ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಇಂಧನ ಮಿತವ್ಯಯ ಮಾಡುವಂತೆ ಕರೆ ನೀಡಿರುವ ಬೆನ್ನಲ್ಲೇ ಸರ್ವೋಚ್ಚ ನ್ಯಾಯಾಲಯ ವಾರಕ್ಕೆ ಎರಡು ದಿನ ವರ್ಚುವಲ್ ವಿಚಾರಣೆ ನಡೆಸಲು ನಿರ್ಧರಿಸಿದೆ. ಇದರ ಜೊತೆಗೆ ಶೇ.50ರಷ್ಟು ಉದ್ಯೋಗಿಗಳು ವಾರಕ್ಕೆ ಎರಡು ದಿನ ಮನೆಯಿಂದಲೇ ಕೆಲಸ ಮಾಡಲು ಅನುಮತಿ ನೀಡಲಾಗಿದೆ.
ಸಾಮಾನ್ಯವಾಗ ಮಂಗಳವಾರದಿಂದ ಗುರುವಾರದವರೆಗೆ ನಡೆಯುವ ಎಲ್ಲಾ ವಿಚಾರಣೆಗಳು ನ್ಯಾಯಾಲಯದಲ್ಲಿ ನಡೆಯುತ್ತವೆ. ಈ ಸಮಯದಲ್ಲಿ ವಿಚಾರಣೆಗಾಗಿ ವಕೀಲರು ಹಾಗೂ ಕಕ್ಷಿದಾರರು ಆನ್‌ಲೈನ್ ಮೂಲಕ ಅಥವಾ ನ್ಯಾಯಾಲಯಕ್ಕೆ ಬಂದು ಹಾಜರಾಗುತ್ತಾರೆ, ಇದರ ಹೊರತಾಗಿ ಇನ್ನು ಮುಂದ ಸೋಮವಾರ ಮತ್ತು ಶುಕ್ರವಾರದಂದು ನಡೆಯುವ ಎಲ್ಲಾ ವಿಚಾರಣೆಗಳು ಆನ್‌ಲೈನ್ ಮೂಲಕ ನಡೆಯಲಿವೆ.
ಇನ್ನು ಸುಪ್ರೀಂಕೋರ್ಟ್ ಕಛೇರಿಯ ಪ್ರತಿಯೊಂದು ವಿಭಾಗದಲ್ಲೂ ಶೇ.50ರಷ್ಟು ಸಿಬ್ಬಂದಿಗಳಿಗೆ ವಾರದಲ್ಲಿ 2 ದಿನ ಮನೆಯಿಂದ ಕೆಲಸ ಮಾಡಲು ಅವಕಾಶ ಕಲ್ಪಿಸಿಕೊಟ್ಟಿದ್ದು, ಇದರಿಂದಾಗಿ ಕೋರ್ಟ್ ಕೆಲಸಗಳಿಗೆ ಯಾವುದೇ ರೀತಿ ಅಡ್ಡಿಯಾಗದಂತೆ ನೋಡಿಕೊಳ್ಳಲು ಸೂಚಿಸಲಾಗಿದೆ. ಜೊತೆಗೆ ತುರ್ತು ಕೆಲಸವಿದ್ದಾಗ ಅಥವಾ ಕಛೇರಿಯಲ್ಲಿ ಖುದ್ದು ಹಾಜರಿರಬೇಕಾದ ಅನಿವಾರ್ಯತೆ ಇದ್ದರೆ ಅಂತಹ ಸಂದರ್ಭದಲ್ಲಿ ವರ್ಕ್ ಫ್ರಂ ಹೋಮ್ ರದ್ದುಗೊಳಿಸುವ ಅಥವಾ ರ್ಮಾಪಾಡು ಮಾಡುವ ಅಧಿಕಾರವನ್ನ ಹಿರಿಯ ಅಧಿಕಾರಿಗಳಿಗೆ ನೀಡಲಾಗಿದೆ.
ಇನ್ನೂ ಜಡ್ಹ್‌ಗಳಿಗೆ ಕಾರ್ ಪೂಲಿಂಗ್ ಮಾಡಲು ನಿರ್ಧರಿಸಿದ್ದಾರೆ., ಅಂದರೆ ಸಾಮಾನ್ಯವಾಗಿ ಒಂದು ಕಾರಿನಲ್ಲಿ ಓರ್ವ ನ್ಯಾಯಾಧೀಶರು ಅಥವಾ ನ್ಯಾಯಮೂರ್ತಿ ಅವರು ಆಗಮಿಸುತ್ತಾರೆ. ಇದರ ಬದಲಿಗೆ ಒಂದೇ ಕಾರಿನಲ್ಲಿ ಇಬ್ಬರು ಮತ್ತು ಮೂವರು ನ್ಯಾಯಧೀಶರನ್ನ ಕರೆತರಲು ನಿರ್ಧರಿಸಲಾಗಿದೆ.