ವಾಷಿಂಗ್ಟನ್: ಇರಾನ್ ಜೊತೆಗಿನ ಕದನ ವಿರಾಮ ಅಂತ್ಯವಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಈ ಕುರಿತು ಮಾತನಾಡಿರುವ ಟ್ರಂಪ್ "ನಾನಿನ್ನು ಇರಾನಿಯನ್ನರೊಂದಿಗೆ ವ್ಯವಹರಿಸಲು ಬಯಸುವುದಿಲ್ಲ, ಇರಾನಿಯನ್ನರು ನಾಲಾಯಕ್ ಜನರು, ವಿಕೃತ ಹಾಗೂ ಕೊಳಕು ಮನಸ್ಸಿನವರು. ಕ್ರೂರಿಗಳೂ ಎಂದು ಜರಿದಿದ್ದಾರೆ.
ಹಾರ್ಮುಜ್ ಜಲಸಂಧಿಯಲ್ಲಿ (Hormuz Strait) ಮೂರು ವಾಣಿಜ್ಯ ಹಡಗುಗಳ ಮೇಲೆ ಇರಾನ್ ದಾಳಿ ನಡೆಸಿತ್ತು. ಈ ದಾಳಿಗೆ ಪ್ರತಿಕಾರವಾಗಿ ಅಮೇರಿಕಾ ದಾಳಿ ನಡೆಸಿದ್ದು. ನಂತರ ಇರಾನ್ ಜೊತೆ ಮಾಡಿಕೊಂಡಿದ್ದ ತಾತ್ಕಾಲಿಕ ಕದನ ವಿರಾಮ ಒಪ್ಪಂದವನ್ನು ರದ್ದುಗೊಳಿಸಿದ್ದಾರೆ. ಟರ್ಕಿಯಲ್ಲಿ ನಡೆದ ನ್ಯಾಟೋ ಶೃಂಗಸಭೆಯಲ್ಲಿ ಈ ಬಗ್ಗೆ ಮಾತನಾಡಿದ ಟ್ರಂಪ್, ಸಂಘರ್ಷವನ್ನು ಕೊನೆಗೊಳಿಸಲು ಇರಾನ್ ಜೊತೆಗೆ ಸಹಿ ಹಾಕಲಾಗಿದ್ದ ಮಧ್ಯಂತರ ಶಾಂತಿ ಒಪ್ಪಂದ ಮುಗಿದಿದೆ ಎಂದಿದ್ದಾರೆ.
ನನ್ನ ಪ್ರಕಾರ ಶಾಂತಿ ಒಪ್ಪಂದ ಅನ್ನೋದು ಮುಗಿದ ಅಧ್ಯಾಯ. ನಾನಿನ್ನು ಇರಾನಿಯನ್ನರೊಂದಿಗೆ ವ್ಯವಹರಿಸಲು ಬಯಸುವುದಿಲ್ಲ ಎಂದು ಹೇಳಿದ್ದಾರೆ. ಇರಾನಿಯನ್ನರು ನಾಲಾಯಕ್ ಜನರು, ವಿಕೃತ ಹಾಗೂ ಕೊಳಕು ಮನಸ್ಸಿನವರು. ಕ್ರೂರಿಗಳೂ ಕೂಡ ಹೌದು. ಅವರನ್ನ ಮುನ್ನಡೆಸುವವರು ಸಹ ವಿಕೃತ ಮನಸ್ಸು ಹೊಂದಿದವರೇ ಆಗಿದ್ದಾರೆ. ಅವರ ಬಳಿ ಪರಮಾಣು ಶಸ್ತ್ರಾಸ್ತ್ರ ಇದ್ದಿದ್ದರೆ ಅದನ್ನ ಬಳಸುತ್ತಿದ್ದರು. ಇನ್ನೂ ಇರಾನ್ ಜೊತೆಗೆ ಮಾತುಕತೆ ನಡೆಸುವುದರಿಂದ ಸಮಯ ವ್ಯರ್ಥ ಎಂದು ಟ್ರಂಪ್ ವಾಗ್ದಾಳಿ ನಡೆಸಿದ್ದಾರೆ.
ಅಮೆರಿಕದ ಯುದ್ಧ ವಿಮಾನಗಳು ಮತ್ತು ಕ್ಷಿಪಣಿಗಳು ಇರಾನ್ನ ದಕ್ಷಿಣ ಕರಾವಳಿ ಭಾಗಗಳನ್ನು ಧ್ವಂಸಗೊಳಿಸುತ್ತಿದೆ. ಏರ್ ಡಿಫೆನ್ಸ್ ಸಿಸ್ಟಮ್ಸ್ (ವಾಯು ರಕ್ಷಣಾ ವ್ಯವಸ್ಥೆಗಳು), ಕರಾವಳಿ ಕಾವಲು ರಾಡಾರ್ ಕೇಂದ್ರಗಳು, ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ನ 60 ಕ್ಕೂ ಹೆಚ್ಚು ಸಣ್ಣ ಯುದ್ಧ ಬೋಟ್ಗಳು, ಡ್ರೋನ್ ಉಡಾವಣಾ ಕೇಂದ್ರಗಳು ಮತ್ತು ಆಂಟಿ-ಶಿಪ್ ಕ್ರೂಸ್ ಕ್ಷಿಪಣಿ ನೆಲೆಗಳು, ಬಂದರು ನಗರಗಳಾದ ಬಂದರ್ ಅಬ್ಬಾಸ್ ಮತ್ತು ಸಿರಿಕ್ ಮೇಲೆ ದಾಳಿ ನಡೆದಿದೆ.