Search


ನೆಪೋಟಿಸಂ ಬಗ್ಗೆ ರಾಜ್‌ಕುಮಾರ್‌ ಮಕ್ಕಳನ್ನ ಯಾಕೆ ಕೇಳಲಿಲ್ಲ: ನಟ ಸುದೀಪ್‌ ಖಡಕ್‌ ಮಾತು

ಮ್ಯಾಂಗೋ ಪಚ್ಚ (Mango Pachcha) ಸಿನಿಮಾದ ಸಕ್ಸಸ್‌ ಮೀಟ್‌ನಲ್ಲಿ ನಟ ಸುದೀಪ್‌ (Actor Sudeep) ನೆಪೋಟಿಸಂ ಬಗ್ಗೆ ಮಾತನಾಡುತ್ತಿರುವ ಕೆಲವರಿಗೆ ಖಡಕ್‌ ಆಗೇ ಉತ್ತರ ನೀಡಿದ್ದಾರೆ, ನೆಪೋಟಿಸಂ ಬಗ್ಗೆ ರಾಜ್‌ಕುಮಾರ್‌ ಮಕ್ಕಳನ್ನ ಯಾಕೆ ಕೇಳಲಿಲ್ಲ? ಏಕೆಂದರೆ ಅವರೆಲ್ಲರಿಗೂ ಅರ್ಹತೆ ಇತ್ತು, ಆಗಾಗಿ ಅವರೆಲ್ಲ ಸಿನಿಮಾಗೆ  ಬಂದರು. ಅದೇ ರೀತಿ ಅರ್ಹತೆ ಇದ್ವವರು ಯಾರೂ ಬೇಕಾದರು ಬರಬಹುದು ಎಂದರು.

ನಟ ಕಿಚ್ಚ ಸುದೀಪ್‌ ಅವರ ಸಹೋದರಿಯ ಮಗ ಸಂಚೀತ್‌ ಸಂಜೀವ್‌ ಅವರ ಅಭಿನಯದ ಮ್ಯಾಂಗೋ ಪಚ್ಚ ಸಿನಿಮಾ ಬಿಡುಗಡೆಯಾಗಿದೆ. ಈ ಸಿನಿಮಾದ ಪ್ರಮೋಷನ್‌ ಕೆಲಸಗಳಲ್ಲಿ ಸುದೀಪ್‌ ಅವರು ತೊಡಗಿಸಿಕೊಂಡಿದ್ದನ್ನ ಕಂಡ ಕೆಲವರು, ಸುದೀಪ್‌ ಸ್ವಜನ ಪಕ್ಷಪಾತ ಮಾಡುತ್ತಿದ್ದಾರೆ ಎಂಬಂತೆ ಬಿಂಬಿಸಿದ್ದರು. ಇವೆಲ್ಲಾ ಟೀಕೆಗಳಿಗೆ ನಟ ಸುದೀಪ್‌ ಸಿನಿಮಾದ ಸಕ್ಸಸ್‌ ಮೀಟ್‌ನಲ್ಲಿ ಖಡಕ್‌ ಹಾಗೇ ಉತ್ತರ ನೀಡಿದ್ದಾರೆ.

ನಟ ಸುದೀಪ್‌ ಹೇಳಿದ್ದೇನು...!

ನೆಪೋಟಿಸಂ ಕುರಿತಾಗಿ ಡಾ.ರಾಜ್ ಕುಮಾರ್ ಮಕ್ಕಳನ್ನು ಯಾಕೆ ಕೇಳಲಲ್ಲ? ಶಿವಣ್ಣಗೆ ಈ ಪ್ರಶ್ನೆ ಕೇಳಿದ್ದೀರಾ? ಅಂಬಾನಿನ ಕೇಳ್ಬೇಕಿತ್ತು ಅಂತೆಲ್ಲ ಕಿಡಿಕಾರಿದ್ದಾರೆ. ಯಾರಿಗೆಲ್ಲ ಯೋಗ್ಯತೆ ಇದೆಯೋ ಅವರಿಗೆ ಕೆಲಸ ಸಿಗುತ್ತದೆ. ಯಾವುದೋ ಸಿನಿಮಾ ಇಂಡಸ್ಟ್ರಿಯ ವಿಷಯವನ್ನ ಇಲ್ಲಿಗೆ ತರಬೇಡಿ ಅಂತ ಮಾರ್ಮಿಕವಾಗಿ ಮಾತಾಡಿದರು. 

ಡಾ.ರಾಜ್ ಕುಮಾರ್ ಅವರ ಎಲ್ಲ ಮಕ್ಕಳಿಗೂ ಅರ್ಹತೆ ಇತ್ತು. ಹಾಗಾಗಿ ಅವರೆಲ್ಲ ಬಂದರು. ನಾವೆಲ್ಲ ಶಿವಣ್ಣನನ್ನು ನೋಡಿಕೊಂಡು ಬೆಳೆದವರು. ಪುನೀತ್ ರಾಜ್ ಕುಮಾರ್ ಅವರು ಹಲವರಿಗೆ ಸ್ಫೂರ್ತಿ ಆಗಿದ್ದಾರೆ. ನನ್ನ ಕುಟುಂಬದಲ್ಲಿ ಇನ್ನೂ ಹಲವರು ಸದಸ್ಯರು ಇದ್ದಾರೆ. ಯಾರೂ ಸಿನಿಮಾ ರಂಗಕ್ಕೆ ಬಂದಿಲ್ಲ. ಸಂಚಿತ್‌ಗೆ ಸಿನಿಮಾ ಬಗ್ಗೆ ಒಲವಿತ್ತು. ಹಾಗಾಗಿ ಸಿನಿಮಾ ರಂಗಕ್ಕೆ ಬಂದ. ಅರ್ಹತೆ ಇದ್ದವರು ಯಾರು ಬೇಕಾದರೂ ಬರಬಹುದು ಅಂದಿದ್ದಾರೆ ಸುದೀಪ್.

ಸುದೀಪ್ ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ. ಕೇವಲ ತಮ್ಮ ಕುಟುಂಬದವರನ್ನು ಮಾತ್ರ ಸುದೀಪ್ ಬೆಳೆಸುತ್ತಾರೆ ಅಂತ ಹಲವರು ಕಾಮೆಂಟ್ ಮಾಡಿದರೆ, ಇನ್ನೂ ಕೆಲವರು ಸುದೀಪ್ ಅವರು ಯಾರಿಗೆಲ್ಲ ಸಪೋರ್ಟ್ ಮಾಡಿದ್ದಾರೆ ಅನ್ನುವ ಕುರಿತು ಕಾಮೆಂಟ್ ಮಾಡಿದ್ದಾರೆ.

By Ravikumar - 06-06-2026


Ads in Post