ಚಿಕ್ಕಬಳ್ಳಾಪುರ: ಕೇಂದ್ರ ಸಚಿವ ಕುಮಾರಸ್ವಾಮಿ ಅವರ ಬಳಿ ಕೋಟ್ಯಂತರ ರೂಪಾಯಿ ಮೌಲ್ಯದ ವಾಚ್ ಗಳಿವೆ ಎಂದು ಆರೋಪಿಸಿದ್ದ ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಜೆಡಿಎಸ್ ಶಾಸಕ ಬಿ.ಎನ್ ರವಿಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. "ಮುಂದಿನ ಚುನಾವಣೆಯಲ್ಲಿ ಪ್ರದೀಪ್ ಈಶ್ವರ್ ಸೋತರೆ, ಕುಮಾರಸ್ವಾಮಿ ಮನೆ ವಾಚ್ ಮೆನ್ ಆಗ್ತೀಯಾ ಎಂದು ಸವಾಲ್ ಹಾಕಿದ್ದಾರೆ.
ಮಾಧ್ಯಮ ಸುದ್ದಿಗೋಷ್ಟಿಯಲ್ಲಿ ಶಾಸಕ ರವಿಕುಮಾರ್ "ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಾನು ಸೋತರೆ ನಿನ್ನ ಮನೆಯ ವಾಚ್ ಮೆನ್ ಆಗ್ತೀನೀ, ನೀನು ಸೋತರೆ ಎಚ್ ಡಿ ಕುಮಾರಸ್ವಾಮಿ ಮನೆಯ ವಾಚ್ ಮೆನ್ ಆಗ್ತೀಯಾ ಎಂದು" ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಗೆ ಜೆಡಿಎಸ್ ಶಾಸಕ ಬಿ.ಎನ್.ರವಿಕುಮಾರ್ ಸವಾಲು ಹಾಕಿದ್ದಾರೆ.
ಮುಂದುವರಿದು ಮಾತನಾಡಿದಅವರು "ಜೆಡಿಎಸ್ ಪಕ್ಷ ದೇವೇಗೌಡರು, ಕುಮಾರಸ್ವಾಮಿ ಅವರ ವಿರುದ್ಧ ಮಾತನಾಡಿದರೆ ಸಹಿಸುವುದಿಲ್ಲ. ಕುಮಾರಸ್ವಾಮಿಯವರು ಎಲ್ಲಿಯಾದರೂ ಪ್ರದೀಪ್ ಈಶ್ವರ್ ಬಗ್ಗೆ ವೈಯಕ್ತಿಕವಾಗಿ ಟೀಕೆ ಮಾಡಿದ್ದಾರಾ? ಮಾಡಿದ್ದರೆ ನಾನು ಪ್ರದೀಪ್ ಅವರ ಕ್ಷಮೆ ಕೇಳುತ್ತೇನೆ. ಆದರೆ ಹೆಚ್.ಡಿ.ಕುಮಾರಸ್ವಾವಾಚ್ಮೆನ್ಮಿಯವರು ಸುಮ್ಮನಿದ್ದರೂ ಅವರ ವಿರುದ್ಧ ಪ್ರದೀಪ್ ಈಶ್ವರ್ ಮಾತನಾಡುತ್ತಿದ್ದಾನೆ ಎಂದು ಬಿ.ಎನ್.ರವಿಕುಮಾರ್ ಕಿಡಿಕಾರಿದರು.
ಜೆಡಿಎಸ್ ನಾಯಕರ ವಿರುದ್ಧ ಮಾತನಾಡಿದರೆ ಸಚಿವ ಸ್ಥಾನ ಸಿಗುತ್ತದೆ ಎಂಬ ಭ್ರಮೆಯಲ್ಲಿ ಪ್ರದೀಪ್ ಈಶ್ವರ್ ಇದ್ದಂತೆ ಕಾಣುತ್ತಿದೆ. ಚಿಕ್ಕಬಳ್ಳಾಪುರ ಕ್ಷೇತ್ರದ ಸ್ಥಳೀಯ ಚುನಾವಣೆಯಲ್ಲಿಯೇ ಇವರಿಗೆ ಕಾಂಗ್ರೆಸ್ ಗೆಲ್ಲಿಸಿಕೊಳ್ಳಲು ಸಾಧ್ಯವಾಗಿಲ್ಲ. ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಶಾಸಕ ಪ್ರದೀಪ್ ಈಶ್ವರ್ ಕೊಡುಗೆ ಏನು? ಎಂದು ಪ್ರಶ್ನಿಸಿದರು.