Search


ಅಯೋಧ್ಯೆ ರಾಮ ಮಂದಿರ ಬಿಜೆಪಿಯವರ ಅಂಡರ್‌ವರ್ಲ್ಡ್‌ ಆಗಿದೆ ; ಶಿವಸೇನೆ ಸಂಸದ ಸಂಜಯ್‌ ರಾವತ್‌

ಅಯೋಧ್ಯೆಯ ರಾಮ ಮಂದಿರಕ್ಕೆ ಸಂಬಂಧಿಸಿದ ಅಕ್ರಮಗಳ ಕುರಿತು ಶಿವಸೇನೆ (ಯುಬಿಟಿ) ಸಂಸದ ಸಂಜಯ್ ರಾವತ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.  ಬಿಜೆಪಿ ಆಳ್ವಿಕೆಯಲ್ಲಿ ಅಯೋಧ್ಯೆ ನಗರವು ಅಂಡರ್‌ವರ್ಲ್ಡ್‌ ಆಗಿ ಮಾರ್ಪಟ್ಟಿದೆ. ಅಯೋಧ್ಯೆಯಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ಬಾಂಬೆ ಹೈಕೋರ್ಟ್ ನ್ಯಾಯಾಧೀಶ ನ್ಯಾಯಮೂರ್ತಿ ಮಾಧವ್ ಜಾಮ್ದಾರ್ ಅವರ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕೆಂದು ಸೂಚಿಸಿದರು.

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರಾವತ್, ʻಶ್ರೀ ರಾಮನ ಜನ್ಮಸ್ಥಳವೆಂದು ಪೂಜಿಸಲ್ಪಡುವ ಅಯೋಧ್ಯೆ ಈಗ ಅಪರಾಧಿಗಳು ಮತ್ತು ಭೂ ಮಾಫಿಯಾಗಳ ನಿಯಂತ್ರಣದಲ್ಲಿದೆ. ಹಿಂದುತ್ವದ ರಕ್ಷಕರು ಎಂದು ಹೇಳಿಕೊಳ್ಳುವವರು ಅಯೋಧ್ಯೆಯನ್ನು ನಿಯಂತ್ರಣಕ್ಕೆ ತೆಗೆದುಕೊಂಡು ಅದನ್ನು ಭೂಗತ ಲೋಕವನ್ನಾಗಿ ಮಾಡಿದ್ದಾರೆ. ಇಂದು ಅಯೋಧ್ಯೆ ಭೂಗತ ಲೋಕಕ್ಕಿಂತ ಕಡಿಮೆಯಿಲ್ಲ. ಅಲ್ಲಿ ಗೂಂಡಾಗಳು ಮತ್ತು ಲೂಟಿಕೋರರ ಆಳ್ವಿಕೆ ಇದೆ" ಎಂದು ರಾವತ್ ಆರೋಪಿಸಿದರು.

ರಾಮ ಮಂದಿರದ ದೇಣಿಗೆ ಪೆಟ್ಟಿಗೆಗಳಿಂದ ಬೆಲೆಬಾಳುವ ವಸ್ತುಗಳ ಕಳ್ಳತನದ ಆರೋಪವನ್ನು ಉಲ್ಲೇಖಿಸಿದ ರಾವತ್, ʻಅಯೋಧ್ಯೆಯ ಭೂಗತ ಲೋಕದ ದಾವೂದ್ ಇಬ್ರಾಹಿಂ ಯಾರು?" ಬಿಜೆಪಿ ನಾಯಕ ಮತ್ತು ಭಾರತೀಯ ಕುಸ್ತಿ ಒಕ್ಕೂಟದ ಮಾಜಿ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ಕೂಡ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಭಯ ವ್ಯಕ್ತಪಡಿಸಿದ್ದಾರೆ. ಈ ಘಟನೆಗೆ ಕಾರಣರಾದವರ ಬಗ್ಗೆ ನನಗೆ ತಿಳಿದಿದೆ, ಅಯೋಧ್ಯೆಯಲ್ಲಿ "ಭೂಗತ ಲೋಕ"ವನ್ನು ಯಾರು ನಡೆಸುತ್ತಿದ್ದಾರೆ ಎಂಬುದನ್ನು ಬಹಿರಂಗಪಡಿಸಲು ನಾನು ಸಿದ್ಧ ಎಂದು ಹೇಳಿದರು.

ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕೆಂಬ ಕರೆಗಳಿಗೆ ಪ್ರತಿಕ್ರಿಯಿಸಿದ ರಾವತ್‌, "ನ್ಯಾಯಮೂರ್ತಿ ಮಾಧವ್ ಜಾಮ್ದಾರ್ ಅವರ ಮೇಲ್ವಿಚಾರಣೆಯಲ್ಲಿ ತನಿಖೆಗೆ ನಡೆಸಬೇಕು. ಈ ವಿಷಯದಲ್ಲಿ ದೇಶದ ನ್ಯಾಯಾಂಗದ ಸಮ್ಮುಖದಲ್ಲಿ ಸತ್ಯ ಹೊರಗೆ ಬರಬೇಕಿದೆ.  ರಾಮನ ರಕ್ಷಕರೆಂದು ಬಿಂಬಿಸಿಕೊಳ್ಳು ಬಿಜೆಪಿಯವರಯ ಸ್ವತಃ ರಾಮ ಮಂದಿರವನ್ನು ಲೂಟಿ ಮಾಡಿದ್ದಾರೆ, ಇವರ ಏನಾದರಯ ಸಂಭವಿಸಿದರೆ ಮುಸ್ಲಿಂರನ್ನ ದೂಷಿಸುತ್ತಾರೆ, ಆದರೆ ಬಿಜೆಪಿಯವರೇ ಮೊಹಮ್ಮದ್‌ ಘಜ್ನಿ ರೀತಿ ರಾಮ ಮಂದಿರ ಲೂಟಿ ಮಾಡಿದ್ದಾರೆ ಎಂದು ಆರೋಪಿಸಿದರು.

By Ravikumar - 03-07-2026


Ads in Post