Search


ಜಂತರ್‌ ಮಂತರ್‌ನಲ್ಲಿ ಪೆಲಟ್‌ ಗನ್‌ ಬಳಕೆ; ಪ್ರತಿಭಟಿಸಿ FIR ದಾಖಲಿಸಿದ ರಾಹುಲ್‌ ಗಾಂಧಿ

ನವದೆಹಲಿ: ಜಂತರ್‌ ಮಂತರ್‌  ಪ್ರತಿಭಟನೆ ವೇಳೆ ಭದ್ರತಾ ಪಡೆ ಬಳಸಿದ ಪೆಲಟ್‌ ಗನ್‌ನಿಂದ ಗಾಯಗೊಂಡಿದ್ದ ಯುವಕನ ದೂರು ದಾಖಲಿಸುತ್ತಿಲ್ಲ ಎಂದು ರಾಹುಲ್‌ ಗಾಂಧಿ ಪ್ರತಿಭಟನೆ ನಡೆಸಿದ್ದರು, ರಾಹುಲ್‌ ಪ್ರತಿಭಟನೆ ಬೆನ್ನಲ್ಲೇ ಸಂಸತ್‌ ಮಾರ್ಗ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪರಿಚಿತರ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

ಪೆಲೆಟ್‌ ಗನ್‌ ಬಳಕೆಯಿಂದ ತೀವ್ರ ಹಾನಿಗೆ ಒಳಗಾಗಿದ್ದ ಯುವಕ ಸಾಹಿಲ್‌ ದೂರನ್ನ ಪೊಲೀಸರು ದಾಖಲಿಸಿಕೊಂಡಿರಲಿಲ್ಲ, ಇದನ್ನ ತಿಳಿದು ಯುವಕನ ಜೊತೆ ಸಂಸತ್ ಮಾರ್ಗ ಪೊಲೀಸ್‌ ಠಾಣೆಗೆ ಆಗನಿಸಿದ ರಾಗಾ, FIR ದಾಖಲಿಸುವರೆಗೂ ಪ್ರತಿಭಟನೆ ನಡೆಸುವುದಾಗಿ ಠಾಣೆಯ ಮುಂದೆ ಧರಣಿ ಕೂತರು. ಗಾಯಗೊಂಡಿದ್ದ ಯುವಕ ಸಾಹಿಲ್ ಲೋಚಬ್ ಎಂಬಾತನಿಗೆ ನ್ಯಾಯ ಒದಗಿಸಬೇಕು ಮತ್ತು ತಪ್ಪಿತಸ್ಥ ಪೊಲೀಸ್ ಸಿಬ್ಬಂದಿಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ರಾಹುಲ್ ಗಾಂಧಿ ಸಂತ್ರಸ್ತ ಯುವಕನೊಂದಿಗೆ ಪೊಲೀಸ್ ಠಾಣೆಯ ಮುಂದೆ ಧರಣಿ ಕುಳಿತಿದ್ದರು.

ಕಾಂಗ್ರೆಸ್ ಮಾಡಿದ ಆರೋಪಗಳ ಪ್ರಕಾರ, ಜುಲೈ 20ರಂದು ದೆಹಲಿಯ ಜಂತರ್ ಮಂತರ್‌ನಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ಸಾಹಿಲ್ ಲೋಚಬ್ ಎಂಬ ಯುವಕನ ಮೇಲೆ ಪೊಲೀಸರು ಪೆಲೆಟ್ ಗನ್‌ನಿಂದ ದಾಳಿ ನಡೆಸಿದ್ದರು. ಇದರಿಂದಾಗಿ ಯುವಕನ ಕಣ್ಣಿಗೆ ತೀವ್ರ ಗಾಯಗಳಾಗಿದ್ದು, ಆತನ ಒಂದು ಕಣ್ಣಿನ ದೃಷ್ಟಿ ಕಳೆದುಕೊಳ್ಳುವ ಭೀತಿ ಎದುರಾಗಿದೆ.ಈ ಘಟನೆಯ ಕುರಿತು ದೂರು ನೀಡಲು ಹೋದಾಗ ಪೊಲೀಸರು ಎಫ್‌ಐಆರ್ ದಾಖಲಿಸಿಕೊಳ್ಳಲು ನಿರಾಕರಿಸಿದ್ದರು ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಈ ಘಟನೆಯ ಕುರಿತು ದೂರು ನೀಡಲು ಹೋದಾಗ ಪೊಲೀಸರು ಎಫ್‌ಐಆರ್ ದಾಖಲಿಸಿಕೊಳ್ಳಲು ನಿರಾಕರಿಸಿದ್ದರು ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಇದನ್ನು ಪ್ರತಿಭಟಿಸಿ ಅವರು ದೆಹಲಿ ಸಂಸತ್ ಮಾರ್ಗ ಪೊಲೀಸ್ ಠಾಣೆಯ ಡಿಸಿಪಿ ಕಚೇರಿಗೆ ತೆರಳಿ ಧರಣಿ ಸತ್ಯಾಗ್ರಹ ಆರಂಭಿಸಿದರು. ನೂರಾರು ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ಸ್ಥಳದಲ್ಲಿ ಜಮಾಯಿಸಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

By Ravikumar - 21-08-2026


Ads in Post