ಬೆಂಗಳೂರು: ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ದ ಹರಿ ಹಾಯ್ದಿದ್ದಾರೆ. ʻಅಧಿಕಾರಕ್ಕೆ ಬಂದ ತಕ್ಷಣ ಗೃಹ ಇಲಾಖೆಯನ್ನ ಸ್ವಚ್ಚ ಮಾಡ್ತೀನಿ ಅಂದಿದ್ರು, ಆದರೆ ಪರಪ್ಪನ ಆಗ್ರಹಾರದ ವಿಡಿಯೋಗಳು ವಾರಗಟ್ಟಲೆ ತೋರಿಸಿದ್ದಾರೆ, ನೀವು ಏನ್ ಮಾಡ್ತಿದ್ದೀರಾ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ʻಯಾರ್ಯಾರ ಧ್ವನಿಯನ್ನು ಹೇಗೆ ಅಡಗಿಸಿಬೇಕೆಂದು ಪ್ಲಾನ್ ಮಾಡ್ತೀದ್ದೀರಾ. ನಮ್ಮ ಧ್ವನಿಯನ್ನು ನೀವು ನಿಲ್ಲಿಸಲು ಆಗೋದಿಲ್ಲ, ಕೆಪಿಎಸ್ ಸಿ ಹಗರಣ ಗ್ಯಾನೇಂದ್ರ ಎಲ್ಲಿದ್ದಾನೋ ಗೊತ್ತಿಲ್ಲ ಎಂದು ಹೇಳುತ್ತಿರಲ್ಲ, ಹಾಗಿದ್ದ ಮೇಲೆ ಗೃಹ ಇಲಾಖೆಯನ್ನು ಏಕೆ ನಡೆಸುತ್ತೀರಿ, ರಾಜ್ಯದಿಂದ ಆತ ಓಡಿ ಹೋಗಲು ನೀವೇ ಅವಕಾಶ ಮಾಡಿಕೊಟ್ಟಿದ್ದೀರಿ, ಏನಾದರೂ ನಿಮಗೆ ನಾಲಗೆಗೆ ಅಲ್ಪಸ್ವಲ್ಪ ಗೌರವ ಕೊಡೋದಿದ್ದೆ ಆದರೆ ಕೂಡಲೇ ರಾಜಿನಾಮೆ ನೀಡಿ ಎಂದು ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ಮುಂದುವರಿದು ಮಾತನಾಡಿದ ಹೆಚ್ಡಿಕೆ ʻಕರ್ನಾಟಕ ಲೋಕಸೇವಾ ಆಯೋಗದಲ್ಲಿ ಕಳೆದ ಹಲವು ದಿನಗಳಿಂದ ಏನು ನಡೆಯುತ್ತಿದೆ ಎಂಬುದನ್ನು ನಾನು ಗಮನಿಸುತ್ತಿದ್ದೇನೆ. ಪಶುವೈದ್ಯಕೀಯ ವೈದ್ಯ ಹುದ್ದೆಗೆ, ನೇಮಕಾತಿ ಮಾಡಲು ಮತ್ತು ಕೆಪಿಎಸ್ಸಿ ಪ್ರಕ್ರಿಯೆಯಲ್ಲಿ ಯಶಸ್ವಿಯಾಗಲು ಅವರು 80 ಲಕ್ಷ ರೂ. ನಿಗದಿಪಡಿಸಿದ್ದಾರೆ ಎಂದು ಯುವಕನೊಬ್ಬ ಆರೋಪಿಸಿದ್ದಾರೆ. ಕಳೆದ ವಾರ ಜಾರಿ ನಿರ್ದೇಶನಾಲಯವು ಹಲವಾರು ಸ್ಥಳಗಳ ಮೇಲೆ ದಾಳಿ ನಡೆಸಿದೆ ಎಂದು ಅವರು ಹೇಳಿದರು.
ಅಷ್ಟೇ ಅಲ್ಲದೇ ʻಕರ್ನಾಟಕ ರಾಜ್ಯ ಸರಿಪಡಿಸಲಿಕ್ಕೆ ಯುವಕರು ನಿರುದ್ಯೋಗದ ವಿರುದ್ಧ ಬೀದಿಗೆ ಇಳಿದು ಹೋರಾಟ ಮಾಡಬೇಕು. ಎಂದು ಕುಮಾರಸ್ವಾಮಿ ಕರೆ ನೀಡಿದ್ದಾರೆ. ಆರ್ಎಸ್ಎಸ್ ಮೆರವಣಿಗೆಯಲ್ಲಿ ಭಾಗವಹಿಸಿದ್ದಕ್ಕಾಗಿ ಅಧಿಕಾರಿಗಳ ಅಮಾನತುಗೆ ಪ್ರತಿಕ್ರಿಯಿಸಿದ ಅವರು, "ಅದು ವಿಷಯವಲ್ಲ. ಆರ್ಎಸ್ಎಸ್ ಮೆರವಣಿಗೆಯಲ್ಲಿ ಭಾಗವಹಿಸುವ ಮೂಲಕ ಅವರು ಯಾವ ಪ್ರಮುಖ ತಪ್ಪನ್ನು ಮಾಡಿದ್ದಾರೆ? ಅವರು ರಾಜ್ಯಕ್ಕೆ ಹಾನಿ ಮಾಡುತ್ತಿಲ್ಲ. ಇದರ ಬಗ್ಗೆ ಮಾತನಾಡದೆ ರಾಜ್ಯದ ಸಮಸ್ಯೆಗಳ ಬಗ್ಗೆ ಗಮನಹರಿಸಿ ಎಂದು ಕುಮಾರಸ್ವಾಮಿ ಸಲಹೆ ನೀಡಿದ್ದಾರೆ.