Search


ಪುಲ್ವಾಮ ದಾಳಿಯ ಮಾಸ್ಟರ್‌ ಮೈಂಡ್‌ ಮಟಾಷ್‌; ಅಪರಿಚಿತ ಬಂದೂಕುದಾರಿಗಳಿಗೆ ಧನ್ಯವಾದ..!

ನವದೆಹಲಿ : ಪುಲ್ವಾಮಾ ದಾಳಿಯ ಮಾಸ್ಟರ್ ಮೈಂಡ್ ಹಮ್ಜಾ ಬುರ್ಹಾನ್‌ನನ್ನ ಅಪರಿಚಿತ ಬಂದೂಕುದಾರಿಗಳು ಗುಂಡಿಟ್ಟು ಹತ್ಯೆ ಮಾಡಿದ್ದಾರೆ. 40 ಭಾರತೀಯ ಯೋಧರ ಸಾವಿಗೆ ಕಾರಣನಾಗಿದ್ದ ಈತ ಭಾರತ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದನು. ಪುಲ್ವಾಮದಲ್ಲೇ ಹುಟ್ಟಿ ಬೆಳೆದ ಈತ, ಪುಲ್ವಾಮದಲ್ಲೇ ಭಾರತ ಎಂದು ಮರೆಯದ ದಾಳಿ ನಡೆಸಿದ್ದನು,

ಭಾರತದ ಇತಿಹಾಸದಲ್ಲಿ ಎಂದು ಮರೆಯಲಾಗದ ದಿನವೆಂದರೆ ಅದು ಫೆಬ್ರವರಿ 14, 2019. ಅಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ನಡೆದ ಭೀಕರ ಆತ್ಮಾಹುತಿ ಉಗ್ರರ ದಾಳಿಯಲ್ಲಿ 40 ಸಿಆರ್‌ಪಿಎಫ್ (CRPF) ಸಾವಿಗೀಡಾಗಿದ್ದರು. ಈ ದಾಳಿಗೆ ದೇಶಾದ್ಯಂತ ಆಕ್ರೋಶವು ವ್ಯಕ್ತವಾಗಿತ್ತು. ಈ ದಾಳಿಗೆ ಕಾರಣರಾದವರನ್ನ ಹುಡುಕಿ ಶಿಕ್ಷೆ ಕೊಡುತ್ತೇವೆ ಎಂದು ಭಾರತ ಸರ್ಕಾರ ಎಚ್ಚರಿಕೆ ರವಾನಿಸಿತ್ತು. ಈ ಉಗ್ರರನ್ನ ಪೋಷಿಸುತ್ತಿದ್ದ ಪಾಕಿಸ್ತಾನದ ಮೇಲೆ ಭಾರತ ಏರ್‌ ಸ್ಟ್ರೈಕ್‌ ಮಾಡಿ, ಉಗ್ರ ಕ್ಯಾಂಪ್‌ಗಳನ್ನ ಪುಡಿಗಟ್ಟಿತ್ತು. ಇದೀಗ ಈ ದಾಳಿಯ ಮಾಸ್ಟರ್‌ ಮೈಂಡ್‌ ಹಮ್ಜಾನನ್ನು ಹೊಡೆದುರುಳಿಸಿದ್ದಾರೆ. 

ಹಮ್ಜಾ ಬುರ್ಹಾನ್ ಯಾರು?

ಪುಲ್ವಾಮಾದ ರತ್ನಿಪೋರಾ ಪ್ರದೇಶದ ಖಾರ್ಬತ್ಪೋರಾದಲ್ಲಿ ಜನಿಸಿದ ಬುರ್ಹಾನ್ 2017 ರಲ್ಲಿ ಉನ್ನತ ಶಿಕ್ಷಣವನ್ನು ಪಡೆಯುವ ನೆಪದಲ್ಲಿ ಪಾಕಿಸ್ತಾನಕ್ಕೆ ತೆರಳಿದ್ದ. ಆದಾರೆ ಆತ ನಿಷೇಧಿತ ಭಯೋತ್ಪಾದಕ ಸಂಘಟನೆ ಅಲ್-ಬದರ್‌ಗೆ ಸೇರ್ಪಡೆಯಾಗಿದ್ದ. ಅಲ್ಲದೇ ಅತಿ ಕಡಿಮೆ ಅವಧಿಯಲ್ಲಿಯೇ ಆ ಸಂಘಟನೆಯಲ್ಲಿ ಕಮಾಂಡರ್ ಹುದ್ದೆ ದಕ್ಕಿಸಿಕೊಂಡಿದ್ದ. ನಂತರ ಆತ ಕಾಶ್ಮೀರಕ್ಕೆ ಹಿಂತಿರುಗಿ ಯುವಕರನ್ನು ಧಾರ್ಮಿಕ ಮತಾಂಧರನ್ನಾಗಿ ಮಾಡುವ ಮತ್ತು ಅವರಿಗೆ ಧರ್ಮ ಪ್ರಚಾರ ಮಾಡುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದನು. ಅಷ್ಟೇ ಅಲ್ಲದೇ ಈತನನ್ನು ಉಗ್ರರು ಡಾಕ್ಟರ್‌ ಎಂದು ಕರೆಯುತ್ತಿದ್ದರು. ಈತನನ್ನ 2022ರಲ್ಲಿ ಕೇಂದ್ರ ಗೃಹ ಸಚಿವಾಲಯ ಭಯೋತ್ಪಾದಕ ಎಂದು ಘೋಷಿಸಿತ್ತು.

ದಕ್ಷಿಣ ಕಾಶ್ಮೀರದಲ್ಲಿ ಬುರ್ಹಾನ್ ತನ್ನ ಜಾಲವನ್ನು ಪುಲ್ವಾಮಾದಿಂದ ಶೋಪಿಯಾನ್‌ಗೆ ವಿಸ್ತರಿಸಿದ್ದ ಎನ್ನಲಾಗಿದೆ. ಫೆಬ್ರವರಿ 14, 2019 ರಂದು ನಡೆದ ಪುಲ್ವಾಮಾ ದಾಳಿ ಸೇರಿದಂತೆ ಜಮ್ಮು ಮತ್ತು ಕಾಶ್ಮೀರದಲ್ಲಿ ಹಲವಾರು ಭಯೋತ್ಪಾದನಾ ಸಂಬಂಧಿತ ಚಟುವಟಿಕೆಗಳೊಂದಿಗೆ ಬುರ್ಹಾನ್ ಸಂಬಂಧ ಹೊಂದಿದ್ದಾನೆ ಎಂದು ತಿಳಿದುಬಂದಿದೆ.

By thebigbulletin.com - 21-05-2026


Ads in Post