ಎಲ್ಲ ವಿಘ್ನಗಳನು ದೂರ ಮಾಡುವ , ಎಲ್ಲ ಶುಭಕಾರ್ಯ ಮಾಡುವಾಗ ಪೂಜಿಸಲುಪಡುವ , ನಮ್ಮ ಏಕದಂತ, ವಿನಾಯಕ, ಗೌರಿನಂದ, ಲಂಬೋದರ, ಹೀಗೆ ಹಲವು ಹೆಸರುಗಳಿಂದ ಪ್ರಸಿಧಿ ಇರುವ ನಮ್ಮ ಗಣಪತಿ.
ಭೂಲೋಕದಲ್ಲಿ ಗಣಪತಿಯ ಮಹಿಮೆ ಅಪಾರ ಅದರಲ್ಲಿಯೂ ನಮ್ಮ ಭಾರತ ದೇಶದಲ್ಲಿ ಸಾಂಸ್ಕೃತಿಕ ಹಾಗೂ ಇತಿಹಾಸ ಹೊಂದಿದ್ದು.
ನಮ್ಮ ಬೆಂಗಳೂರಿನಲ್ಲಿ ಐತಿಹಾಸಿಕ ಕ್ಷೇತ್ರಗಳು ಪ್ರಸಿಧಿ ಹೊಂದಿರುವ... ಅದರಲ್ಲಿ ನಮ್ಮ ಬಸವನಗುಡಿಯು ದೊಡ್ಡ ಗಣಪತಿ ದೇವಸ್ಥಾನ, ದೊಡ್ಡ ಬಸವಣ್ಣ ದೇವಸ್ಥಾನ, ಗವಿ ಗಂಗಾಧರ ದೇವಸ್ಥಾನ, ಮಲ್ಲಿಕಾರ್ಜುನ ದೇವಾಲಯ.
03 ಜೂಲೈ 2026 ಶುಕ್ರವಾರ ಸಂಕಷ್ಟಹರ ಚತುರ್ಥಿ ಪೂಜೆ ಎಲ್ಲಾ ಗಣಪತಿ ದೇವಾಲಯದಲ್ಲಿ ನಡೆಯಿತು.
ಆದರೆ ಶ್ರೀ ವಿದ್ಯಾರಣ್ಯ ಯುವಕ ಸಂಘದಿಂದ ' ನಮ್ಮ ಬೆಂಗಳೂರು ಗಣಪತಿಗೆ ವಿಶಿಷ್ಠ ಹಾಗೂ ಅದ್ಭುತ ಅಲಂಕಾರದಿಂದ ಎಲ್ಲರ ಗಮನ ಸೆಳೆದಿತ್ತು.
ಪ್ರತಿ ತಿಂಗಳು ಹುಣ್ಣಿಮೆಯ ನಂತರ ಬರುವ ಕೃಷ್ಣ ಪಕ್ಷದ ನಾಲ್ಕನೇ ದಿನದಂದು ಆಚರಿಸಲಾಗುವ ಈ ಪವಿತ್ರ ಸಂಕಷ್ಟಹರ ಚತುರ್ಥಿಯ ವಿಶೇಷ ದಿನದಂದು, ಗಣಪನಿಗೆ ಗರಿಗರಿಯಾದ ಪುರಿ ಉಂಡೆ ಹಾಗೂ ರವೆ ಉಂಡೆಯ ಅದ್ಭುತ ಮತ್ತು ಆಕರ್ಷಕ ಅಲಂಕಾರವನ್ನು ಮಾಡಲಾಗಿತ್ತು.
ಈ ತಿಂಗಳ ಸಂಕಷ್ಟಿಗೆ 1000ಕಿಂತು ಹೆಚ್ಚು ಪುರಿ ಉಂಡೆಯ ಮತ್ತು ರವೆ ಉಂಡೆಯ ನೈವೇದ್ಯ ಮತ್ತು ವಿಶೇಷ ಅಲಂಕಾರದಿಂದ ಕಣ್ಮನ ಸೆಳೆದ ವಿಘ್ನನಿವಾರಕ.
ಮತ್ತೊಂದು ವಿಶೇಷವೆಂದರೆ ಬ್ರಹ್ಮ ಕಮಲ ಹೂ ಗಣಪತಿಯ ಅಭಯ್ ಹಸ್ತದಲ್ಲಿ ಹಾಗೂ ಮತ್ತೊಂದು ಹೂ ಮೋದಕ ಮೇಲೆ ಅಲಂಕಾರ ಮಾಡಿದರು.
ಹಿನ್ನೆಲೆ..
ಬೆಂಗಳೂರು ಗಣೇಶ್ ಉತ್ಸವವು 1962ರ ಸೆಪ್ಟೆಂಬರ್ 9ರಂದು ಬಸವನಗುಡಿಯ ಡಿ.ವಿ.ಜಿ ರಸ್ತೆಯ ಮಲ್ಲಿಕಾರ್ಜುನ ದೇವಸ್ಥಾನದ ಗಲ್ಲಿಯಲ್ಲಿ ಪ್ರಾರಂಭವಾಯಿತು. ಅಂದಿನ ಗೃಹ ಸಚಿವ ಶ್ರೀ ಆರ್. ಎಮ್. ಪಾಟೀಲ್ ಇದನ್ನು ಉದ್ಘಾಟಿಸಿದ್ದರು ಮತ್ತು ಸಾಹಿತ್ಯ ದಿಗಜ್ಜ ಡಿ.ವಿ. ಗುಂಡಪ್ಪ (ಡಿವಿಜಿ) ಅವರು ಭಾಗವಹಿಸಿದ್ದರು. ಅಂದಿನಿಂದ ಇಂದಿನವರೆಗೆ, ಅಂದರೆ ಕಳೆದ 6೦ಕ್ಕೂ ಹೆಚ್ಚು ವರ್ಷಗಳಿಂದ ಈ 11 ದಿನಗಳ ಸಾಂಸ್ಕೃತಿಕ ಹಬ್ಬವು ಕೇವಲ ಒಂದು ಗಲ್ಲಿಯ ಹಬ್ಬವಾಗಿ ಉಳಿಯದೆ, ಇಂದು ಲಕ್ಷಾಂತರ ಜನರನ್ನು ಆಕರ್ಷಿಸುವ ಬೃಹತ್ ಉತ್ಸವವಾಗಿ ಬೆಳೆದಿದೆ. ಪ್ರಸ್ತುತ ಈ ಕಲಾ ವೈಭವವು ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಹಾಗೂ APS ಕಾಲೇಜು ಮೈದಾನದಲ್ಲಿ ಅದ್ದೂರಿಯಾಗಿ ಜರುಗುತ್ತದೆ.
"ಈ ತಿಂಗಳ ಸಂಕಷ್ಟಹರ ಚತುರ್ಥಿಗೆ ಪುರಿ ಮತ್ತು ರವೆ ಉಂಡೆಯ ವಿಶೇಷ ಅಲಂಕಾರದಿಂದ ಕಣ್ಮನ ಸೆಳೆದ ವಿಘ್ನನಿವಾರಕ, ಬರುವ ಮುಂದಿನ ತಿಂಗಳ ಸಂಕಷ್ಟಿಯಂದು ಯಾವ ಅದ್ಭುತ ಹಾಗೂ ಹೊಚ್ಚ ಹೊಸ ನವೀನ ಅಲಂಕಾರದೊಂದಿಗೆ ನಮಗೆ ದರ್ಶನ ನೀಡಲಿದ್ದಾನೆ? ಭಕ್ತಿಯ ಈ ಮಹಾ ವಿಸ್ಮಯವನ್ನು ಕಣ್ತುಂಬಿಕೊಳ್ಳಲು ಮುಂದಿನ ತಿಂಗಳವರೆಗೂ ಕಾಯಲೇಬೇಕು!"