ಮಾಜಿ ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಅವರ 96ನೇ ಜನ್ಮ ದಿನಾಚರಣೆ ಹಾಗೂ ಚುನಾವಣೆ ಸುಧಾರಣೆಯಿಂದ ಸಮಾಜದ ಸುಧಾರಣೆ" ಕುರಿತಾದ ಚಿಂತನ-ಮಂಥನ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾಗವಹಿಸಿದ್ದರು.
ಮಾಜಿ ಸಚಿವರಾದ ಪಿ.ಜಿ.ಆರ್. ಸಿಂಧ್ಯಾ, ಬಿ. ಸೋಮಶೇಖರ್, ಶಾಸಕ ಗಣೇಶ್ ಪ್ರಸಾದ್, ಸಮಾಜ ಸೇವಕರಾದ ತೇಜಸ್ವಿನಿ ಅನಂತಕುಮಾರ್, ರೈತ ಪರ ಹೋರಾಟಗಾರರಾದ ಚುಕ್ಕಿ ನಂಜುಂಡಸ್ವಾಮಿ, ಮಾಜಿ ಶಾಸಕರಾದ ಶಿವಶಂಕರ್, ನಂಜಯ್ಯನ ಮಠ, ಡಾ. ಎಂ.ಪಿ. ನಾಡಗೌಡ, ಪಟೇಲರ ಪುತ್ರರಾದ ಮಹಿಮಾ ಪಟೇಲ್, ತ್ರಿಶೂಲ್ ಪಾಟಿ ಪಟೇಲ್ ಉಪಸ್ಥಿತರಿದ್ದರು.