿಸಿ ಕಾರ್ಯಧ್ಯಕ್ಷ ಮತ್ತು ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್ ಅವರು ಸುದ್ದಿಗೋಷ್ಠಿ ನಡೆಸಿ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.

ಸರಳವಾಗಿ ಪ್ರಮಾಣವಚನ ಸ್ವೀಕರಿಸಲು ಹೈಕಮಾಂಡ್‌ ಆದೇಶ..!

ಡಿಕೆ ಶಿವಕುಮಾರ್ ಅವರು ಮೊದಲ ಬಾರಿಗೆ ಸಿಎಂ ಆಗುತ್ತಿರುವುದರಿಂದ ಅದ್ಧೂರಿಯಾಗಿ ಕಾರ್ಯಕ್ರಮ ಮಾಡಲು ಆಪ್ತರು ನಿರ್ಧರಿಸಿದ್ದರು. ಹೀಗಾಗಿ ಇದಕ್ಕೆ ಸಕಲ ಸಿದ್ಧತೆಗಳು ಸಹ ನಡೆದಿದ್ದವು. ಆದ್ರೆ, ಕೊನೆ ಕ್ಷಣದಲ್ಲಿ ಹೈಕಮಾಂಡ್ ಆಡಂಬರಕ್ಕೆ ಬ್ರೇಕ್ ಹಾಕಿದ್ದು, ಸರಳವಾಗಿ ಪ್ರಮಾಣವಚನ ಸ್ವೀಕರಿಸಲು ಸೂಚಿಸಿದೆ. ತೈಲ ಬೆಲ ಏರಿಕೆ ಹಾಗೂ ವೀಕೆಂಡ್ ಆಗಿರುವುದರಿಂದ ಸಹಸ್ರಾರು ಜನ ಸೇರುವುದರಿಂದ ಟ್ರಾಫಿಕ್ ಜಾಮ್ ಉಂಟಾಗುವ ಸಾಧ್ಯೆತೆಗಳಿವೆ. ಇದರಿಂದ ಜನರಿಗೆ ತೊಂದರೆಯಾಗುವುದು ಬೇಡ. ದೊಡ್ಡ ಪ್ರಮಾಣದಲ್ಲಿ ಕಾರ್ಯಕ್ರಮ ಬೇಡ ಎಂದು ಸೂಚಿಸಲಾಗಿದೆ. ಅದರಂತೆ ಸರಳವಾಗಿ ಲೋಕಭವನದ ಗ್ಲಾಸ್ ಹೌಸ್​​ನಲ್ಲಿ ಅಧಿಕಾರ ಸ್ವೀಕಾರ ಸಮಾರಂಭ ನಡೆಯಲಿದೆ ಎಂದು ಜಿಸಿ ಚಂದ್ರಶೇಖರ್‌ ಮಾಹಿತಿ ನೀಡಿದರು.
 

By Ravikumar - 30-05-2026


Ads in Post