Search


RSS ಸರಸಂಘ ಚಾಲಕ ಮೋಹನ್‌ ಭಾಗವತ್‌ ಚಲಿಸುತ್ತಿದ್ದ ರೈಲಿನ ಮೇಲೆ ಕಲ್ಲು ತೂರಾಟ

ಕಾನ್ಪುರ: ಆರ್​ಎಸ್​ಎಸ್ (​ RSS) ಸರಸಂಘ ಚಾಲಕ ಮೋಹನ್ ಭಾಗವತ್ (Mohan Bhagwat) ಇದ್ದ ರೈಲಿನ ಮೇಲೆ ಕಲ್ಲು ತೂರಾಟ ನಡೆದಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಮೋಹನ್‌ ಭಾಗವತ್‌ ಅವರು ಕಾನ್ಪುರದಿಂದ ದೆಹಲಿಗೆ ಶತಾಬ್ದಿ ರೈಲಿನಲ್ಲಿ ತೆರಳುತ್ತಿದ್ದರು, ಈ ವೇಳೆ ಫಿರೋಜಾಬಾದ್‌ ಬಳಿ ದುಷ್ಕರ್ಮಿಗಳು ರೈಲಿಗೆ ಕಲ್ಲು ತೂರಿದ್ದಾರೆ. ಘಟನೆಯಲ್ಲಿ ಮೋಹನ್‌ ಭಾಗವತ್‌ ಸೇರಿದಂತೆ ಎಲ್ಲಾ ಪ್ರಯಾಣಿಕರು ಸುರಕ್ಷಿತಾಗಿದ್ದಾರೆ ಎಂದು ತಿಳಿದು ಬಂದಿದ್ದು, ರೈಲ್ವೇ ಪೊಲೀಸರು ತನಿಖೆ ಆರಂಭಿಸಿದ್ದಾರೆ.

RSS ಸರಸಂಘ ಚಾಲಕರಾಗಿರುವ ಮೋಹನ್‌ ಭಾಗವತ್‌ ಅವರು ಕಾನ್ಪುರದಿಂದ ದೆಹಲಿಗೆ ತೆರಳುತ್ತಿದ್ದ ಸ್ವರ್ಣ ಶತಾಬ್ದಿ ಎಕ್ಸ್​ಪ್ರೆಸ್ ರೈಲಿನ ಮೇಲೆ ಗುರುವಾರ ಸಂಜೆ 7:15ರ  ಸುಮಾರಿಗೆ ಫಿರೋಜಾಬಾದ್ ಜಿಲ್ಲೆಯ ಮಖನ್‌ಪುರ ನಿಲ್ದಾಣದ ಬಳಿ ಹಾದುಹೋಗುವಾಗ ಈ ಕಲ್ಲು ತೂರಾಟ ನಡೆದಿದೆ. ಕಲ್ಲು ಎಸಿ ಕೋಚ್‌ನ ಕಿಟಕಿಗೆ ತಗುಲಿ ಹೊರಗಿನ ಗಾಜು ಮಾತ್ರ ಬಿರುಕು ಬಿಟ್ಟಿದೆ. ಅದೇ ಕೋಚ್‌ನಲ್ಲಿದ್ದ ಮೋಹನ್ ಭಾಗವತ್ ಅವರು ಎದುರು ಭಾಗದ ಸೀಟಿನಲ್ಲಿ ಕುಳಿತಿದ್ದರಿಂದ ಅವರಿಗೆ ಹಾಗೂ ರೈಲಿನಲ್ಲಿದ್ದ ಇತರ ಯಾವುದೇ ಪ್ರಯಾಣಿಕರಿಗೆ ಯಾವುದೇ ರೀತಿಯ ಹಾನಿಯಾಗಿಲ್ಲ.

ಆರ್​ಎಸ್​ಎಸ್​ ಸರಸಂಘ ಚಾಲಕ ಮೋಹನ್ ಭಾಗವತ್ ಇದ್ದ ರೈಲಿನ ಮೇಲೆ ಕಲ್ಲು ತೂರಾಟRSS leader Mohan Bhagwat

ಘಟನೆ ನಡೆದ ತಕ್ಷಣವೇ ಆಗ್ರಾ ವಲಯದ ಎಡಿಜಿ ಎಸ್‌ಕೆ ಭಗತ್, ಡಿಐಜಿ ಶೈಲೇಶ್ ಪಾಂಡೆ ಮತ್ತು ಫಿರೋಜಾಬಾದ್ ಎಸ್‌ಎಸ್‌ಪಿ ಆದಿತ್ಯ ಲಾಂಘೆ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳ ದಂಡೇ ಸ್ಥಳಕ್ಕೆ ಧಾವಿಸಿದ್ದು. ಪರಿಸ್ಥಿತಿಯನ್ನ ನಿಯಂತ್ರಿಸಿಸಿದ್ದಾರೆ. ಘಟನೆಯನ್ನ ಗಂಭೀರವಾಗಿ ಪರಿಗಣಿಸಿದ ರೈಲ್ವೇ ಪೊಲೀಸರು, ಹಳಿಗಳ ಸುತ್ತಮುತ್ತಲಿನ ಸಿಸಿಟಿವಿ ದೃಷ್ಯಗಳನ್ನ ಪರಿಶೀಲಿಸಿ ಕೆಲವೇ ಗಂಟೆಗಳಲ್ಲಿ ಓರ್ವ ಶಂಕಿತನನ್ನ ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದಾರೆ.

ತುಂಡ್ಲಾ ಜಂಕ್ಷನ್‌ನ ಹೊರ ಸಿಗ್ನಲ್‌ನಲ್ಲಿ ರೈಲನ್ನು ನಿಲ್ಲಿಸಿ, ಅಧಿಕಾರಿಗಳು ಇಡೀ ಕೋಚ್‌ನ ಸುರಕ್ಷತೆಯನ್ನು ಕೂಲಂಕಷವಾಗಿ ಪರಿಶೀಲಿಸಿದರು. ಎಲ್ಲವೂ ಸುರಕ್ಷಿತವಾಗಿದೆ ಎಂದು ಖಚಿತಪಡಿಸಿಕೊಂಡ ತಕ್ಷಣವೇ, ಅಂದರೆ ಸಂಜೆ 7.41 ಕ್ಕೆ ರೈಲು ದೆಹಲಿಯತ್ತ ತನ್ನ ಪ್ರಯಾಣವನ್ನು ಯಶಸ್ವಿಯಾಗಿ ಮುಂದುವರಿಸಿತು.

By Ravikumar - 12-06-2026


Ads in Post