Search


ತಮಿಳುನಾಡು ಬಿಜೆಪಿಯಲ್ಲಿ ರಾಜೀನಾಮೆ ಪರ್ವ: ಅಣ್ಣಾಮಲೈ ಬ್ರೈನ್‌ವಾಶ್‌ ಮಾಡಿದ್ದಾರೆ ಎಂದ ಅಧ್ಯಕ್ಷ ನೈನಾರ್‌ ನಾಗೇಂದ್ರ

ಚೆನ್ನೈ: ತಮಿಳುನಾಡು ಬಿಜೆಪಿಗೆ ಅಣ್ಣಾಮಲೈ(Annamalai) ರಾಜೀನಾಮೆ ನೀಡಿದ ಬೆನ್ನಲ್ಲೇ ಬಿಜೆಪಿಯ ಇತರ ನಾಯಕರು ರಾಜೀನಾಮೆ ಪರ್ವವನ್ನ ಆರಂಭಿಸಿದ್ದು, ಇದರಿಂದಾಗಿ ಕಂಗಾಲಾಗಿರುವ ಬಿಜೆಪಿ ರಾಜ್ಯಾಧ್ಯಕ್ಷ ನೈನಾರ್‌ ನಾಗೇಂದ್ರನ್‌ ತೀವ್ರ ಅಸಮಧಾನ ಹೊರ ಹಾಕಿದ್ದಾರೆ. ಅಣ್ಣಾಮಲೈ ಬಿಜೆಪಿಯ ಕೆಲವು ಸದಸ್ಯರಿಗೆ ಬ್ರೈನ್‌ ವಾಶ್‌ ಮಾಡಿ ರಾಜೀನಾಮೆ ಕೊಡಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಮಾಧ್ಯಮ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನೈನಾರ್‌ ನಾಗೇಂದ್ರನ್‌ ಬಿಜೆಪಿ ಕಾರ್ಯಕರ್ತರು ಯಾವುದೇ ವದಂತಿಗಳನ್ನು ನಂಬಬಾರದು ಎಂದು ಮನವಿ ಮಾಡಿದರು. “ಅಣ್ಣಾಮಲೈ ಅವರು ಬಿಜೆಪಿಗೆ ರಾಜೀನಾಮೆ ನೀಡಿದ್ದು, ಅದನ್ನು ಪಕ್ಷವು ಅಂಗೀಕರಿಸಿದೆ. ಆದರೆ, ತಮಗೆ ಪ್ರಧಾನಿ ಮೋದಿ ಅಥವಾ ಅಮಿತ್ ಶಾ ಅವರ ಆಶೀರ್ವಾದವಿದೆ ಎಂದು ಹೇಳಿಕೊಂಡು ರಾಜೀನಾಮೆ ನೀಡುವಂತೆ ನಮ್ಮ ಪಕ್ಷದ ಕೆಲವು ಸದಸ್ಯರ ಬ್ರೈನ್ ವಾಶ್ ಮಾಡಲಾಗುತ್ತಿದೆ. ಆದರೆ, ಯಾರೊಬ್ಬರಿಗೂ ರಾಜೀನಾಮೆ ನೀಡಲು ಹೈಕಮಾಂಡ್ ಅನುಮತಿ ನೀಡಿಲ್ಲ ಎಂದು ನಾನು ಸ್ಪಷ್ಟಪಡಿಸುತ್ತಿದ್ದೇನೆ” ಎಂದು ಅವರು ಹೇಳಿದ್ದಾರೆ.

ಮುಂದುವರಿದು ಮಾತನಾಡಿರುವ ನೈನಾರ್‌ ನಾಗೇಂದ್ರನ್‌, "ಬಿಜೆಪಿ ಕಾರ್ಯಕರ್ತರು ಯಾರ ಮಾತಿಗೂ ಮರಳಾಗಬಾರದು, ಬೇರೆಯವರು ಮಾಡುತ್ತಿರುವ ಮೂವ್‌ಮೆಂಟ್‌ಗೆ ಕೈ ಜೋಡಿಸುವವರು, ಪಕ್ಷದ ಭಾಗವಾಗಿ ಬಿಜೆಪಿ ಸದಸ್ಯರಾಗಿ ಮುಂದುವರಿಯಲು ಸಾಧ್ಯವಿಲ್ಲ ಎಂದಿದ್ದಾರೆ. ಜೊತೆಗೆ ಅಣ್ಣಾಮಲೈ ರಾಜೀನಾಮೆಯಿಂದ ಪಕ್ಷಕ್ಕೆ ಯಾವುದೇ ಹಿನ್ನಡೆಯಾಗಿಲ್ಲ ಎಂಬುದನ್ನ ಸ್ಪಷ್ಟಪಡಿಸಿದ್ದಾರೆ. 

ಇನ್ನು ಈ ಕುರಿತು ಮಾಜಿ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಸ್ಪಷ್ಟೀಕರಣ ನೀಡಿದ್ದು, " ನಾನು ರಾಜೀನಾಮೆ ನೀಡಿದ ನಂತರ, ಬೇರೆವರಿಗೆ ರಾಜೀನಾಮೆ ನೀಡಿ ನನ್ನ ಜೊತೆ ಬನ್ನಿ ಎಂದು ಒತ್ತಡ ಹಾಕಿಲ್ಲ,  ಎಂದು ನೈನಾರ್‌ ನಾಗೇಂದ್ರನ್‌ ಆರೋಪವನ್ನ ಅಣ್ಣಾಮಲೈ ನಿರಾಕರಿಸಿದ್ದಾರೆ.

By Ravikumar - 06-06-2026


Ads in Post