Search


ಈದ್‌ ಮಿಲಾದ್‌ ಮೆರವಣಿಗೆಯಲ್ಲಿ ಪ್ಯಾಲಿಸ್ತೇನ್‌ ಧ್ವಜ ಹಾರಟ; ಮುಂದುವರಿದು ಗಾಜಾ ಪ್ರೀತಿ

ಕಾರವಾರ: ಈದ್‌ ಮಿಲಾದ್‌ ಮೆರವಣಿಗೆ ವೇಳೆ ಕೆಲವರು ಪ್ಯಾಲಿಸ್ತೇನ್‌ ಪ್ರೀತಿ ಮೆರೆದಿದ್ದಾರೆ. ಉತ್ತರ ಕನ್ನಡ (Uttara Kannada) ಜಿಲ್ಲೆಯ ಅಂಕೋಲಾ (Ankola) ಪಟ್ಟಣದಲ್ಲಿ ಈದ್ ಮಿಲಾದ್ (Eid-e-Milad) ಹಬ್ಬದ ಸಂಭ್ರಮದ ಮೆರವಣಿಗೆ ಸಾಗುತ್ತಿದ್ದ ವೇಳೆ ಕೆಲವರು ಪ್ಯಾಲೆಸ್ತೀನ್ ಧ್ವಜವನ್ನು (Palestine Flag) ಪ್ರದರ್ಶಿಸಿದ ಘಟನೆ ನಡೆದಿದೆ.

ಈದ್‌ ಮಿಲಾದ್‌ ಮೆರವಣಿಗೆ ನಡೆಯುವ ವೇಳೆ ಕೆಲವರು ಪ್ಯಾಲಿಸ್ತೇನ್‌ ಧ್ವಜವನ್ನ ಪ್ರದರ್ಶಿಸಿದ್ದು, ಈ ವೇಳೆ ಇದನ್ನ ಗಮನಿಸಿದ ಪೊಲೀಸರು, ಕೂಡಲೇ ಧ್ವಜವನ್ನ ವಶಕ್ಕೆ ಪಡೆದಿದ್ದಾರೆ. ಈ ವೇಳೆ ಸ್ಥಳದಲ್ಲಿ ಯಾವುದೇ ಗೊಂದಲ ಅಥವಾ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಜಾಗೃತೆ ವಹಿಸಿದ್ದು, ಪರಿಸ್ಥಿತಿಯನ್ನ ತಿಳಿಗೊಳಿಸಿದ್ದಾರೆ.ಈ ವೇಳೆ ಪೊಲೀಸರು ಮೆರವಣಿಗೆ ಮಾಡ್ತಿದ್ದವರಿಗೆ ಎಚ್ಚರಿಕೆ ಕೊಟ್ಟಿದ್ದು, ಇಂತಹ ಧ್ವಜಗಳನ್ನ ಹಾರಿಸದೆ ಶಾಂತಿಯುತವಾಗಿ ಮೆರವಣಿಗೆ ಮುಂದುವರಿಸಲು ಸೂಚಸಿದ್ದಾರೆ. 

ಇನ್ನು ಇತ್ತ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ಹೊರವಲಯದಲ್ಲಿ ಇರಾನ್ ದೇಶದ ಧ್ವಜ ಹಾರಾಡಿದೆ. ಎರಡು ದಿನಗಳ ಹಿಂದೆ ನಡೆದ ಘಟನೆ, ತಡವಾಗಿ ಬೆಳಕಿಗೆ ಬಂದಿದೆ. ಧ್ವಜ ಹಾರಾಟದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಪೊಲೀಸರು ಹಾಗೂ ಸ್ಥಳೀಯರು ಧ್ವಜ ತೆರವುಗೊಳಿಸಿದ್ದಾರೆ.

By Ravikumar - 27-08-2026


Ads in Post