Search


ಪ್ರಕಾಶ್‌ ರಾಜ್‌ ಕ್ರಿಮಿನಲ್‌ ಅಲ್ಲ; ಧರ್ಮಸ್ಥಳ ಕೇಸ್‌ ಬಗ್ಗೆ ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ಪ್ರತಿಕ್ರಿಯೆ

ಬೆಂಗಳೂರು: ಧರ್ಮಸ್ಥಳ ಬುರುಡೆ (Dharmasthala Mass Burial Case) ಪ್ರಕರಣದಲ್ಲಿ ನಟ ಪ್ರಕಾಶ್‌ ರಾಜ್‌ ಹೆಸರು ತಳುಕು ಹಾಕಿಕೊಂಡಿರುವ ಬಗ್ಗೆ ಗೃಹ ಸಚಿವ ಪ್ರಿಯಾಂಕ್‌ ಖರ್ಗೆ (Priyank Kharge) ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದು. ಪ್ರಕಾಶ್‌ ರಾಜ್‌ ಏನು ಕ್ರಿಮಿನಲ್‌ ಎಂದು ಹೇಳಿದ್ದಾರೆ. 

ನಟ ಪ್ರಕಾಶ್‌ ರಾಜ್‌ ಅವರು ಧರ್ಮಸ್ಥಳ ಷಡ್ಯಂತ್ರದ ಭಾಗವಾಗಿದ್ದರು ಎಂದು ಮಾಸ್ಕ್‌ ಮ್ಯಾನ್‌ ಚಿನ್ನಯ್ಯ ಆರೋಪಿಸಿದ್ದ, ಈ ಕುರಿತು ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ಅವರು, "ಹೆಸರು ಪ್ರಸ್ತಾಪ ಆದ ಕೂಡಲೇ ಎಲ್ಲರೂ ಕ್ರಿಮಿನಲ್ ಅಲ್ಲ. ಕೋರ್ಟ್ ಎಸ್‌ಐಟಿ ಚೀಫ್‌ಗೆ ಕೇಳಿದೆ, ಅವರು ಉತ್ತರ ಕೊಡಲಿ. ಮಾಧ್ಯಮಗಳಲ್ಲಿ ಚರ್ಚೆ ಮಾಡೋಕೆ ಆಗಲ್ಲ ಎಂದಿದ್ದಾರೆ. 

ಇನ್ನೂ ಮೈಕ್ರೋ ಫೈನಾನ್ಸ್ ಕಾಯ್ದೆ (Micro Finance Act) ಧರ್ಮಸ್ಥಳ ಸಂಘ ಪಾಲನೆ ಮಾಡ್ತಿಲ್ಲ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿ, ಕಾಯ್ದೆ ಇಡೀ ರಾಜ್ಯಕ್ಕೆ ತಂದುರೋದು. ಹೊಸ ಕಾಯ್ದೆ ಬಂದ ಮೇಲೆ ಯಾರು ಉಲ್ಲಂಘನೆ ಮಾಡಿದ್ದಾರೆ ನನಗೆ ಗೊತ್ತಿಲ್ಲ. ಒಂದು ವಾರ, 10 ದಿನಗಳಲ್ಲಿ ಮೀಟಿಂಗ್ ಮಾಡಿ ತಿಳಿಸ್ತೀನಿ. ಧರ್ಮಸ್ಥಳ ಸಂಘಕ್ಕೆ ಮಾತ್ರವಲ್ಲ ಆ ಕಾಯ್ದೆ ಅಲ್ಲ. ಎಲ್ಲರಿಗೂ ಅನ್ವಯ ಆಗುತ್ತದೆ. ಪಾಲನೆ ಮಾಡಬೇಕು. ದೂರು ಏನಿದೆ ಗೊತ್ತಿಲ್ಲ. ತನಿಖೆ ಆಗಬೇಕು. ಅದರ ಬಗ್ಗೆ ಪರಿಶೀಲನೆ ಮಾಡೋಣ ಎಂದಿದ್ದಾರೆ.

ಇನ್ನು ಈ ಕುರಿತು ನಟ ಪ್ರಕಾಶ್‌ ರಾಜ್‌ ಕೂಡ ಪ್ರತಿಕ್ರಿಯೆ ನೀಡಿದ್ದು ʻ‘ನಾನು ಸದ್ಯ ಊರಿನಲ್ಲಿ ಇಲ್ಲ. ಇನ್ನೆರಡು ದಿನಗಳಲ್ಲಿ ನಾನೇ ಖುದ್ದಾಗಿ ಬಂದು ಮಾಧ್ಯಮ ಮಿತ್ರರ ಮೂಲಕ ಇದಕ್ಕೆ ಸೂಕ್ತ ಪ್ರತಿಕ್ರಿಯೆ ನೀಡಲಿದ್ದೇನೆ. ಅಲ್ಲಿಯವರೆಗೆ ಗಾಳಿ ಸುದ್ದಿಗಳನ್ನು ದಯವಿಟ್ಟು ಯಾರೂ ನಂಬಬೇಡಿ’ ಎಂದು ಕೋರಿದ್ದಾರೆ.

By Ravikumar - 12-06-2026


Ads in Post