Search


2029ಕ್ಕೆ ರಾಹುಲ್‌ ಗಾಂಧಿಯನ್ನ ದೇಶದ ಪ್ರಧಾನಿ ಮಾಡಬೇಕು; ತೆಲಂಗಾಣ ಜನರಲ್ಲಿ ಸಿಎಂ ರೇವಂತ್‌ ರೆಡ್ಡಿ ಮನವಿ

ಹೈದರಾಬಾದ್: ರಾಹುಲ್‌ ಗಾಂಧಿಯನ್ನ(Rahul Gandhi)  2029ರ ಚುನಾವಣೆಯಲ್ಲಿ ಗೆಲ್ಲಿಸಿ, ದೇಶದ ಪ್ರಧಾನಿಯಾಗಿಸಬೇಕು ಎಂದು ತೆಲಂಗಾಣ ಸಿಎಂ ರೇವಂತ್‌ ರೆಡ್ಡಿ ಜನರಲ್ಲಿ ಮನವಿ ಮಾಡಿದ್ದಾರೆ. ರಾಹುಲ್‌ ಗಾಂಧಿಯನ್ನ ದೇಶದ ಭವಿಷ್ಯದ ನಾಯಕನಾಗಿ ಮಾಡಲು ತೆಲಂಗಾಣದ ಜನತೆ ಸಂಪೂರ್ಣ ಬೆಂಬಲ ನೀಡಬೇಕು ಎಂದು ಜನರ ಬಳಿ ಕೇಳಿಕೊಂಡಿದ್ದಾರೆ.

ತೆಲಂಗಾಣದ ನಡೆದ ಅಭಿವೃದ್ಧಿ ಕಾರ್ಯಕ್ರಮಗಳ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು ಪ್ರಮುಖವಾಗಿ ಈ ಕೆಳಗಿನ ವಿಷಯಗಳನ್ನು ಹಂಚಿಕೊಂಡಿದ್ದಾರೆ. ತೆಲಂಗಾಣಕ್ಕೆ ಪ್ರತ್ಯೇಕ ರಾಜ್ಯದ ಸ್ಥಾನಮಾನ ನೀಡಿದ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರಿಗೆ ಕೃತಜ್ಞತೆ ಸಲ್ಲಿಸುವುದು ನಮ್ಮ ಕರ್ತವ್ಯ. ಅದಕ್ಕಾಗಿ 2029ರ ಚುನಾವಣೆಯಲ್ಲಿ ರಾಹುಲ್ ಗಾಂಧಿ ಅವರನ್ನು ಪ್ರಧಾನಿ ಮಾಡಲು ರಾಜ್ಯದ ಜನತೆ ಕೈಜೋಡಿಸಬೇಕು ಎಂದರು. ಈ ದೇಶದ ಪ್ರಗತಿಗಾಗಿ ರಾಹುಲ್ ಗಾಂಧಿ ಅವರು ಪ್ರಧಾನಿ ಹುದ್ದೆಗೇರುವುದು ಇಂದಿನ ಅವಶ್ಯಕತೆಯಾಗಿದೆ. ತೆಲಂಗಾಣ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು 2034 ರವರೆಗೆ ಅಧಿಕಾರದಲ್ಲಿ ಇರಲಿದೆ. ಮುಂದಿನ ದಿನಗಳಲ್ಲೂ ಪಕ್ಷ ತನ್ನ ಸ್ಥಾನವನ್ನು ಮತ್ತಷ್ಟು ಬಲಪಡಿಸಿಕೊಳ್ಳಲಿದೆ.

ತೆಲಂಗಾಣಕ್ಕೆ ಪ್ರತ್ಯೇಕ ರಾಜ್ಯದ ಸ್ಥಾನಮಾನ ನೀಡಿದ ಸೋನಿಯಾ ಗಾಂಧಿ ಅವರ ತ್ಯಾಗಕ್ಕೆ ಕೃತಜ್ಞತೆ ಸಲ್ಲಿಸಲು, ರಾಜ್ಯದ ಜನತೆ 2029 ರಲ್ಲಿ ರಾಹುಲ್ ಗಾಂಧಿ ಅವರನ್ನು ಪ್ರಧಾನಿ ಮಾಡಲು ಬೆಂಬಲಿಸಬೇಕು ಎಂದು ಕರೆ ನೀಡಿದರು. ಹಿಂದಿನ ಬಿಆರ್‌ಎಸ್ ಸರ್ಕಾರ ಕೇವಲ ಜನರ ಫೋನ್‌ಗಳನ್ನು ಕದ್ದು ಕೇಳಲು ಮತ್ತೆ ಅಧಿಕಾರಕ್ಕೆ ಬರಬೇಕೇ ಎಂದು ಆಕ್ರೋಶ ವ್ಯಕ್ತಪಡಿಸಿದರು. ರೇವಂತ್ ರೆಡ್ಡಿ ಅವರು 20 ವರ್ಷಗಳ ಹಿಂದೆ ಸ್ವತಂತ್ರ ಅಭ್ಯರ್ಥಿಯಾಗಿ ಗೆದ್ದು, ಇಂದು ಮುಖ್ಯಮಂತ್ರಿಯಾಗಿ ಅದೇ ಮಣ್ಣಿಗೆ ಮರಳಿರುವುದು ಈ ಸಭೆಗೆ ರಾಜಕೀಯ ಹಾಗೂ ಭಾವನಾತ್ಮಕ ಮಹತ್ವ ತಂದುಕೊಟ್ಟಿದೆ.
 

By Ravikumar - 05-07-2026


Ads in Post