Search


2029ಕ್ಕೆ ರಾಹುಲ್‌ ಗಾಂಧಿ ಪ್ರಧಾನಿ: ಭವಿಷ್ಯ ನುಡಿದ ರಾಜಕೀಯ ಪರಿಣಿತರು..!

ಕೇಂದ್ರ ಸರ್ಕಾರದ ವಿರುದ್ದ ಉಂಟಾಗಿರುವ ಆಡಳಿತ ವಿರೋಧಿ ಅಲೆ ಬಗ್ಗೆ ರಾಜಕೀಯ ಪರಿಣಿತರು ಈಗಲೇ ಭವಿಷ್ಯ ನುಡಿಯುವ ಸಾಹಸ ಮಾಡಿದ್ದಾರೆ, ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ, ಶಿಕ್ಷಣ ವ್ಯವಸ್ಥೆಯ ಅದ್ವಾನ , ನಿರುದ್ಯೋಗ, ಸೇರಿದಂತೆ ಹಲವು ಸಮಸ್ಯೆಗಳಿಂದ ದೇಶದ ಯುವಕರು ಆಡಳಿತ ಸರ್ಕಾರದ ವಿರುದ್ದ ಅಸಮಧಾನಗೊಂಡಿದ್ದಾರೆ. ಇದು 2029ರ ಚುನಾವಣೆಯ ಮೇಲೆ ನೇರ ಪರಿಣಾಮ ಬೀರಲಿದೆ, ರಾಹುಲ್‌ ಗಾಂಧಿ ಪ್ರಧಾನಿ ಆಗಲಿದ್ದಾರೆ ಎಂದು ಖ್ಯಾತ ರಾಜಕೀಯ ವಿಶ್ಲೇಷಕ ಸಂಜಯ್‌ ಜಾ ಅಭಿಪ್ರಾಯಪಟ್ಟಿದ್ದಾರೆ. 

NDTVಯಲ್ಲಿ ನಡೆದ ಚರ್ಚ ಕಾರ್ಯಕ್ರಮದಲ್ಲಿ ಮಾತನಾಡಿದ ಸಂಜಯ್‌ ಜಾ, ಮೋದಿ ಸರ್ಕಾರದ ವಿರುದ್ದ ಎದ್ದಿರುವ ಆಡಳಿತ ವಿರೋಧಿ ಅಲೆಯನ್ನ ಸೂಕ್ಷ್ಮವಾಗಿ ತೆರೆದಿಟ್ಟಿದ್ದಾರೆ, ಮುಖ್ಯವಾಗಿ 2 ಅಂಶಗಳನ್ನ ಮಂಡಿಸಿದ ಸಂಜಯ್‌ ಜಾ, 2029ಕ್ಕೆ ರಾಹುಲ್‌ ಗಾಂಧಿ ನೇತೃತ್ವದಲ್ಲಿ ಇಂಡಿ ಒಕ್ಕೂಟ ಅಧಿಕಾರಕ್ಕೆ ಬಂದರೆ ಆಶ್ಚರ್ಯವೇನಲ್ಲ ಎಂದು ಹೇಳಿದ್ದಾರೆ, ಹಾಗಾದರೆ ಸಂಜಯ್‌ ಜಾ ಅವರು ಮಂಡಿಸಿದ ಅಂಶಗಳೇನು ಎಂದು ನೋಡುವುದಾದರೆ.

1 ಶಿಕ್ಷಣ ವ್ಯವಸ್ಥೆಯ ಅದ್ವಾನ, ಯುವಕರ ಆಕ್ರೋಶ..!

ಇತ್ತೀಚೆಗೆ ನಡೆದ ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ, ಸಿಬಿಎಸ್‌ಸಿ ಪರೀಕ್ಷೆಯ ಅಕ್ರಮದಿಂದಾಗಿ ದೇಶದ ಯುವಕರು ಆಕ್ರೋಶಗೊಂಡಿದ್ದಾರೆ, ಪ್ರಶ್ನೆ ಪತ್ರಿಕೆ ಸೋರಿಕೆ ಎಂಬುದು ಸಾಮಾನ್ಯವಾಗಿದ್ದು, ಇದರಿಂದಾಗಿ ವಿದ್ಯಾರ್ಥಿಗಳ ಭವಿಷ್ಯ ಅಂತಂತ್ರಕ್ಕೆ ಸಿಲುಕಿದಂತಾಗಿದೆ, ಜೊತೆಗೆ ಶಿಕ್ಷಣ ವ್ಯವಸ್ಥೆ ಬಗ್ಗೆ ಮೋದಿ ಸರ್ಕಾರ ತೋರಿರುವ ನಿರ್ಲಕ್ಷದಿಂದ, ಯುವಕರು ನಿರುದ್ಯೋಗಿಗಳಾಗುತ್ತಿದ್ದಾರೆ, ದೇಶದಲ್ಲಿ ಉತ್ಪಾದನ ವಲಯ ಕುಂಠಿತವಾಗಿದ್ದು, ಎಐ ಸೇರಿದಂತೆ ಅನೇಕ ಸ್ಪರ್ಧಾತ್ಮಕ ವಲಯದಲ್ಲಿ ದೇಶ ಹಿಂದೆ ಯುವಕರ ಅಸಮಧಾನಕ್ಕೆ ಕಾರಣವಾಗಿದ್ದು, ಇದರಿಂದಾಗಿ ಭವಷ್ಯದ ಚುನಾವಣೆಯಲ್ಲಿ ಎನ್‌ಡಿಯ ಮೈತ್ರಿಕೂಟಕ್ಕೆ ಹಿನ್ನಡೆಯಾಗುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ

2. ವಿಪಕ್ಷಗಳ ವಿರುದ್ದ ಮೋದಿ ಸರ್ಕಾರದ ದಾಳಿ..!

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಡಳಿತ ಸರ್ಕಾರಕ್ಕೆ ಸಮರ್ಥ ವಿರೋಧ ಪಕ್ಷವಿರುವುದು ಸಾಮಾನ್ಯ, ಆದರೆ ಮೋದಿ ಸರ್ಕಾರ ವಿರೋಧಿಗಳನ್ನ ಹತ್ತಿಕ್ಕುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ, ವಿರೋಧ ಪಕ್ಷದ ಶಾಸಕರು, ಸಂಸದರು ಹೋಲ್‌ಸೇಲ್‌ ರೀತಿ ಬಿಜೆಪಿ ಮೈತ್ರಿಕೂಟಕ್ಕೆ ಸೇರುತ್ತಿರುವುದು, ದೇಶದಲ್ಲಿ ಬಿಜೆಪಿ ವಿರುದ್ದ ಅಭಿಪ್ರಾಯ ರೂಪುಗೊಳ್ಳುವಂತೆ ಮಾಡುತ್ತಿದೆ, ಇದರ ಪರಿಣಾಮ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಮೇಲೆ ಬೀರುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗುತ್ತಿದೆ.

ಇದೆಲ್ಲದರ ಪರಿಣಾಮವಾಗಿ 2029ರ ಲೋಕಸಭಾ ಚುನಾವಣೆಯಲ್ಲಿ ಇಂಡಿ ಮೈತ್ರಿಕೂಟ ಅಧಿಕಾರಕ್ಕೆ ಬರುವ ಸಾಧ್ಯತೆ ಇದ್ದು, 15 ವರ್ಷಗಳ ಬಿಜೆಪಿ ಆಡಳಿತ ಅಂತ್ಯವಾಗುವ ಸಾಧ್ಯತೆ ಇದೆ ಎಂದು ರಾಜಕೀಯ ವಿಶ್ಲೇಷಕ ಸಂಜಯ್‌ ಜಾ ಅಭಿಪ್ರಾಯಪಟ್ಟಿದ್ದಾರೆ.

By Ravikumar - 20-06-2026


Ads in Post