Search


ಮೊದಲ ದಿನವೇ ಟಾಕ್ಸಿಕ್ ಭರ್ಜರಿ ಕಲೆಕ್ಷನ್, 140 ಕೋಟಿ ಬಾಚಿದ ಸಿನಿಮಾ

ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ಆಗಸ್ಟ್ 26ರಂದು ವಿಶ್ವಾದ್ಯಂತ ತೆರೆಕಂಡಿದ್ದು, ಮೊದಲ ದಿನವೇ ಭರ್ಜರಿ ಕಲೆಕ್ಷನ್ ಮಾಡಿದೆ. ವರದಿಗಳ ಪ್ರಕಾರ, ಚಿತ್ರವು ಮೊದಲ ದಿನ ವಿಶ್ವಾದ್ಯಂತ ಸುಮಾರು ₹140.75 ಕೋಟಿ ಗಳಿಸಿದೆ. ಭಾರತದಲ್ಲಿ ಚಿತ್ರದ ಮೊದಲ ದಿನದ ನೆಟ್ ಕಲೆಕ್ಷನ್ ಸುಮಾರು ₹101.10 ಕೋಟಿ ಎಂದು ವರದಿಯಾಗಿದೆ.

ಕನ್ನಡ ಸಿನಿಮಾಗಳ ಪೈಕಿ KGF Chapter 2 ನಂತರ ₹100 ಕೋಟಿಗೂ ಅಧಿಕ ವಿಶ್ವಾದ್ಯಂತ ಓಪನಿಂಗ್ ಪಡೆದ ಪ್ರಮುಖ ಚಿತ್ರವಾಗಿ ‘ಟಾಕ್ಸಿಕ್’ ದಾಖಲೆ ಬರೆದಿದೆ. ಆದರೆ ಯಶ್ ಅವರದೇ KGF Chapter 2 ಚಿತ್ರದ ₹159 ಕೋಟಿ ವಿಶ್ವದಾದ್ಯಂತ ಮೊದಲ ದಿನದ ಕಲೆಕ್ಷನ್ ಅನ್ನು ಈ ಚಿತ್ರ ಮೀರಿಸಿಲ್ಲ. 

ಇನ್ನು ಟಾಕ್ಸಿಕ್ ಸಿನಿಮಾ ಬೆಂಗಳೂರಿಗೆ ಮಾತ್ರ ಸೀಮಿತವಾಗದೆ ರಾಯಚೂರು, ಚಿತ್ರದುರ್ಗ, ದಾವಣಗೆರೆ, ಗದಗ, ಬೆಳಗಾವಿ ಸೇರಿದಂತೆ ಕರ್ನಾಟಕದ ಹಲವು ಜಿಲ್ಲೆಗಳಲ್ಲೂ ‘ಟಾಕ್ಸಿಕ್’ ಕ್ರೇಜ್ ಕಂಡುಬಂದಿದೆ. ರಾಯಚೂರಿನ INOX ಮಾಲ್‌ನ ಮೂರು ಸ್ಕ್ರೀನ್‌ಗಳಲ್ಲೂ ಪ್ರದರ್ಶನಗಳು ಹೌಸ್‌ಫುಲ್ ಆಗಿದ್ದವು ಎಂದು ವರದಿಯಾಗಿದೆ. 

ಚಿತ್ರವನ್ನು ಗೀತು ಮೋಹನ್‌ದಾಸ್ ನಿರ್ದೇಶಿಸಿದ್ದು, ಯಶ್ ಜೊತೆಗೆ ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ರುಕ್ಮಿಣಿ ವಸಂತ್ ಮತ್ತು ತಾರಾ ಸುತಾರಿಯಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ

By Ravikumar - 27-08-2026


Ads in Post