Search


ನಾಳೆ ಫೈನಲ್‌ ಆಗುತ್ತೇ ಸಚಿವ ಸಂಪುಟ ; ಮತ್ತೇ ದೆಹಲಿ ಯಾತ್ರೆ ಕೈಗೊಂಡ ಡಿಕೆ, ಸಿದ್ದು..!

ಬೆಂಗಳೂರು: ಡಿಕೆ ಶಿವಕುಮಾರ್‌ (DK Shivakumar) ರಾಜ್ಯದ ನೂತನ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುವ ದಿನಾಂಕ ಹತ್ತಿರವಾಗುತ್ತಿರುವ ನಡುವೆ, ಡಿಕೆ ನಿವಾಸಕ್ಕೆ ಕಾಂಗ್ರೆಸ್‌ನ ಮಾಜಿ ಸಚಿವರು ಮತ್ತು ಶಾಸಕರ ದಂಡೇ ಹರಿದು ಬರುತ್ತಿದ್ದು. ಡಿಕೆಶಿ ಬಳಿ ಮಂತ್ರಿಗಿರಿಗೆ ಡಿಮ್ಯಾಂಡ್‌ ಇಡುತ್ತಿರುವ ನಾಯಕರು, ತಮ್ಮ ಕೋರಿಕೆಗಳನ್ನ ಹೈಕಮಾಂಡ್‌ಗೆ ಮುಟ್ಟಿಸುವಂತೆ ಮನವಿ ಮಾಡುತ್ತಿದ್ದಾರೆ.

ಸಿಎಲ್‌ಪಿ ನಾಯಕನಾಗಿ ಆಯ್ಕೆಯಾಗಿರುವ ಡಿಕ ಶಿವಕುಮಾರ್‌ರನ್ನ ರಾಜ್ಯದ ನಿಯೋಜಿತ ಸಿಎಂ ಆಗಿ ನೇಮಕ ಮಾಡಿದ್ದು, ಈಗಾಗಲೇ ಡಿಕೆ ನಿವಾಸ ಪವರ್‌ ಸೆಂಟರ್‌ ಆಗಿ ಬದಲಾಗಿದೆ.  ಪ್ರೋಟೋಕಾಲ್ ಪ್ರಕಾರ ಅವರ ನಿವಾಸಕ್ಕೆ ಭದ್ರತೆ ಹೆಚ್ಚಿಸಲಾಗಿದ್ದು, ಕಾರ್ಯಕರ್ತರು, ಸಾರ್ವಜನಿಕರ ಭೇಟಿಗೆ ನಿರ್ಬಂಧ ಹಾಕಲಾಗಿದೆ. ಇದರ ನಡುವೆ ಮಾಜಿ ಸಚಿವರಾದ ಎಂಬಿ ಪಾಟೀಲ್‌, ಸಂತೋಷ್ ಲಾಡ್, ಪ್ರಿಯಾಂಕ್ ಖರ್ಗೆ, ಮಧು ಬಂಗಾರಪ್ಪ, ಕೆ.ಹೆಚ್‌. ಮುನಿಯಪ್ಪ, ಟಿಬಿ ಜಯಚಂದ್ರ ಮತ್ತು ಶಾಸಕರಾದ ಪುಟ್ಟರಂಗಶೆಟ್ಟಿ, ಅಶೋಕ್ ಪಟ್ಟಣ್, ಕೆ.ವೈ.ನಂಜೇಗೌಡ, ಗಣೇಶ್ ಹುಕ್ಕೇರಿ ಸೇರಿದಂತೆ ಹಲವರು ಭೇಟಿ ನೀಡಿದ್ದಾರೆ.

ನಾಳೆ ಫೈನಲ್‌ ಆಗುತ್ತೇ ಸಚಿವ ಸಂಪುಟ ರಚನೆಯ ಕಸರತ್ತು...!

ಸಾಲು ಸಾಲು ನಾಯಕರು ಸಚಿವ ಸ್ಥಾನಕ್ಕಾಗಿ ಒತ್ತಡ ಹಾಕುತ್ತಿದ್ದಂತೆ, ಡಿಕೆ ಶಿವಕುಮಾರ್​​ ನಾಳೆಯೇ ದೆಹಲಿಗೆ ಹಾರಲಿದ್ದಾರೆ. ಪ್ರಮಾಣ ವಚನ ಕಾರ್ಯಕ್ರಮ ಹಾಗೂ ಸಚಿವರ ಹೆಸರು ಫೈನಲ್ ಮಾಡಲು ಹೈಕಮಾಂಡ್ ಭೇಟಿ ಮಾಡಲಿದ್ದಾರೆ. ಸಚಿವ ಸಂಪುಟ ಕುರಿತು ಚರ್ಚಿಸಲಿರುವ ಡಿಕೆ ಶಿವಕುಮಾರ್​ ತಮ್ಮ ಜೊತೆ ಎಷ್ಟು ಸಚಿವರು ಪ್ರಮಾಣ ವಚನ ಸ್ವೀಕರಿಸಬೇಕು. ಮುಂದಿನ ಪ್ರಕ್ರಿಯೆ ಸೇರಿ ಹಲವು ವಿಚಾರದ ಬಗ್ಗೆ ಚರ್ಚಿಸಲಿದ್ದಾರೆ.

ಸಿದ್ದರಾಮಯ್ಯ ಕೂಡ ಮತ್ತೆ ನಾಳೆ ದೆಹಲಿಗೆ ತೆರಳಲು ಸಜ್ಜಾಗಿದ್ದಾರೆ. ಬೆಳಗ್ಗೆ 9.30ಕ್ಕೆ ದೆಹಲಿಗೆ ತೆರಳಲಿದ್ದಾರೆ. ತಮ್ಮ ಆಪ್ತರಿಗೆ ಸಚಿವ ಸ್ಥಾನಕ್ಕೆ ಪಟ್ಟು ಹಿಡಿದಿರುವ ಸಿದ್ದರಾಮಯ್ಯ ಹೈಕಮಾಂಡ್ ನಾಯಕರ ಜೊತೆ ಚರ್ಚೆ ಸಾಧ್ಯತೆ ಇದೆ. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ನಿಯೋಜಿತ ಸಿಎಂ ಡಿಕೆ ಶಿವಕುಮಾರ್​​, ಯಾರು ಯಾರು  ಸಚಿವರಾಗುತ್ತಾರೆ ಹೈಕಮಾಂಡ್ ನಿರ್ಧರಿಸುತ್ತೆ, ಈ ಬಗ್ಗೆ ನನಗೆ ಇನ್ನೂ ಮಾಹಿತಿಯಿಲ್ಲ ಎಂದು ಹೇಳಿದ್ದಾರೆ.

By Ravikumar - 01-06-2026


Ads in Post