Search


ಲೋಕಭವನಕ್ಕೆ ತರಳಿ ರಾಜೀನಾಮೆ ಸಲ್ಲಿಸಿದ ಸಿದ್ದು ; ಡಿಕೆ ಮನೆ ಮುಂದೆ ಹೆಚ್ಚಿನ ಭದ್ರತೆ

ಬೆಂಗಳೂರು : ಕರ್ನಾಟಕದ ಮಾಸ್‌ ಲೀಡರ್‌, ಅಹಿಂದ ನಾಯಕ ಎಂದೆಲ್ಲಾ ಖ್ಯಾತಿಯಾಗಿದ್ದ ಸಿದ್ದರಾಮಯ್ಯನವರು ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ರಾಜ್ಯಪಾಲರ ಆಪ್ತ ಕಾರ್ಯದರ್ಶಿ ಪ್ರಭುಶಂಕರ್‌ ಅವರಿಗೆ ಸಿಎಂ ತಮ್ಮ ರಾಜೀನಾಮೆ ಪತ್ರವನ್ನ ಸಲ್ಲಿಸಿದ್ದು. ಈ ರಾಜೀನಾಮೆಯನ್ನ ರಾಜ್ಯಪಾಲರು ಅಂಗೀಕರಿಸಿದ ನಂತರ ಸಿಎಂ ಸ್ಥಾನ ತೆರವಾಗಲಿದೆ.

ತಮ್ಮ ಕಾವೇರಿ ನಿವಾಸದಿಂದ ಭೈರತಿ ಸುರೇಶ್‌ ಅವರ ಕಾರಿನಲ್ಲಿ ರಾಜಭವನಕ್ಕೆ ಪ್ರಯಾಣಿಸಿದ ಸಿಎಂ, ಅಲ್ಲಿಂದ ನೇರವಾಗಿ ಲೋಕಭವನಕ್ಕೆ ತೆರಳಿ ತಮ್ಮ ರಾಜೀನಾಮೆ ಪತ್ರವನ್ನ ರಾಜ್ಯಪಾಲರ ಕಾರ್ಯದರ್ಶಿಗೆ ಸಲ್ಲಿಕೆ ಮಾಡಿದ್ದಾರೆ. ನಂತರ ಸಿಎಂ ತಮ್ಮ ಗೃಹ ಕಚೇರಿ ಕೃಷ್ಣದಲ್ಲಿ ಮಾಧ್ಯಮ ಸುದ್ದಿಗೋಷ್ಟಿ ಹಮ್ಮಿಕೊಂಡಿದ್ದಾರೆ.

ರಾಜ್ಯಪಾಲರ ಅನುಪಸ್ಥಿತಿಯಲ್ಲೂ ಸಿದ್ದರಾಮಯ್ಯ ರಾಜೀನಾಮೆ ನೀಡಬಹುದೇ?

ಸದ್ಯ ರಾಜ್ಯಪಾಲರು ಬೆಂಗಳೂರಿನಲ್ಲಿ ಇಲ್ಲದೇ ಇರುವುದರಿಂದ ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವುದು ಸಾಧ್ಯವೇ? ಅವರ ಮುಂದಿರುವ ಆಯ್ಕೆಗಳೇನು ಎಂಬ ಪ್ರಶ್ನೆಗಳು ಮೂಡಿವೆ.  ರಾಜ್ಯಪಾಲರು ಲೋಕಭವನದಲ್ಲಿ ಇಲ್ಲದಿದ್ದರೂ ಗವರ್ನರ್ ವಿಶೇಷ ಕಾರ್ಯದರ್ಶಿ ಬಳಿ ರಾಜೀನಾಮೆ ಪತ್ರ ನೀಡಲು ಮುಖ್ಯಮಂತ್ರಿಗೆ ಸಾಂವಿಧಾನಿಕ ಅವಕಾಶ ಇದೆ. ಆದರೆ ಅಂಗೀಕಾರವಾಗಬೇಕಿದ್ದರೆ ರಾಜ್ಯಪಾಲರು ಬಂದೇ ಆಗಬೇಕು. 

ಡಿಕೆ ಶಿವಕುಮಾರ್ ಖಾಸಗಿ ನಿವಾಸದ ಬಳಿ ಹೆಚ್ಚಿನ ಭದ್ರತೆ

ಬೆಂಗಳೂರಿನ ಡಿಸಿಎಂ ಡಿಕೆ ಶಿವಕುಮಾರ್ ಅವರ ಖಾಸಗಿ ನಿವಾಸದ ಬಳಿ ಹೆಚ್ಚಿನ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದೆ. ರಸ್ತೆಯಲ್ಲಿ ಹೆಚ್ಚುವರಿ ಬ್ಯಾರಿಕೇಡ್ ಅಳವಡಿಸಲಾಗಿದೆ. ಪೊಲೀಸ್ ಕಬಡ್ಡಿ ಟೀಮ್ ಸೇರಿದಂತೆ ಹೆಚ್ಚುವರಿ ಪೊಲೀಸ್ ಸಿಬ್ಬಂದಿ ಕೂಡಾ ನಿಯೋಜಿಸಲಾಗಿದೆ.

By News Desk - 28-05-2026


Ads in Post