Search


ರೋಹಿತ್‌ ಶರ್ಮಾ, ನಟ ಮಮ್ಮುಟ್ಟಿ ಸೇರಿದಂತೆ ಹಲವರಿಗೆ ಪದ್ಮ ಪ್ರಶಸ್ತಿ ಪ್ರಧಾನ..!

ನವದೆಹಲಿ : ಹಿಟ್‌ಮ್ಯಾನ್‌ ರೋಹಿತ್‌ ಶರ್ಮ, ಮಲೆಯಾಳಂನ ಖ್ಯಾತ ನಟ ಮಮ್ಮುಟ್ಟಿ (Mammootty) ಸೇರಿದಂತೆ ಹಲವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರು ಪದ್ಮ ಪ್ರಶಸ್ತಿಗಳನ್ನ ಪ್ರಧಾನ ಮಾಡಿದ್ದು. ರಾಷ್ಟ್ರಪತಿ ಭವನದಲ್ಲಿ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಜರುಗಿದೆ. ನಟ ಮಮ್ಮುಟ್ಟಿ ಮತ್ತು ಖ್ಯಾತ ಹಿನ್ನೆಲೆ ಗಾಯಕಿ ಅಲ್ಕಾ ಯಾಗ್ನಿಕ್ ಅವರಿಗೆ ಪದ್ಮ ಭೂಷಣ ಪ್ರಶಸ್ತಿ ನೀಡಲಾಯಿತು.

ಎರಡನೇ ಸುತ್ತಿನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಿನಿಮಾ, ಸಂಗೀತ, ಸಾರ್ವಜನಿಕ ಸೇವೆ ಮತ್ತು ಕಲೆಗಳಂತಹ ಕ್ಷೇತ್ರಗಳಲ್ಲಿ ನೀಡಿದ ಕೊಡುಗೆಗಳಿಗಾಗಿ ಹಲವಾರು ಗಣ್ಯ ವ್ಯಕ್ತಿಗಳನ್ನು ರಾಷ್ಟ್ರಪತಿಗಳು ಸನ್ಮಾನಿಸಿದ್ದಾರೆ. ಖ್ಯಾತ ಮಲೆಯಾಳಂ ನಟ ಮಮ್ಮುಟ್ಟಿ ಅವರಿಗೆ ಪದ್ಮಭೂಷಣ (Padma Bhushan) ಪ್ರಶಸ್ತಿ ನೀಡಿ ಗೌರವಸಲಾಯಿತು , ಈ ಸಮಾರಂಭದಲ್ಲಿ ನಟ ಮಮ್ಮುಟ್ಟಿ ಅವರ ಪತ್ನಿ ಸಲ್ಫತ್, ಮಗ ಮತ್ತು ನಟ ದುಲ್ಕರ್ ಸಲ್ಮಾನ್, ಮಗಳು ಸುರುಮಿ ಭಾಗವಹಿಸಿದ್ದರು.

ಜೊತೆಗೆ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ ಹಾಗೂ ಬಾಲಿವುಡ್‌ ನಟ ಆರ್.ಮಾಧವನ್‌ಗೆ ಪದ್ಮಶ್ರೀ ನೀಡಿ ಗೌರವಿಸಲಾಗಿದ್ದು. ರಂಗ ಕಲಾವಿದ ನೂರುದ್ದೀನ್ ಅಹ್ಮದ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು. ಜೆಎಂಎಂ ಕುಲಪತಿ ಮತ್ತು ಬುಡಕಟ್ಟು ನಾಯಕ ಶಿಬು ಸೊರೆನ್ ಅವರಿಗೆ ಸಾರ್ವಜನಿಕ ವ್ಯವಹಾರಗಳ ಕ್ಷೇತ್ರದಲ್ಲಿ ಮರಣೋತ್ತರವಾಗಿ ಪದ್ಮಭೂಷಣ ಪ್ರಶಸ್ತಿ ನೀಡಲಾಯಿತು. ಪ್ರಶಸ್ತಿಯನ್ನು ಅವರ ಪತ್ನಿ ರೂಪಿ ಸೊರೇನ್ ಸ್ವೀಕರಿಸಿದರು.

ಮೇ 26 ರಂದು ನಡೆದ ಮೊದಲ ನಾಗರಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ, ರಾಷ್ಟ್ರಪತಿಗಳು ಒಟ್ಟು 66 ಪದ್ಮ ಪ್ರಶಸ್ತಿಗಳನ್ನು ವಿಜೇತರಿಗೆ ಪ್ರದಾನ ಮಾಡಿದ್ದರು. ಆ ಕಾರ್ಯಕ್ರಮದಲ್ಲಿ ದಿವಂಗತ ಬಾಲಿವುಡ್ ನಟ ಧರ್ಮೇಂದ್ರ ಅವರಿಗೆ ಮರಣೋತ್ತರ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅವರ ಪತ್ನಿ, ನಟಿ-ರಾಜಕಾರಣಿ ಹೇಮಾ ಮಾಲಿನಿ ಅವರು ಪತಿ ಪರವಾಗಿ ಪ್ರಶಸ್ತಿಯನ್ನು ಸ್ವೀಕರಿಸಿದ್ದರು

By Ravikumar - 23-06-2026


Ads in Post