ಭಾರತದಲ್ಲಿ ಮಾವಿನ ಹಣ್ಣಿನ ಸೀಸನ್ ಮಾರ್ಚ್‌ನಿಂದ ಆಗಸ್ಟ್‌ವರೆಗೆ ಇರುತ್ತದೆ. ದಕ್ಷಿಣದಿಂದ ಉತ್ತರ ಭಾರತದ ಕಡೆಗೆ ತಾಪಮಾನ ಹೆಚ್ಚಾದಂತೆಲ್ಲಾ ಆಯಾ ಭಾಗಗಳಲ್ಲಿ ಹಣ್ಣುಗಳು ಮಾಗಲು ಪ್ರಾರಂಭಿಸುತ್ತವೆ. ಭಾರತದಲ್ಲಿ 1,500 ಕ್ಕೂ ಹೆಚ್ಚು ತಳಿಗಳ ಮಾವಿನ ಹಣ್ಣುಗಳಿವೆ. ಇವುಗಳಲ್ಲಿ ಸುಮಾರು 30 ತಳಿಗಳನ್ನು ದೊಡ್ಡ ಪ್ರಮಾಣದಲ್ಲಿ ವಾಣಿಜ್ಯಿಕವಾಗಿ ಬೆಳೆಯಲಾಗುತ್ತದೆ.
ಮಾವಿನ ಹಣ್ಣಿನ ಸೀಸನ್ ಟೈಮ್‌ಲೈನ್ ಆಧಾರದ ಮೇಲೆ ದೇಶದ ವಿವಿಧ ಭಾಗಗಳಲ್ಲಿ ಲಭ್ಯವಾಗುವ ಮಾವಿನ ತಳಿಗಳು:
*ಮಾರ್ಚ್ – ಏಪ್ರಿಲ್ (ಆರಂಭಿಕ ಸೀಸನ್)* : ದಕ್ಷಿಣ ಮತ್ತು ಪಶ್ಚಿಮ ಭಾರತದಲ್ಲಿ ಸುಗ್ಗಿ ಆರಂಭವಾಗುತ್ತದೆ. ಆರಂಭದಲ್ಲಿ ಬಾದಾಮಿ, ಬಂಗನಪಲ್ಲಿ ಮತ್ತು ತೋತಾಪುರಿ ಮಾರುಕಟ್ಟೆಗೆ ಬರುತ್ತವೆ.
*ಏಪ್ರಿಲ್ – ಮೇ (ಪೀಕ್ ಸೀಸನ್):* ಇದು ಮಾವಿನ ಹಣ್ಣಿನ ಅತ್ಯುತ್ತಮ ಅವಧಿ. ಆಲ್ಫಾನ್ಸೋ (ಹಾಪಸ್) ಮತ್ತು ಗಿರ್ ಕೇಸರ್ ತಳಿಗಳು ಈ ಸಮಯದಲ್ಲಿ ಮಾರುಕಟ್ಟೆಯನ್ನು ಆಳುತ್ತವೆ.
*ಜೂನ್ – ಜುಲೈ (ಮಧ್ಯ ಮತ್ತು ಕೊನೆಯ ಸೀಸನ್* ): ಮಾವಿನ ಸೀಸನ್ ಉತ್ತರ ಮತ್ತು ಪೂರ್ವ ಭಾರತಕ್ಕೆ ಸ್ಥಳಾಂತರಗೊಳ್ಳುತ್ತದೆ. ದಶೇರಿ, ಹಿಮಸಾಗರ್ ಮತ್ತು ಲಂಗ್ರಾ ತಳಿಗಳು ಲಭ್ಯವಾಗುತ್ತವೆ.
*ಜುಲೈ ಕೊನೆ – ಆಗಸ್ಟ್ (ಸೀಸನ್ ):* ಸೀಸನ್‌ನ ಕೊನೆಯಲ್ಲಿ ಚೌನ್ಸಾ ಮತ್ತು ಫಜ್ಲಿ ತಳಿಗಳು ಸಿಗುತ್ತವೆ.
ಪ್ರಮುಖ ಮಾವಿನ ತಳಿಗಳು ವಿವರ :-
ಭಾರತದ ವಿವಿಧ ಭಾಗಗಳಲ್ಲಿ (ಭೌಗೋಳಿಕ ಸೂಚ್ಯಂಕ) ಪಡೆದ ಪ್ರಮುಖ ತಳಿಗಳು ಬೆಳೆಯುವ ತಿಂಗಳು, ರಾಜ್ಯಗಳು ಮತ್ತು ಪ್ರಮುಖ ಜಿಲ್ಲೆಗಳ ವಿವರ
1 . *ಆಲ್ಫಾನ್ಸೋ (ಹಾಪಸ್ )* : ಏಪ್ರಿಲ್ – ಮೇ ತಿಂಗಳು - ಮಹಾರಾಷ್ಟ್ರ: ರತ್ನಗಿರಿ, ಸಿಂಧುದುರ್ಗ, ರಾಯಗಢ
2. *ಕೇಸರ್* : ಮೇ – ಜೂನ್ ತಿಂಗಳು - ಗುಜರಾತ್: ಜುನಾಗಢ್ (ಗಿರ್), ಅಮ್ರೇಲಿ, ವಲ್ಸಾದ್
3. *ಬಂಗನಪಲ್ಲಿ* ( *ಸಫೇದಾ* ) : ಏಪ್ರಿಲ್ - ಜೂನ್ ತಿಂಗಳು ಆಂಧ್ರಪ್ರದೇಶ: ಕರ್ನೂಲ್ (ಬಂಗನಪಲ್ಲೆ), ಕೃಷ್ಣ, ಗುಂಟೂರು
4. *ಬಾದಾಮಿ* : ಏಪ್ರಿಲ್ - ಜೂನ್ ತಿಂಗಳು ಕರ್ನಾಟಕ: ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು
5. *ದಶೇರಿ* : ಜೂನ್ - ಜುಲೈ ತಿಂಗಳು - ಉತ್ತರ ಪ್ರದೇಶ: ಲಕ್ನೋ (ಮಲಿಹಾಬಾದ್), ಕಾಕೋರಿ
6. *ಚೌನ್ಸಾ* : ಜುಲೈ - ಆಗಸ್ಟ್ ತಿಂಗಳು - ಉತ್ತರ ಪ್ರದೇಶ: ಹರ್ದೋಯ್, ಸಹರಾನ್‌ಪುರ್
7. *ಹಿಮಸಾಗರ್* : ಮೇ - ಜೂನ್ ತಿಂಗಳು - ಪಶ್ಚಿಮ ಬಂಗಾಳ: ಮಾಲ್ಡಾ, ಮುರ್ಷಿದಾಬಾದ್
8. *ತೋತಾಪುರಿ* : ಮೇ - ಜೂನ್ ತಿಂಗಳು - ಕರ್ನಾಟಕ ಮತ್ತು ಆಂಧ್ರ: ಕೋಲಾರ, ಚಿತ್ತೂರು, ತುಮಕೂರು
9. *ಕರಿ ಇಶಾದ್* : ಮೇ - ಜೂನ್ ತಿಂಗಳು - ಕರ್ನಾಟಕ: ಉತ್ತರ ಕನ್ನಡ (ಅಂಕೋಲಾ
ಮಾವಿನ ಹಣ್ಣಿನ ಪಾನೀಯನ ಹಾಗೂ ಅದರ ಸೇವನೆ ಅಷ್ಟೇ ಸೀಮಿತ ಅಲ್ಲ . ಹಣ್ಣುಗಳ ರಾಜ ಎಂಬ ಖ್ಯಾತಿಯೂ ಹೀಗೆ ಸುಮ್ನೇ ಅಲ್ಲ ರುಚಿ ರುಚಿಯಾದ ವಿಶಿಷ್ಟ ಖಾದ್ಯಗಳು ತಯಾರಿಸುತ್ತಾರೆ.
ಇಡೀ ವರ್ಷಕ್ಕೆ ಆಗುವ ಅಷ್ಟು ಉಪಿನಿಕಾಯಿ, ಹಪ್ಪಳ, ಸಂಡಿಗೆಯೂ ವಿಟಮಿನ್ ಡಿ ಹೊಂದಿದ್ದು (ಬೇಸಗೆ ಕಾಲದ ಇದು ಒಂದು ಉಪಯೋಗ) ಮಾವಿನಕಾಯಿ ಚಿತ್ರಣ, ಮಾವಿನಹಣ್ಣಿನ ಹೋಳಿಗೆ ಇನ್ನು ಹಲವು ಬಗ್ಗೆಯ ಸಿಹಿ ಮತ್ತು ಖಾರಾ ಖಾದ್ಯಗಳ ವಿವರಣೆ ಇಲ್ಲಿದೆ
ಭಾರತೀಯ ಅಡುಗೆಯಲ್ಲಿ ಹಣ್ಣಾದ ಮತ್ತು ಹಸಿ ಮಾವಿನಕಾಯಿ ಎರಡನ್ನೂ ಬಳಸಲಾಗುತ್ತದೆ
*ಹಣ್ಣಾದ ಮಾವಿನ ರೆಸಿಪಿಗಳು*
1. *ಆಮ್ರಸ್ (ಸೀಕರಣೆ):* ಸಿಹಿಯಾದ ಮಾವಿನ ಹಣ್ಣಿನ ರಸ. ಇದನ್ನು ಬಿಸಿ ಬಿಸಿ ಪೂರಿಯೊಂದಿಗೆ ಸವಿಯಲಾಗುತ್ತದೆ.
2. *ಮ್ಯಾಂಗೋ ಲಸ್ಸಿ:* ಮಾವಿನ ಹಣ್ಣಿನ ರಸ, ಮೊಸರು ಮತ್ತು ಏಲಕ್ಕಿ ಸೇರಿಸಿ ಮಾಡುವ ತಂಪು ಪಾನೀಯ.
3. *ಮ್ಯಾಂಗೋ ಕುಲ್ಫಿ:* ಮಾವಿನ ಹಣ್ಣಿನ ತುಂಡುಗಳು ಮತ್ತು ಹಾಲಿನಿಂದ ಮಾಡುವ ಸಾಂಪ್ರದಾಯಿಕ ಐಸ್‌ಕ್ರೀಮ್.
4. *ಮಾವಿನಹಣ್ಣಿನ ಸಸ್ವೆ / ಗೊಜ್ಜು:* ಕರಾವಳಿ ಭಾಗದಲ್ಲಿ ಹಣ್ಣಾದ ಸಣ್ಣ ಮಾವಿನಹಣ್ಣು ಮತ್ತು ಕಾಯಿತುರಿ ಬಳಸಿ ಮಾಡುವ ಸಾರು.
*ಹಸಿ ಮಾವಿನಕಾಯಿ ರೆಸಿಪಿಗಳು**
1. *ಆಮ್ ಪನ್ನಾ / ಮಾವಿನಕಾಯಿ ಪಾನಕ* : ಸುಟ್ಟ ಹಸಿ ಮಾವಿನಕಾಯಿ, ಪುದೀನಾ ಮತ್ತು ಜೀರಿಗೆ ಬಳಸಿ ಮಾಡುವ ಬೇಸಿಗೆಯ ಆರೋಗ್ಯಕರ ಪಾನೀಯ.
2. *ಮಾವಿನಕಾಯಿ ಉಪ್ಪಿನಕಾಯಿ* : ಸಾಸಿವೆ ಎಣ್ಣೆ, ಮಸಾಲೆ ಮತ್ತು ಹಸಿ ಮಾವಿನಕಾಯಿ ಬಳಸಿ ಮಾಡುವ ಸಾಂಪ್ರದಾಯಿಕ ಉಪ್ಪಿನಕಾಯಿ.
3. *ಮಾವಿನಕಾಯಿ ತೊಕ್ಕು / ಚಟ್ನಿ:* ಸಿಹಿ ಮತ್ತು ಹುಳಿ ಮಿಶ್ರಿತ ಮಾವಿನಕಾಯಿ ಸಾಸ್ ಅಥವಾ ಚಟ್ನಿ.
4. *ಮಾವಿನಕಾಯಿ ಪಪ್ಪು (ತೊವ್ವೆ):* ಹಸಿ ಮಾವಿನಕಾಯಿ ಬಳಸಿ ಮಾಡುವ ದಕ್ಷಿಣ ಭಾರತದ ಶೈಲಿಯ ಬೇಳೆ ಸಾರು.
ಅಹಾ.. ಅಹಾ ಮಾವಿನ ಖಾದ್ಯಗಳು... ಎಷ್ಟು ಬಗೆಗಳು ಈಗಿನ ಟ್ರೆಂಡ್ ಹೇಗಿದೆ ಅಂದ್ರೆ ಥೀಮ್ ರಿಲೇಟೆಡ್ ಡೆಸ್ಟಿನೇಷನ್.. ಡ್ರೆಸ್ ಕೋಡ್ ಅಂಥ ಇರೋವಾಗ ಮಾವಿನ ಮೇಳ ಹಾಗೂ ತುಂಬಾ ರೆಸ್ಟೋರೆಂಟ್ಗಳಲ್ಲಿ ಈಗ ಮ್ಯಾಂಗೋ ಬಫೆಟ್ ಇದು ಮ್ಯಾಂಗೋ ಪ್ರಿಯರು ಸವಿದು ಎಂಜಾಯ್ ಮಾಡಬಹುದು
ಹೇಗಿದ್ರು ಬೇಸಿಗೆ ಕಾಲ ಮನೆನಲ್ಲಿ ಮಕ್ಕಳಿಗೆ ರಜೆ ಇದು ವೀಕೆಂಡ್ ಪ್ಲಾನ್ಸ್ ಅಂತ ಅಮೂಸ್ಮೆಂಟ್ ಪಾರ್ಕ್ ಆತ ಅಥವಾ ಸ್ಪೋರ್ಟ್ ಕ್ಯಾಂಪ್ ಆತ ಒಂದು ದಿನ ಅಥವಾ ಒಂದು ಸೀಮಿತ ಅವಧಿಗೆ ಅವರಿಗೆ ಮನೋರಂಜನೆ.. ಇನಷ್ಟು ರೋಮಾಂಚಕವಾದ ಅನುಭವ ನೀಡಬಹುದು.ಮಕ್ಕಳು ಹಾಗೂ ಎಲ್ಲ ವಯಸ್ಕರು ಒಮ್ಮೆ ಆದರೂ ಹೋಗಲೇಬೇಕು ಇದರಿಂದ ಹಳೆಯ ನೆನಪುಗಳು ಹಾಗೂ ಮಕ್ಕಳಿಗೆ ಮಾವಿನ ರಾಜನ ಬಗ್ಗೆ ಅರಿವು ಇರುತ್ತೆ
ಹೇಗೆ ಅಂದ್ರೆ ನಮ್ಮ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಾವಿನ ಮೇಳಗಳು ನಡೆಯುತ್ತಿವೆ. ಯಾವಾಗ ಎಲ್ಲಿ ಅನೋ ವಿವರಣೆ ಇಲ್ಲಿದೆ
ಕರ್ನಾಟಕ ರಾಜ್ಯ ಮಾವಿನ ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮವು (KSMDMCL) ಈ ಬಾರಿ ಬೆಂಗಳೂರಿನಲ್ಲಿ ವಿಭಿನ್ನ ಹಂತಗಳಲ್ಲಿ ಮಾವಿನ ಮೇಳಗಳನ್ನು ಆಯೋಜಿಸುತ್ತಿದೆ.
1. *ಲಾಲ್‌ಬಾಗ್ ಮಾವು ಮತ್ತು ಹಲಸಿನ ಮೇಳ*
ಲಾಲ್‌ಬಾಗ್‌ನ ಪ್ರಮುಖ ಮೇಳವು ಮೇ ,2026 ರ ನಾಲ್ಕನೇ ವಾರದಲ್ಲಿ(ದಿನಾಂಕ ಇನ್ನು ನಿಗದಿಪಡಿಸಿಲ್ಲ) ಆರಂಭವಾಗಲಿದೆ. ಕೋಲಾರ ಭಾಗದ ಮಾವು ನೈಸರ್ಗಿಕವಾಗಿ ಮಾಗಲು ಸಮಯ ಬೇಕಾಗಿರುವುದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
2. *ಮೀನಾ ಬಜಾರ್ ಪ್ರದರ್ಶನ:* ಮೇ 15 ರಿಂದ ಮೇ 31, 2026 ರವರೆಗೆ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ನಡೆಯಲಿದ್ದು, ಇಲ್ಲಿ ಕರಕುಶಲ ವಸ್ತುಗಳ ಜೊತೆಗೆ ಮಾವಿನ ಹಣ್ಣುಗಳೂ ಲಭ್ಯವಿವೆ.
3. *ಜೆ.ಪಿ. ನಗರ ಮಾವು ಕಾರ್ನಿವಲ್:* ಶುಭ ಕನ್ವೆನ್ಷನ್‌ನಲ್ಲಿ ಮೇ 22 ರಿಂದ ಮೇ 31, 2026 ರವರೆಗೆ ನಡೆಯಲಿದ್ದು, 50ಕ್ಕೂ ಹೆಚ್ಚು ತಳಿಗಳ ಪ್ರದರ್ಶನ ಇರಲಿದೆ.
ನಮ್ಮ ಕಿಂಗ್ ಆಫ್ ಫ್ರೂಟ್ಸ್ ಮಾವಿನ ರಾಜನ ಬಗ್ಗೆ ಬಗೆಯ ತಳಿಗಳು ಭಾರತಾದ ಹಳ್ಳವು ರಾಜ್ಯಗಳಲ್ಲಿ ಹಲವಾರು ಹೆಸರು, ಹಲವು ತರಹದ ಗಾತ್ರ, ಬಣ್ಣ ಹೊಂದಿದು, ರುಚಿಯಲ್ಲಿ ಒಂದಕ್ಕಿಂತ ಒಂದು ಮೀರಿಸುವ ಸ್ವಾದ. ಹಲವು ಬಗೆಯ ಖಾದ್ಯಗಳು.
ಹೇಗೆ ನಮ್ಮ ಭಾರತವು ವೈವಿಧ್ಯಮ್ಮಯದಿಂದ ಕುಡಿದೆ ಹಾಗೆ ಮಾವಿನ ಹಣ್ಣು ಕೂಡ.
ಬಂಗಾರದಂತೆ ಕಂಗೊಳಿಸುವ ಈ ಹಣ್ಣು ದುಬಾರಿ ಅಂತು ಇದೆ ಆದರೆ ಮ್ಯಾಂಗೋ ಪ್ರಿಯರು ರೇಸಿಸ್ಟ್ ಮಾಡೋದಕ್ಕೆ ಆಗೋದಿಲ್ಲ.
ಸ್ವಾತಿ ಎಸ್ ಎಂ ನ್ಯೂಸ್ ಡೆಸ್ಕ್