ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಮತ್ತು ನಟಿ ತ್ರಿಷಾ ನಡುವಿನ ಸ್ನೇಹದಲ್ಲಿ ಬಿರುಕು ಬಿಟ್ಟಿದೆಯಾ ಎಂಬ ಪ್ರಶ್ನೆ ತಮಿಳುನಾಡಿನಲ್ಲಿ ಎದ್ದಿದೆ. ವಿಜಯ್(Tamil nadu CM) ಅವರ ಹುಟ್ಟುಹಬ್ಬಕ್ಕೆ ತ್ರಿಷಾ(Trisha) ಶುಭಾಶಯ ಕೋರದೇ, ಅವರನ್ನು ಇನ್ಸ್ಟಾಗ್ರಾಮ್ನಲ್ಲಿ(Instagram) ಅನ್ಫಾಲೋ ಮಾಡಿದ್ದು, ನಟಿಯ ಈ ನಡೆ ಭಾರೀ ಅನುಮಾನಕ್ಕೆ ಕಾರಣವಾಗಿದೆ.
ಗಿಲ್ಲಿ ಸಿನಿಮಾ ಖ್ಯಾತಿಯ ನಟ ವಿಜಯ್ ಮತ್ತು ನಟಿ ತ್ರಿಷಾ ಕಳೆದ ಕೆಲ ವರ್ಷಗಳಿಂದ ಡೇಟಿಂಗ್ ಮಾಡ್ತಿದ್ದಾರೆ ಎಂಬ ಗಾಸಿಫ್ ಸಿನಿರಂಗದಲ್ಲಿ ನಿರಂತರವಾಗಿ ಕೇಳಿ ಬರುತ್ತಿತ್ತು. ಇವರನ್ನ ಇಷ್ಟಪಡುವ ಅಭಿಮಾನಿಗಳು
ಅವರಿಬ್ಬರೂ ಆನ್ಸ್ಕ್ರೀನ್ ಮತ್ತು ಆಫ್ಸ್ಕ್ರೀನ್ ಎರಡರಲ್ಲೂ ಉತ್ತಮ ಜೋಡಿ ಎಂದು ಬಣ್ಣಿಸುತ್ತಿದ್ದರು. ಇದೇ ವೇಳೆ, ಈ ಎಲ್ಲ ವದಂತಿಗಳ ನಡುವೆಯೂ ಕೆಲ ಅಭಿಮಾನಿಗಳು ಅವರಿಬ್ಬರೂ ಕೇವಲ ಒಳ್ಳೆಯ ಸ್ನೇಹಿತರು ಮಾತ್ರ ಎಂದು ಹೇಳುತ್ತಿದ್ದರು.
ಈ ಬಾರಿ ವಿಜಯ್ ಅವರ ಹುಟ್ಟುಹಬ್ಬಕ್ಕೆ ತ್ರಿಷಾ ಹೇಗೆ ಶುಭಾಶಯ ಕೋರಬಹುದು ಎಂಬ ಕುತೂಹಲ ಅಭಿಮಾನಿಗಳಲ್ಲಿತ್ತು. ಆದರೆ ತ್ರಿಷಾ ಮಾತ್ರ ಯಾರೂ ಊಹಿಸದ ಶಾಕ್ ನೀಡಿದ್ದಾರೆ. ವಿಜಯ್ ಅವರ ಜನ್ಮದಿನಕ್ಕೆ ವಿಶ್ ಮಾಡದೇ ಇರೋದಷ್ಟೇ ಅಲ್ಲ, ಅವರನ್ನು ಇನ್ಸ್ಟಾಗ್ರಾಮ್ನಲ್ಲೂ ಅನ್ಫಾಲೋ ಮಾಡಿದ್ದಾರೆ.
ಒಂದಾಗ್ತಿದ್ದಾರಾ ವಿಜಯ್ ಮತ್ತು ಸಂಗೀತ..!
ಇನ್ನು ಕಳೆದ ಕೆಲ ತಿಂಗಳ ಹಿಂದೆ ವಿಜಯ್ ಜೊತೆಗಿನ ದಾಂಪತ್ಯ ಜೀವನ ಅಂತ್ಯಗೊಳಿಸಲು ಸಂಗೀತಾ ಅವರು ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದರು, ಆದರೆ ಇದೀಗ ಇವರಿಬ್ಬರು ಒಂದಾಗುತ್ತಿದ್ದೀರಾ ಎಂಬ ಪ್ರಶ್ನೆ ಎದ್ದಿದೆ. ಕುಟುಂಬದ ಹಿರಿಯರು ಇವರಿಬ್ಬರ ನಡುವೆ ಸಂಧಾನ ಮಾಡಿ, ತಮ್ಮ ಕುಟುಂಬ ಜೀವನವನ್ನ ಸರಿಪಡಿಸಿಕೊಳ್ಳಲು ಸೂಚಿಸಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇದೇ ಕಾರಣಕ್ಕೆ ನಟಿ ತ್ರಿಷಾ ಅವರು ವಿಜಯ್ ಅವರಿಂದ ಅಂತರ ಕಾಯ್ದುಕೊಳ್ಳುತ್ತಿದ್ದಾರೆ.