ತಮಿಳುನಾಡು ಮುಖ್ಯಮಂತ್ರಿ ಹಾಗೂ ಸಿ. ಜೋಸೆಫ್ ವಿಜಯ್ ಅವರ ರಾಜಕೀಯ ಪ್ರಭಾವ ಇದೀಗ ತಮಿಳುನಾಡಿನ ಗಡಿ ದಾಟಿ ರಾಷ್ಟ್ರಮಟ್ಟಕ್ಕೆ ವಿಸ್ತರಿಸುತ್ತಿರುವ ಸೂಚನೆ ಸಿಕ್ಕಿದೆ. India Today ಆಗಸ್ಟ್ 2026 ಸಮೀಕ್ಷೆಯಲ್ಲಿ ಮುಂದಿನ ಪ್ರಧಾನಿಯಾಗಲು ಇಷ್ಟಪಡುವ ನಾಯಕರ ಪಟ್ಟಿಯಲ್ಲಿ ವಿಜಯ್ ಮೊದಲ ಬಾರಿಗೆ 3ನೇ ಸ್ಥಾನ ಪಡೆದಿದ್ದಾರೆ.
ಪ್ರಧಾನಿ ಆಯ್ಕೆಯಲ್ಲಿ:
ನರೇಂದ್ರ ಮೋದಿ – 48.7%
ರಾಹುಲ್ ಗಾಂಧಿ – 27.1%
ಸಿ. ಜೋಸೆಫ್ ವಿಜಯ್ – 9.2%
ಮಮತಾ ಬ್ಯಾನರ್ಜಿ – 2%
ಅಖಿಲೇಶ್ ಯಾದವ್ – 1.7%
ಅಭಿಜಿತ್ ದಿಪ್ಕೆ – 1.3%
ಅರವಿಂದ್ ಕೇಜ್ರಿವಾಲ್ – 1.2%
ಪ್ರಸ್ತುತ ವಿರೋಧ ಪಕ್ಷಗಳ ಮೈತ್ರಿಕೂಟವನ್ನು ಮುನ್ನಡೆಸಲು ಯಾರು ಸೂಕ್ತ?’ ಎಂಬ ಪ್ರಶ್ನೆಯಲ್ಲೂ ವಿಜಯ್ ಗಮನಾರ್ಹ ಸಾಧನೆ ಮಾಡಿದ್ದಾರೆ. ರಾಹುಲ್ ಗಾಂಧಿ 29% ಬೆಂಬಲದೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ವಿಜಯ್ 12.2% ಬೆಂಬಲದೊಂದಿಗೆ ಎರಡನೇ ಸ್ಥಾನ ಪಡೆದಿದ್ದಾರೆ. ಮಮತಾ ಬ್ಯಾನರ್ಜಿ 8.5%, ಅರವಿಂದ್ ಕೇಜ್ರಿವಾಲ್ 7.5% ಮತ್ತು ಅಖಿಲೇಶ್ ಯಾದವ್ 6.9% ಬೆಂಬಲ ಪಡೆದಿದ್ದಾರೆ.
2024ರಲ್ಲಿ ರಾಜಕೀಯ ಪ್ರವೇಶಿಸಿದ ವಿಜಯ್, 2026ರಲ್ಲಿ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದಾರೆ. ಇದೀಗ ಅವರ ಪಕ್ಷ 2029ರ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ವಿಜಯ್ ಅವರನ್ನು ರಾಷ್ಟ್ರೀಯ ನಾಯಕನಾಗಿ ಮತ್ತು ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿಸುವ ಚರ್ಚೆಯನ್ನು ಆರಂಭಿಸಿದೆ. ಪಕ್ಷದ ಸಚಿವರಾದ ಶರತ್ಕುಮಾರ್ ಮತ್ತು ಆದವ್ ಅರ್ಜುನ್ ಕೂಡ ವಿಜಯ್ ಅವರ ರಾಷ್ಟ್ರೀಯ ಪಾತ್ರದ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ.
ಈ MOTN ಸಮೀಕ್ಷೆಯಲ್ಲಿ ಜುಲೈ 1ರಿಂದ ಆಗಸ್ಟ್ 25ರವರೆಗೆ 25,184 ಮಂದಿಯನ್ನು ನೇರವಾಗಿ ಸಮೀಕ್ಷೆ ಮಾಡಲಾಗಿದ್ದು, ಕಳೆದ ಆರು ತಿಂಗಳ CVoter ಟ್ರ್ಯಾಕಿಂಗ್ನ 91,795 ಸಂದರ್ಶನಗಳನ್ನೂ ವಿಶ್ಲೇಷಣೆಯಲ್ಲಿ ಬಳಸಲಾಗಿದೆ. ಆದರೆ, 2029ರ ಲೋಕಸಭಾ ಚುನಾವಣೆ ಇನ್ನೂ ದೂರದಲ್ಲಿದ್ದು, ಸಮೀಕ್ಷೆಯ ಜನಪ್ರಿಯತೆಯನ್ನು ರಾಷ್ಟ್ರಮಟ್ಟದ ಮತಗಳಾಗಿ ಮತ್ತು ಚುನಾವಣಾ ಮೈತ್ರಿಯಾಗಿ ಪರಿವರ್ತಿಸುವುದು ವಿಜಯ್ ಹಾಗೂ TVK ಮುಂದಿರುವ ದೊಡ್ಡ ಸವಾಲಾಗಿದೆ.