Search


ಕಾಮುಕ ಶಿಕ್ಷಕ : ಪಿಎಚ್‌ಡಿ ವಿದ್ಯಾರ್ಥಿನಿ ಜೊತೆ ಅಕ್ರಮ ಸಂಬಂಧ, ಇತರ ವಿದ್ಯಾರ್ಥಿಗಳಿಗೂ ಕಿರುಕುಳ

ಧಾರವಾಡ: ಕಾಮುಕ ಶಿಕ್ಷಕನೊಬ್ಬ ವಿದ್ಯಾರ್ಥಿನಿಯ ಜೊತೆ ಅಕ್ರಮ ಸಂಬಂಧ ಹೊಂದಿದ್ದಲ್ಲದೆ, ಆಕೆ ಬಿಟ್ಟು ಹೋದ ನಂತರ ಆಕೆಯನ್ನ ಕರೆಯಿಸುವಂತೆ ಇತರೆ ವಿದ್ಯಾರ್ಥಿಗಳ ಮೇಲೆ ಒತ್ತಡ ಹಾಕಿರುವ ಘಟನೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ (Dharwad Karnataka University) ನಡೆದಿದೆ.

ಶಿಕ್ಷಕರನ್ನ ದೇವರ ಸ್ವರೂಪ ಎಂದು ನೋಡುವ ಸಮಾಜದಲ್ಲಿ ಇಲ್ಲೊಬ್ಬ ಕಾಮುಕ ಶಿಕ್ಷಕ ತನ್ನ ಬಳಿ ಪಿಎಚ್‌ಡಿ ಪಡೆಯಲು ಬಂದಿದ್ದ ವಿದ್ಯಾರ್ಥಿನಿಯ ಜೊತೆ ಅಕ್ರಮ ಸಂಬಂಧ ಬೆಳೆಸಿದ್ದಾನೆ. ಈ ಕಾಮುಕ ಪ್ರೋಫೆಸರ್‌ನನ್ನು ದೇವರಾಜ್‌ ತಂಗುದೊರೈ ಎಂದು ಗುರುತಿಸಲಾಗಿದೆ.

ಸಸ್ಯಶಾಸ್ತ್ರ ವಿಭಾಗದ ಪ್ರೋಫೆಸರ್‌ ಆಗಿರುವ ದೇವರಾಜ್‌ ಬಳಿಗೆ, ವಿಜಯಪುರ ಮೂಲದ ವಿದ್ಯಾರ್ಥಿನಿಯೋರ್ವಳು ಪಿಎಚ್‌ಡಿ ಪಡೆಯಲು ಬಂದಿದ್ದಳು. ಆಕೆಯನ್ನ ಪಟಾಯಿಸಿದ್ದ ಈತ, ಕೆಲ ವರ್ಷಗಳಿಂದ ಆಕೆಯ ಜೊತೆ ದೈಹಿಕ ಸಂಪರ್ಕ ಬೆಳೆಸಿದ್ದನು. ಈ ವಿಷಯ ವಿದ್ಯಾರ್ಥಿನಿಯ ಮನೆಯವರಿಗೆ ಗೊತ್ತಾಗಿ, ಆಕೆಯ ವಿದ್ಯಾಭ್ಯಾಸವನ್ನ ಅರ್ಧಕ್ಕೆ ನಿಲ್ಲಿಸಿ ಮನೆಗೆ ಕರೆದುಕೊಂಡು ಹೋಗಿದ್ದಾರು.

ಇತರೆ ವಿದ್ಯಾರ್ಥಿಗಳಿಗೆ ಕಿರುಕುಳ ಕೊಟ್ಟ ಸೈಕೋ ಪ್ರೋಫೆಸರ್‌...!

ವಿಜಯಪುರ ಮೂಲದ ವೇದವ್ಯಾಸ್ ಚೌಹಾಣ್ ಎಂಬುವವರು ಆತನ ಬಳಿ ಪಿಎಚ್‌ಡಿ ಗೈಡ್ ಪಡೆಯಲು ಹೋಗಿದ್ದರು. ಮೊದಮೊದಲು ವೇದವ್ಯಾಸ್‌ಗೆ ಗೈಡ್ ಮಾಡಿರುವ ಪ್ರೊ.ದೇವರಾಜ್, ಪಿಹೆಚ್‌ಡಿ ಮುಗಿಯುವ ಹಂತ ಬಂದಾಗ ತನ್ನನ್ನು ಬಿಟ್ಟು ಹೋದ ಆ ವಿದ್ಯಾರ್ಥಿನಿಯನ್ನ ಮರಳಿ ಕರೆಯಿಸುವಂತೆ ವೇದವ್ಯಾಸ್‌ಗೆ ಕಿರುಕುಳ ನೀಡಿದ್ದಾನೆ. ಆಕೆಯನ್ನು ಮರಳಿ ಕರೆಸಿದರೆ ಮಾತ್ರ ಪಿಹೆಚ್‌ಡಿ ಪೂರ್ಣ ಮಾಡಿಕೊಡುತ್ತೇನೆ. ಇಲ್ಲದಿದ್ರೆ ಇಲ್ಲ ಎಂದು ವೇದವ್ಯಾಸ್‌ಗೆ ಒತ್ತಾಯ ಮಾಡಿದ್ದಾನೆ.

ಇದರಿಂದ ಕಂಗಾಲಾದ ವೇದವ್ಯಾಸ್ ವಿಶ್ವವಿದ್ಯಾಲಯದ ಕುಲಸಚಿವರಿಗೆ ಹಾಗೂ ವಿದ್ಯಾರ್ಥಿ ಸಂಘಟನೆಯವರಿಗೆ ದೂರು ನೀಡಿದ್ದಾರೆ. ಅಲ್ಲದೇ ಆ ವಿದ್ಯಾರ್ಥಿನಿ ಜೊತೆಗೆ ತಾನು ಹೇಗಿದ್ದ ಎಂಬುದರ ಕುರಿತಾಗಿಯೂ ವೇದವ್ಯಾಸ್‌ಗೆ ಪ್ರೊ.ದೇವರಾಜ ವಿವರಣೆ ನೀಡಿದ್ದಾನೆ. ಆ ಕುರಿತ ಆಡಿಯೋ, ಫೋಟೋಗಳು ಈಗ ಲಭ್ಯವಾಗಿವೆ.

3 ಬಾರಿ ಅಬಾಷನ್‌ ಮಾಡಿಸಿದ್ದ ಕಾಮುಕ...!

ತನ್ನದೇ ಸಸ್ಯಶಾಸ್ತ್ರ ವಿಭಾಗದ ವಿದ್ಯಾರ್ಥಿನಿ ಜೊತೆ ಲವ್ವಿಡವ್ವಿ ಹೊಂದಿದ್ದ ಈ ಪ್ರೊ.ದೇವರಾಜ್, ಆಕೆಯೊಂದಿಗೆ ತೆಗೆಸಿಕೊಂಡಿದ್ದ ಕೆಲ ಫೋಟೋಗಳನ್ನ ತನ್ನ ಇನ್‌ಸ್ಟಾಗ್ರಾಮ್‌ನಲ್ಲೂ ಹಾಕಿಕೊಂಡಿದ್ದಾನೆ. ಅಲ್ಲದೇ ಆಕೆಗೆ 3 ಬಾರಿ ಅಬಾಷನ್ ಕೂಡ ಮಾಡಿಸಿದ್ದಾನಂತೆ. ಇಷ್ಟೆಲ್ಲ ಮಾಡಿರುವ ಪ್ರೊಫೆಸರ್ ಮೇಲೆ ಶಿಸ್ತು ಕ್ರಮ ಆಗಬೇಕು. ಆತನನ್ನ ಅಮಾನತು ಮಾಡಿ ಪೊಲೀಸ್ ದೂರು ದಾಖಲಿಸಬೇಕು ಎಂದು ಕವಿವಿ ವಿದ್ಯಾರ್ಥಿ ಸಂಘಟನೆಯವರು ಆಗ್ರಹಿಸಿದ್ದಾರೆ.

ಈ ವಿಚಾರವಾಗಿ ಪ್ರತಿಕ್ರಿಯೆ ಕೇಳಿದ್ರೆ ಪ್ರೊ. ದೇವರಾಜ್, ಅದು ಏನಾದರೂ ಇರಲಿ. ಇದು ಅಕಾಡೆಮಿಕ್ ವಿಷಯ. ಅದರ ಬಗ್ಗೆ ನಾನು ಮಾತನಾಡುವುದಿಲ್ಲ ಎನ್ನುತ್ತಾರೆ. ಸದ್ಯ ಈ ವಿಚಾರ ಕುಲಪತಿ ಹಾಗೂ ಕುಲಸಚಿವರ ಗಮನಕ್ಕೂ ಇದ್ದು, ಈ ಬಗ್ಗೆ ಕುಲಪತಿಗಳು ಅದ್ಯಾವ ರೀತಿ ಕ್ರಮ ಕೈಗೊಳ್ಳುತ್ತಾರೋ ಕಾದು ನೋಡಬೇಕಿದೆ. ಈ ವಿಷಯವನ್ನ ವಿದ್ಯಾರ್ಥಿ ಸಂಘಟನೆಯವರು ಗಂಭೀರವಾಗಿ ಪರಿಗಣಿಸಿದ್ದು, ಇದು ಹೋರಾಟಕ್ಕೂ ಕಾರಣವಾಗಲಿದೆ.

By Ravikumar - 06-06-2026


Ads in Post