Search


ಐರ್ಲೆಂಡ್ ವಿರುದ್ಧ ಟೀಂ ಇಂಡಿಯಾಕ್ಕೆ 1 ರನ್ ಸೋಲು; ಅಹಂಕಾರಕ್ಕೆ ಕೊಡಲಿ ಪೆಟ್ಟು..!

ಭಾರತ ಹಾಗೂ ಐರ್ಲೆಂಡ್ ನಡುವಿನ ಎರಡು ಪಂದ್ಯಗಳ ಟಿ20 ಸರಣಿಯ ಕೊನೆಯ ಪಂದ್ಯದಲ್ಲೂ ಭಾರತದ ಸೋಲನಿಭವಿಸಿದೆ. ಐರ್ಲೆಂಡ್ ನೀಡಿದ್ದ 155 ರನ್ ಸುಲಭ ಗುರಿಯನ್ನ ಭೇದಿಸುವಲ್ಲಿ ಭಾರತದ ಬ್ಯಾಟರಗಳು ವಿಫಲರಾಗಿದ್ದಾರೆ. ಈ ಮೂಲಕ ಐರ್ಲೆಂಡ್ ತಂಡ ಭಾರತದ ವಿರುದ್ಧ ಇತಿಹಾಸಿಕ ಜಯ ದಾಖಲಿಸಿದೆ.

ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಐರ್ಲೆಂಡ್ ತಂಡ ನಿಗದಿತ 20 ಓವರ್ಗಳಲ್ಲಿ 155 ರನ್ ಪೇರಿಸಿತು. ಭಾರತದ ಪರ ಬೌಲರ್ಗಳು ಅದ್ಬುತ ಪ್ರದರ್ಶನ ನೀಡಿದರು. ತಮ್ಮ ಮೊದಲ ಪಂದ್ಯದಲ್ಲೇ ಅದ್ಭುತ ಲಯದಲ್ಲಿ ಕಂಡುಬಂದ ವೇಗಿ ಪ್ರಿನ್ಸ್ ಯಾದವ್, ಐರ್ಲೆಂಡ್ ಬ್ಯಾಟರ್‌ಗಳಿಗೆ ತೀವ್ರ ಕಂಟಕವಾದರು. ತಮ್ಮ ಕೋಟಾದ 4 ಓವರ್‌ಗಳಲ್ಲಿ ಕೇವಲ 22 ರನ್ ನೀಡಿ 3 ಪ್ರಮುಖ ವಿಕೆಟ್ ಕಡಿಯುವ ಮೂಲಕ ಐರಿಶ್ ಪಡೆಯ ಬ್ಯಾಟಿಂಗ್ ಬೆನ್ನೆಲುಬು ಮುರಿದರು. ಇವರಿಗೆ ಉತ್ತಮ ಸಾಥ್ ನೀಡಿದ ಅನುಭವಿ ಅರ್ಶ್‌ದೀಪ್ ಸಿಂಗ್ (35ಕ್ಕೆ 2 ವಿಕೆಟ್) ಮತ್ತು ಆಲ್‌ರೌಂಡರ್ ಶಿವಂ ದುಬೆ (25ಕ್ಕೆ 2 ವಿಕೆಟ್) ತಲಾ ಎರಡು ವಿಕೆಟ್ ಪಡೆದು ಮಿಂಚಿದರು. ಮತ್ತೊಬ್ಬ ವೇಗಿ ಹರ್ಷಿತ್ ರಾಣಾ 1 ವಿಕೆಟ್ ಪಡೆದರು.

155 ರನ್ಗಳ ಗುರಿ ಬೆನ್ನತ್ತಿದ ಭಾರತದ ತಂಡ ಆರಂಭದಲ್ಲೇ ತನ್ನ ವಿಕೆಟ್ ಕಳೆದುಕೊಳ್ಳುವ ಮೂಲಕ ಸಂಕಷ್ಟಕ್ಕೆ ಸಿಲುಕಿತು. ಆರಂಭಿಕ ಆಟಗಾರ ಸಂಜು ಸ್ಯಾಮ್ಸನ್ ಮತ್ತು ಅಭಿಷೇಕ್ ಶರ್ಮ ಶೂನ್ಯಕ್ಕೆ ಔಟ್ ಆದರೂ. ನಂತರ ಬ್ಯಾಟಿಂಗಗೆ ಬಂದ ಇಶಾನ್ ಕಿಶನ್(12) ಮತ್ತು ನಾಯಕ ಶ್ರೇಯಸ್ ಅಯ್ಯರ್(10) ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಆದರೆ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಬಿಸಿದ ತಿಲಕ್ ವರ್ಮಾ 55 ರನ್ ಗಳಿಸಿ ಗೆಲುವಿನ ಅಸೆ ಚಿಗುರಿಸಿದರು ಕೂಡ ಅವರು ವಿಕೆಟ ಒಪ್ಪಿಸಿದರು. ಕಡೆಯಲ್ಲಿ ಹರ್ಷಿತ ರಾಣಾ ಗೆಲುವಿಗಾಗಿ ಪ್ರಯತ್ನಿಸಿದರು ಕೂಡ ಪ್ರಯತ್ನ ಸಫಲವಾಗಲಿಲ್ಲ.

ಈ ಮೂಲಕ ವಿಶ್ವ ಚಾಂಪಿಯನ್ ಗಳೆಂಬ ಅಹಂಕಾರವನ್ನು ಮೈದುಂಬಿಸಿಕೊಂಡಿದ್ದ ಟೀಂ ಇಂಡಿಯಾಕ್ಕೆ ಕ್ರಿಕೆಟ್ ಶಿಶು ಐರ್ಲೆಂಡ್ ಎಂದಿಗೂ ಮರೆಯದ ಮರ್ಮಾಘಾತ ನೀಡಿದೆ. ಮೊದಲ ಟಿ20 ಪಂದ್ಯವನ್ನು 34 ರನ್‌ಗಳಿಂದ ಗೆದ್ದುಕೊಂಡಿದ್ದ ಐರ್ಲೆಂಡ್ ಎರಡನೇ ಪಂದ್ಯವನ್ನು ಗೆದ್ದುಕೊಳ್ಳುವ ಕ್ರಿಕೆಟ್‌ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಟೀಂ ಇಂಡಿಯಾ ವಿರುದ್ಧ ಟಿ20 ಸರಣಿಯನ್ನು ಗೆದ್ದುಕೊಂಡಿದ್ದಲ್ಲದೆ ಕ್ಲೀನ್ ಸ್ವೀಪ್ ಮಾಡಿದ ದಾಖಲೆಯನ್ನು ನಿರ್ಮಿಸಿತು.

 

By Ravikumar - 28-06-2026


Ads in Post