Search


RSS ವಿರುದ್ದ ಅವಹೇಳನ ಕಾರಿ ಹೇಳಿಕೆ ಕೊಟ್ಟ ಪ್ರಿಯಾಂಕ್‌ಗೆ ಸಮನ್ಸ್‌ : ಕೋರ್ಟ್‌ಗೆ ಹಾಜರಾಗುವಂತೆ ಸೂಚನೆ

ಬೆಂಗಳೂರು: ಆರ್‌ಎಸ್‌ಎಸ್ (RSS) ಮತ್ತು ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ಅವರ ನಡುವೆ ನಡೆಯುತ್ತಿರುವ ವಾಗ್ವಾದ ಇದೀಗ ಕೋರ್ಟ್‌ ಮೆಟ್ಟಿಲೇರಿದೆ. ಆರ್‌ಎಸ್‌ಎಸ್‌ ವಿರುದ್ದ ಅವಹೇಳನಕಾರಿ ಪೋಸ್ಟ್‌ ಮಾಡಿದ್ದ ಸಚಿವ ಪ್ರಿಯಾಂಕ್‌ಗೆ  (Priyank Kharge) ನ್ಯಾಯಾಲಯ ಸಮನ್ಸ್‌ ಜಾರಿ ಮಾಡಿದ್ದು. ಜೊತೆಗೆ ಕಾಂಗ್ರೆಸ್‌ ಯುವ ಮುಖಂಡ ಮೊಹಮ್ಮದ್‌ ನಲಪಾಡ್‌ಗೆ ಕೂಡ ನ್ಯಾಯಾಲಯ ಶಾಕ್‌ ಕೊಟ್ಟಿದೆ.

ಆರ್‌ಎಸ್‌ಎಸ್‌ ನೋಂದಣಿ ಸೇರಿದಂತೆ, ಸಂಘದ ಕಾರ್ಯಗಳ ಬಗ್ಗೆ ಬಹುಕಾಲದಿಂದ ಆಕ್ಷೇಪ ವ್ಯಕ್ತಪಡಿಸಿರುವ ಪ್ರಿಯಾಂಕ್‌ ಖರ್ಗೆ ಅವರು 2025 ಅ.14 ರಂದು ಆರ್‌ಎಸ್‌ಎಸ್ ಸದಸ್ಯರ ವಿರುದ್ಧ ಟ್ವೀಟ್ ಮಾಡಿದ್ದರು. ಈ ಪೋಸ್ಟ್‌ಗಳು ಅವಹೇಳನಕಾರಿಯಾಗಿದೆ ಎಂದು ಆರ್‌ಎಸ್‌ಎಸ್‌ ಕಾರ್ಯಕರ್ತ ಎ. ತೇಜಸ್‌ ಎಂಬುವವರು ಖಾಸಗಿ ದೂರು ಸಲ್ಲಿಸಿದ್ದರು. ಜೊತೆಗೆ ಕಾಂಗ್ರೆಸ್‌ ಯುವ ಮುಖಂಡ ಮೊಹಮ್ಮದ್‌ ಹ್ಯಾರಿಸ್‌ ನಲಪಾಡ್‌ ಅವರು ಯೂಟ್ಯೂಬ್‌ ಸಂದರ್ಶನವೊಂದರಲ್ಲಿ ನೀಡಿದ ಹೇಳಿಕೆ ಬಗ್ಗೆಯೂ ಆಕ್ಷೇಪ ವ್ಯಕ್ತಪಡಿಸಿದ್ದರು.

ಈ ದೂರಿನ ಅರ್ಜಿ ವಿಚಾರಣೆ ನಡೆಸಿದ ಬೆಂಗಳೂರಿನ 42ನೇ ಎಸಿಜೆಎಂ ನ್ಯಾಯಾಲಯ ಸಚಿವ ಪ್ರಿಯಾಂಕ್‌ ಖರ್ಗೆ ಮತ್ತು ನಲಪಾಡ್‌ ಹ್ಯಾರಿಸ್‌ಗೆ ಖುದ್ದು ನ್ಯಾಯಲಯಕ್ಕೆ ಹಾಜರಾಗುವಂತೆ ಸಮನ್ಸ್‌ ಜಾರಿ ಮಾಡಿದೆ. ಜುಲೈ 21ರಂದು ಕೋರ್ಟ್‌ಗೆ ಬರುವಂತೆ ತಿಳಿಸಿದೆ. ಇನ್ನು ತೇಜಸ್‌ ಅವರು ದಾಖಲಿಸಿದ್ದ ಕ್ರಿಮಿನಲ್‌ ಮಾನನಷ್ಟ ಮೊಕದಮ್ಮೆಯನ್ನ ನ್ಯಾಯಾಲಯ ತಿರಸ್ಕರಿಸಿದ್ದು. ಮುಂದಿನ ತಿಂಗಳು ಸಚಿವರು ನ್ಯಾಯಾಲಯಕ್ಕೆ ಹಾಜರಾಗುತ್ತಾರ ಎಂಬುದನ್ನ ಕಾದು ನೋಡಬೇಕಿದೆ.

By Ravikumar - 28-06-2026


Ads in Post