ಲಂಡನ್: ನಿರುದ್ಯೋಗಿ ಯುವಕರನ್ನ ಜಿರಳೆಗಳಿಗೆ ಹೋಲಿಸಿ ಸಾಕಷ್ಟು ಟೀಕೆ ಎದುರಿಸುತ್ತಿರುವ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರಿಗೆ ಲಂಡನ್ನಲ್ಲಿ ಮುಜುಗರ ಉಂಟು ಮಾಡುವ ಘಟನೆ ನಡೆದಿದೆ. ಲಂಡನ್ ಬಿರ್ಕ್ಬೆಕ್ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸ ಮಾಡುತ್ತಿದ್ದ ನ್ಯಾಯಮೂರ್ತಿಗಳಿಗೆ ಹಲವಾರು ವಿದ್ಯಾರ್ಥಿಗಳು ಅಡ್ಡಿ ಪಡಿಸಿದ್ದು. ಭಾರತದಲ್ಲಿ ಭಿನ್ನಾಭಿಪ್ರಾಯಗಳ ಬಗ್ಗೆ ಹೆಚ್ಚುತ್ತಿರುವ ದ್ವೇಷದ ಬಗ್ಗೆ ಕಳವಳವಿದೆ ಎಂದು ವಿದ್ಯಾರ್ಥಿಗಳು ಸಭೆಯ ನಡುವೆ ಕೂಗಿದ್ದಾರೆ. ಜೊತೆಗೆ ಇತ್ತೀಚೆಗೆ ಯುವಕರನ್ನ ಜಿರಳೆಗಳಿಗೆ ಹೋಲಿಸಿ ನೀಡಿದ್ದ ಹೇಳಿಕೆ ಬಗ್ಗೆಯೂ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸಿಜೆಐ ಸೂರ್ಯಕಾಂತ್ ಅವರು 'ಕೃತಕ ಬುದ್ಧಿಮತ್ತೆ ಮತ್ತು ಅಂತರರಾಷ್ಟ್ರೀಯ ಕಾನೂನು' ಕುರಿತು ಉಪನ್ಯಾಸ ನೀಡುತ್ತಿದ್ದರು ಮತ್ತು ಅವರ ಉಪನ್ಯಾಸದ ಸಮಯದಲ್ಲಿ ಇತ್ತೀಚಿನ "ಜಿರಳೆ" ಹೇಳಿಕೆಗೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಲಾಯಿತು. ಪ್ರಶ್ನೆ ಕೇಳುತ್ತಿದ್ದ ವಿದ್ಯಾರ್ಥಿಯನ್ನು ಕಾರ್ಯಕ್ರಮದ ಮಾಡರೇಟರ್ ಅಡ್ಡಿಪಡಿಸಿದರು. ನಂತರ ಹಲವಾರು ವಿದ್ಯಾರ್ಥಿಗಳು ಪ್ರತಿಭಟಿಸಿದರು. ಈ ಘಟನೆಯ ಕುರಿತಾದ ವೀಡಿಯೊಗಳು ವೈರಲ್ ಆಗಿದ್ದು, ಜಿರಳೆ ಪಕ್ಷದ ಸಾಮಾಜಿಕ ಮಾಧ್ಯಮಗಳಲ್ಲು ಈ ವಿಡಿಯೋಗಳನ್ನ ಹಂಚಿಕೊಂಡಿವೆ.
ಭಾರತ ಪ್ರತಿಕ್ರಿಯೆ ಏನು...!
ಘಟನೆಗೆ ಪ್ರತಿಕ್ರಿಯಿಸಿದ ಲಂಡನ್ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿ, ಘಟನೆಯನ್ನ ತೀವ್ರವಾಗಿ ಖಂಡಿಸಿದ್ದು. ಪ್ರೇಕ್ಷಕ್ ಈ ರೀತಿಯ ವರ್ತನೆ ಸ್ವೀಕಾರರ್ಹವಲ್ಲ, ಸಾರ್ವಜನಿಕ ಸಂವಾದದ ರೀತಿಯಲ್ಲಿ ಈ ಸಂವಾದ ಇರಲಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಭಿನ್ನಾಭಿಪ್ರಾಯಗಳು ಸಹಜ, ಆದರೆ ಅದನ್ನು ನಾಗರಿಕವಾಗಿ ಮತ್ತು ಗೌರವಯುತವಾಗಿ ವ್ಯಕ್ತಪಡಿಸಬೇಕು ಎಂದು ರಾಯಭಾರ ಕಚೇರಿ ಹೇಳಿದೆ.
ಸಿಜೆಐ ಟೀಕೆಗೆ ಕಾರಣವಾಗಿತ್ತು ಆ ಹೇಳಿಕೆ...!
ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು ನ್ಯಾಯಾಲಯದ ವಿಚಾರಣೆಯ ಸಂದರ್ಭದಲ್ಲಿ ನಿರುದ್ಯೋಗಿ ಯುವಕರ ಒಂದು ಭಾಗವನ್ನು "ಜಿರಳೆಗಳು" ಮತ್ತು "ಪರಾವಲಂಬಿಗಳು" ಎಂದು ಕರೆದ ಹೇಳಿಕೆ ವೈರಲ್ ಆಗಿತ್ತು. ಇದಾದ ಬೆನ್ನಲ್ಲೇ ಕಾಕ್ರೋಚ್ ಜನತಾ ಪಾರ್ಟಿ ಎಂಬ ಹೆಸರಿನಲ್ಲಿ ಯುವಕರು ಡಿಜಿಟಲ್ ಆಂದೋಲನ ನಡೆಸಿದ್ದರು, ಮತ್ತು ನೀಟ್ ಪ್ರಶ್ನೆ ಪತ್ರಿಕೆಯ ವಿರುದ್ದ ಪ್ರಶ್ನೆ ಎತ್ತಿದ್ದರು. ಇದರ ಕುರಿತಾಗಿ ನಿನ್ನೆ (ಶನಿವಾರ ) ದೆಹಲಿಯ ಜಂತರ್-ಮಂತರ್ನಲ್ಲಿ ಪ್ರತಿಭಟನೆಯನ್ನ ನಡೆಸಲಾಗಿತ್ತು.