ಬೆಂಗಳೂರು : ರೇಣುಕಾಸ್ವಾಮಿ ಕೊಲೆ(Renukaswamy Case) ಪ್ರಕರಣಕ್ಕೆ ಸ್ಪೋಟಕ ತಿರುವು ಸಿಕ್ಕಿದೆ. -ಪ್ರಕರಣದ ವಿಚಾರಣೆ ವೇಳೆ 17ನೇ ಸಾಕ್ಷಿಯೊಬ್ಬರು ನ್ಯಾಯಾಧೀಶರ ಮುಂದೆ ಅಪರಿಚಿತರಿಂದ ಬೆದರಿಕೆ ಕರೆಗಳು ಬರ್ತಿವೆ ಎಂದು ನ್ಯಾಯಾಲಯದ ಮುಂದೆ ಆತಂಕ ವ್ಯಕ್ತಪಡಿಸಿದ್ದಾರೆ. ಈ ಆರೋಪವನ್ನ ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯ ಸಾಕ್ಷಿಗೆ ಪೊಲೀಸ್ ಭದ್ರತೆ ಒದಗಿಸುವಂತೆ ಆದೇಶ ಹೊರಡಿಸಿದೆ. ಆದರೆ ಈ ಆರೋಪ ನಟ ದರ್ಶನ್ (Darshan) ಮೇಲೆ ಗಂಭೀರ ಪರಿಣಾಮ ಬೀರಬಹುದು ಎಂದು ವರದಿಯಾಗಿದ್ದು, ಈ ಕುರಿತಾದ ಒಂದು ವರದಿ ಇಲ್ಲಿದೆ.
ಅಪರಿಚಿತರಿಂದ ಬೆದರಿಕೆ ಕರೆಗಳು...!
ಪ್ರಕರಣದ ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಹಾಜರಾಗಿದ್ದ 17ನೇ ಸಾಕ್ಷಿಯು ತನಗೆ ಎದುರಾಗಿರುವ ಆತಂಕವನ್ನು ಕೋರ್ಟ್ ಮುಂದೆ ತೋಡಿಕೊಂಡಿದ್ದಾರೆ. ‘ಕೆಲವು ಅಪರಿಚಿತ ವ್ಯಕ್ತಿಗಳು ತನಗೆ ಫೋನ್ ಕರೆಗಳನ್ನು ಮಾಡುತ್ತಿದ್ದಾರೆ. ನ್ಯಾಯಾಲಯದಲ್ಲಿ ನಾವು ಹೇಳಿದಂತೆಯೇ ಸಾಕ್ಷ್ಯ ನುಡಿಯಬೇಕು ಎಂದು ಒತ್ತಡ ಹೇರುತ್ತಿದ್ದಾರೆ’ ಎಂದು ಸಾಕ್ಷಿಯು ಜಡ್ಜ್ ಎದುರು ಕಳವಳ ವ್ಯಕ್ತಪಡಿಸಿದ್ದಾರೆ. ಸಾಕ್ಷಿಯ ಈ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯವು, ಬಂದಿರುವ ಬೆದರಿಕೆ ಕರೆಗಳು ಹಾಗೂ ಒತ್ತಡದ ಕುರಿತು ಸಂಪೂರ್ಣ ವಿವರಗಳನ್ನು ಒಳಗೊಂಡ ಅಫಿಡವಿಟ್ (ಪ್ರಮಾಣಪತ್ರ) ಒಂದನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಸೂಚಿಸಿದ್ದಾರೆ. ಜೊತೆಗೆ ಸಾಕ್ಷಿಗೆ ರಕ್ಷಣೆ ನೀಡಿ. ಆರೋಪಿಗಳ ಪತ್ತೆ ಮಾಡುವಂತೆ ಪೊಲೀಸರಿಗೆ ನ್ಯಾಯಾಲಯ ಸೂಚನೆ ನೀಡಿದೆ.
ದರ್ಶನ್ ಸಂಕಷ್ಟವೇಕೆ..!
ನಟ ದರ್ಶನ್ ರೇಣುಕಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದು, ಸುಪ್ರೀಂಕೋರ್ಟ್ ಕಳೆದ ವರ್ಷ ದರ್ಶನ್‌ಗೆ ನೀಡಿದ್ದ ಜಾಮೀನು ರದ್ದು ಮಾಡಿತ್ತು. ಅಂದಿನಿಂದ ಜೈಲಿನಲ್ಲಿರುವ ದರ್ಶನ್ ಇತ್ತೀಚೆಗೆ ಜಾಮೀನಿಗಾಗಿ ಮತ್ತೊಮ್ಮೆ ಅರ್ಜಿ ಸಲ್ಲಿಸಿದ್ದರು, ಆದರೆ ಸುಪ್ರೀಂ ಕೋರ್ಟ್ ಜಾಮೀನು ತಿರಸ್ಕರಿಸಿ, ಒಂದು ವರ್ಷದ ಒಳಗೆ ಪ್ರಕರಣದ ವಿಚಾರಣೆ ನಡೆಸುವಂತೆ ಸೂಚಿಸಿತ್ತು, ಈ ಮೂಲಕ ಇನ್ನು ಒಂದು ವರ್ಷ ದರ್ಶನ್ ಜೈಲಿನಲ್ಲಿರುವುದು ಖಾಯಂ ಆಗಿತ್ತು. ಆದರೆ ಇತ್ತೀಚೆಗೆ ಸುಪ್ರಿಂ ನೀಡಿದ್ದ ತೀರ್ಪನ್ನ ಪರಿಶೀಲಿಸುವಂತೆ ದರ್ಶನ್ ಪರ ವಕೀಲರು ಮತ್ತೊಮ್ಮೆ ಅರ್ಜಿ ಸಲ್ಲಿಸಿದ್ದಾರೆ. ಇದರ ಈ ಸಾಕ್ಷಿ ಬೆದರಿಕೆ ಆರೋಪ ಪರಿಣಾಮ ಬೀರುವ ಸಾಧ್ಯತೆ ಇದೆ.
ದರ್ಶನ್ ನಟನಾಗಿದ್ದೇ ತಪ್ಪಾ..?
ಪ್ರಕರಣದ 17ನೇ ಸಾಕ್ಷಿಗೆ ಅಪರಿಚಿತ ವ್ಯಕ್ತಿಯೊಬ್ಬ ಬೆದರಿಕೆ ಹಾಕಿದ್ದಾನೆ ಎಂಬ ಆರೋಪ ಕೇಳಿ ಬಂದಿದ್ದು, ಇದಕ್ಕೂ ದರ್ಶನ್‌ಗೂ ಸಂಬಂಧವಿದೆ ಎಂದು ಬಿಂಬಿಸುವ ವರದಿಗಳು ಮಾಧ್ಯಮದಲ್ಲಿ ಭಿತ್ತರವಾಗಿದೆ. ಆದರೆ ನಿಜವಾಗಿಯೂ ದರ್ಶನ್ ಸಾಕ್ಷಿಗೆ ಬೆದರಿಕೆ ಹಾಕಲು ಸಾಧ್ಯವ ..? ಕಳೆದ ಒಂದು ವರ್ಷದಿಂದ ಜೈಲಿನಲ್ಲಿರುವ ದರ್ಶನ್ ಅದೇಗೆ ಸಾಕ್ಷಿಗೆ ಬೆದರಿಕೆ ಹಾಕಿದ್ದಾರೆ ಎಂಬುದು ತನಿಖೆಯಿಂದಷ್ಟೇ ಹೊರಗೆ ಬರಬೇಕಿದೆ. ಆದರೆ ದರ್ಶನ್‌ಗೆ ಇಷ್ಟು ವರ್ಷಗಳ ಕಾಲ ಯಾವ ನಟನೆ ವರವಾಗಿತ್ತೋ, ಅದು ಇಂದು ಶಾಪವಾಗಿದೆಯಾ ಅನ್ನೋ ಪ್ರಶ್ನೆಗಳು ಕೂಡ ಎದುರಾಗಿದೆ. ಲಕ್ಷಾಂತರ ಅಭಿಮಾನಿಗಳು ತಮ್ಮ ನೆಚ್ಚಿನ ನಟ ಜೈಲಿನಲ್ಲಿರುವುದನ್ನ ಕಂಡು ಕಂಗಲಾಗಿದ್ದಾರೆ. ಇದರಿಂದಾಗಿ ಯಾರಾದರು ಅಭಿಮಾನಿಗಳು ಈ ಕುಕೃತ್ಯಕ್ಕೆ ಕೈಹಾಕಿದ್ರಾ ಎಂಬುದು ಇನ್ನಷ್ಟೇ ತಿಳಿದು ಬರಬೇಕಿದೆ.
ಒಟ್ಟಿನಲ್ಲಿ ನಟ ದರ್ಶನ್‌ಗೆ ಕಳೆದ ಎರಡು ವರ್ಷಗಳಿಂದ ದುರದೃಷ್ಟ ಹೆಗಲೇರಿದ್ದು, ಸಂಕಷ್ಟಗಳ ಹೊಳೆಯಲ್ಲಿ ಈಜುತಿದ್ದಾರೆ, ಅವರ ಅಭಿಮಾನಿಗಳು ಕೂಡ ತಮ್ಮ ನೆಚ್ಚಿನ ನಟನ ಅನುಪಸ್ಥಿತಿಯಿಂದ ಕಂಗಾಲಾಗಿದ್ದು, ಆದಷ್ಟು ಬೇಗ ದರ್ಶನ್ ತಮ್ಮ ಎಲ್ಲಾ ಆರೋಪಗಳಿಂದ ಮುಕ್ತವಾಗಿ, ಮತ್ತೇ ತೆರೆ ಮೇಲೆ ಅದ್ದೂರಿಯಾಗಿ ಕಾಣಿಸಿಕೊಳ್ಳಲಿ ಎಂದು ಹಾರೈಸುತ್ತಿದ್ದಾರೆ.