ಚೆನ್ನೈ: ತಮಿಳುನಾಡು ಸರ್ಕಾರ ತನ್ನ ಮಹಿಳಾ ಉದ್ಯೋಗಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದೆ. ಇನ್ಮುಂದೆ ತಮಿಳುನಾಡಿನ ಮಹಿಳೆಯರು ಮೂರನೇ ಮಗುವಿನ ಜನನದ ಸಮಯದಲ್ಲಿ ನೀಡುವ ಹೆರಿಗೆ ರಜೆಯನ್ನ 12 ವಾರಗಳಿಂದ 365 ದಿನಗಳಿಗೆ ವಿಸ್ತರಿಸಿ ಆದೇಶ ಹೊರಡಿಸಿದ್ದಾರೆ. ಈ ಕುರಿತಾದ ಕಾನೂನನ್ನ ಶೀಘ್ರದಲ್ಲೆ ಸದನದಲ್ಲಿಟ್ಟು ಪಾಸ್ ಮಾಡಿಕೊಳ್ಳುವುದಾಗಿ ಕೂಡ ತಿಳಿಸಿದೆ.
ತಮಿಳುನಾಡು (Tamil Nadu ಸರ್ಕಾರ ಮಂಗಳವಾರ ತನ್ನ ಮಹಿಳಾ ಉದ್ಯೋಗಿಗಳಿಗೆ (Women Employees) ಬಂಪರ್ ಉಡುಗೊರೆ ನೀಡಿದೆ. ಮೂರನೇ ಮಗುವಿನ ಜನನದ ಸಮಯದಲ್ಲಿ ನೀಡುವ ಹೆರಿಗೆ ರಜೆಯನ್ನು (Maternity Leave) 12 ವಾರಗಳಿಂದ 365 ದಿನಗಳವರೆಗೆ ವಿಸ್ತರಿಸುವುದಾಗಿ ಸರ್ಕಾರ ಘೋಷಿಸಿದೆ. ಪ್ರಸ್ತುತ, ಎರಡಕ್ಕಿಂತ ಕಡಿಮೆ ಮಕ್ಕಳಿರುವ ವಿವಾಹಿತ ಮಹಿಳಾ ಸರ್ಕಾರಿ ಉದ್ಯೋಗಿಗಳಿಗೆ 365 ದಿನಗಳ ಹೆರಿಗೆ ರಜೆ ನೀಡಲಾಗುತ್ತಿದ್ದು, ಎರಡು ಅಥವಾ ಅದಕ್ಕಿಂತ ಹೆಚ್ಚು ಮಕ್ಕಳಿರುವವರಿಗೆ 12 ವಾರಗಳವರೆಗೆ ಹೆರಿಗೆ ರಜೆ ನೀಡಲಾಗುತ್ತಿದೆ. ಈಗ ಮೂರನೇ ಮಗು ಆದ್ರೂ ಅವರಿಗೆ 1 ವರ್ಷ ಹೆರಿಗೆ ರಜೆ ಸಿಗಲಿದೆ.
ಈ ಕುರಿತಾಗಿ ಮಾತನಾಡಿರುವ ಮಾನವ ಸಂಪನ್ಮೂಲ ನಿರ್ವಹಣಾ ಸಚಿವ ಡಿ.ಶರತ್ ಕುಮಾರ್ ʻತಮಿಳುನಾಡು ಸರ್ಕಾರವು ಸಾಮಾಜಿಕ ಕಲ್ಯಾಣ ಮತ್ತು ಮಹಿಳಾ ಸಬಲೀಕರಣಕ್ಕೆ ಆದ್ಯತೆ ನೀಡುವ ಕಲ್ಯಾಣ ಆಧಾರಿತ ಆಡಳಿತವಾಗಿದೆ. ಆದ್ದರಿಂದ ಮಹಿಳಾ ಸರ್ಕಾರಿ ಉದ್ಯೋಗಿಗಳಿಗೆ ಮೂರನೇ ಮಗು ಆದರೆ ಪ್ರಸ್ತುತ ನೀಡಲಾಗುವ ಹೆರಿಗೆ ರಜೆಯನ್ನ 12 ವಾರಗಳಿಂದ 365 ದಿನಗಳಿಗೆ ಹೆಚ್ಚಿಸಲಾಗುವುದು ಎಂದು ತಿಳಿಸಿದ್ದಾರೆ ಹಾಗೂ ಈ ಘೋಷಣೆಯನ್ನ ಜಾರಿಗೆ ತರಲು ಶೀಘ್ರದಲ್ಲೇ ವಿವರವಾದ ಸರ್ಕಾರಿ ಆದೇಶ ಹೊರಡಿಸಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
2011 ರಲ್ಲಿ 90 ದಿನಗಳಿಗೆ ಸೀಮಿತವಾಗಿದ್ದ ಹೆರಿಗೆ ರಜೆಯನ್ನು ಆರು ತಿಂಗಳಿಗೆ, 2016 ರಲ್ಲಿ ಒಂಬತ್ತು ತಿಂಗಳಿಗೆ ಮತ್ತು ಜುಲೈ 2021 ರಲ್ಲಿ ಎಐಎಡಿಎಂಕೆ ಮತ್ತು ಡಿಎಂಕೆ ನೇತೃತ್ವದ ಆಯಾ ರಾಜ್ಯ ಸರ್ಕಾರಗಳು ಒಂದು ವರ್ಷಕ್ಕೆ (365 ದಿನಗಳು) ವಿಸ್ತರಿಸಿದ್ದವು. ಪ್ರಮಾಣಿತ ಅರ್ಹತಾ ಚೌಕಟ್ಟಿನಡಿಯಲ್ಲಿ, 365 ದಿನಗಳ ರಜೆ ಪ್ರಯೋಜನವು ಎರಡಕ್ಕಿಂತ ಕಡಿಮೆ ಮಕ್ಕಳಿರುವ ನಿಯಮಿತ ಮಹಿಳಾ ಉದ್ಯೋಗಿಗಳಿಗೆ ಅನ್ವಯಿಸುತ್ತಿತ್ತು.