Search


ಶ್ರೀನಿವಾಸ ದೇವನು ರಾಮ-ಕೃಷ್ಣರ ತರಹ ಲೋಕಕಲ್ಯಾಣಕ್ಕಾಗಿ ಏನು ಮಾಡಿದ್ದಾರೆ? ಶ್ರೀನಿವಾಸನನ್ನು ಯಾವ ಕಾರಣಕ್ಕೆ ಪೂಜಿಸುತ್ತಿರುವುದು?

ಶ್ರೀರಾಮ ಶ್ರೀಕೃಷ್ಣನ ಅವತಾರದ ಉದ್ದೇಶ ಬೇರೆ ಇತ್ತು. ಮಾನವರಲ್ಲಿ ಮಾನವರಾಗಿ ಇಬ್ಬರೂ ಅವತರಿಸಿದರು. ನಮ್ಮಂತೆಯೇ ಅತ್ತರು ನಕ್ಕರು ಪ್ರೀತಿಸಿದರು. ಎಂತಹುದೇ ಸನ್ನಿವೇಶ ಜೀವನದಲ್ಲಿ ಬಂದರೂ ಸ್ಥಿತ ಪ್ರಜ್ಞತೆ ಇಂದ ಎದುರಿಸಬೇಕು ಎಂದು ತೋರಿಸಿಕೊಟ್ಟರು. ಹೇಗೇ ಬದುಕಬೇಕು ಎಂಬುದನ್ನು ತೋರಿಸಿಕೊಟ್ಟರು.

ಆದರೆ ವೆಂಕಟರಮಣ ಅವತಾರವಲ್ಲ ಆತನೇ ಅವತಾರಿ. ಅಂದರೆ ಸ್ವತಃ ಶ್ರೀಮನ್ನಾರಾಯಣ. ಆದಿಲಕ್ಷ್ಮೀಯನ್ನು ಹುಡುಕುತ್ತ ವೆಂಕಟಾಚಲ ಗಿರಿಯ ಮೇಲೆ ಸಿರಿಯೊಟ್ಟಿಗೆ ನೆಲೆಸಿದ. ಸ್ವಾಮಿ ಬಂದದ್ದು ಲೋಕ ಕಲ್ಯಾಣಕ್ಕಾಗಿಯೇ ಆದರೆ ಇಲ್ಲಿ ಪೂರ್ಣ ಪರಮಾತ್ಮನೇ ಧರೆಗಿಳಿದು ಬಂದ. ಹಾಗಾಗಿ ಮಾನವರಂತೆ ಯಾವ ಕಾರ್ಯವೂ ಮಾಡಲಿಲ್ಲ ಆದರೆ ಮಾನವರಿಗಾಗಿಯೆ ಸಪ್ತಗಿರಿಯ ಮೇಲೆ ನೆಲೆನಿಂತಿದ್ದಾನೆ. ಶ್ರೀದೇವಿ ಭೂದೇವಿ ಸಮೇತ ತಿರುಮಲ ಗಿರಿಯ ಮೇಲೆ ನೆಲೆಸಿ ಪ್ರಕೃತಿ ಸಮತೋಲನವನ್ನು ಮಾನವ ಜೀವನದ ಏಳುಬೀಳುಗಳನ್ನು ಸಮಸ್ತಿತಿಯಲ್ಲಿ ಇಟ್ಟಿದ್ದಾನೆ. ಹಾಗಾಗಿ ತಿರುಮಲ ಗಿರಿ ಕಲಿಯುಗ ವೈಕುಂಠ.

By thebigbulletin.com - 02-05-2026


Ads in Post