ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸುತ್ತಿಕೊಂಡಿದ್ದ ಮುಡಾ ಕೇಸ್ ಇದೀಗ ಅವರ ಪುತ್ರ ಡಾ. ಯತೀಂದ್ರ ಅವರಿಗೆ ತಲೆ ನೋವಾಗಿ ಪರಿಣಮಿಸಿದೆ. ಯತೀಂದ್ರಗೆ ನೀಡಿರುವ ನಗರಾಭಿವೃದ್ಧಿ ಖಾತೆಯನ್ನು ಹಿಂದಕ್ಕೆ ಪಡೆಯುವಂತೆ 'ನೈಜ ಹೋರಾಟಗಾರರ ವೇದಿಕೆ'ಯ ಕಾರ್ಯಕರ್ತ ಎಂದು ಹೇಳಿಕೊಳ್ಳುವ ವ್ಯಕ್ತಿಯೊಬ್ಬರು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ.
ಸಂಘಟನೆಯ ಕಾರ್ಯಕರ್ತ ಎಚ್.ಎಂ. ವೆಂಕಟೇಶ್ ಎಂಬುವವರು ಮಾಧ್ಯಮಗಳಿಗೆ 3 ಪುಟಗಳ ಪತ್ರವೊಂದನ್ನ ಬಿಡುಗಡೆ ಮಾಡಿದ್ದು. ಮೈಸೂರು ಲೋಕಾಯುಕ್ತ ಪೊಲೀಸ್, ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ, ಕರ್ನಾಟಕ ಹೈಕೋರ್ಟ್ ಮತ್ತು ಜಾರಿ ನಿರ್ದೇಶನಾಲಯದಲ್ಲಿ ರಿಟ್ ಅರ್ಜಿಯನ್ನು ಉಲ್ಲೇಖಿಸಿದ್ದಾರೆ.
ಮುಡಾದಲ್ಲಿ ನಡೆದಿರುವ ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವಾಗ ನಗರಾಭಿವೃದ್ಧಿ ಇಲಾಖೆಯ ಗುರುತರ ಜವಾಬ್ದಾರಿಯನ್ನು ಯತೀಂದ್ರ ಅವರಿಗೆ ನೀಡಿರುವುದು ಸರಿಯಲ್ಲ. ಆರೋಪಿತರ ಮಗನಾಗಿರುವ ಡಾ.ಯತೀಂದ್ರರವರನ್ನು ತಕ್ಷಣಕ್ಕೆ ಜಾರಿಗೆ ಬರುವಂತೆ ನಗರಾಭಿವೃದ್ಧಿ ಸಚಿವರ ಹೊಣೆಗಾರಿಕೆಯಿಂದ ಬಿಡುಗಡೆಗೊಳಿಸಿ. ಬದಲಿ ಖಾತೆಯಲ್ಲಿ ಅವರನ್ನು ಸಚಿವರಾಗಿ ಕಾರ್ಯನಿರ್ವಹಿಸಲಿ ಎಂದು ಆಗ್ರಹಿಸಲಾಗಿದೆ
ನಗರಾಭಿವೃದ್ಧಿ ಖಾತೆ ಹೊರತುಪಡಿಸಿ ಬದಲಿ ಖಾತೆ ನೀಡುವಂತೆ ಸಿಎಂ ಡಿಕೆ ಶಿವಕುಮಾರ್ ಅವರಿಗೆ ಪತ್ರ ಬರೆಯಲಾಗಿದ್ದು. ಆ ಮೂಲಕ ಮುಡಾ ಪ್ರಕರಣ ಮತ್ತೆ ಚರ್ಚೆಗೆ ಬಂದಂತಾಗಿದೆ.
ಆರೋಪದ ಬಗ್ಗೆ ಯತೀಂದ್ರ ಪ್ರತಿಕ್ರಿಯೆ
ಇನ್ನು ಈ ಕುರಿತು ಯತೀಂದ್ರ ಸಿದ್ದರಾಮಯ್ಯ ಮಾಧ್ಯಮಗಳಿಗೆ ಪ್ರತಿಕ್ರಿಯೇ ನೀಡಿದ್ದು 'ಖಾತೆ ಬದಲಾವಣೆಯ ಅಗತ್ಯವಿಲ್ಲ, ಮುಡಾ ಹಗರಣದ ಪ್ರಕರಣವನ್ನು ನನ್ನ ತಂದೆ, ತಾಯಿ ಮತ್ತು ಕುಟುಂಬದ ವಿರುದ್ಧ ದಾಖಲಿಸಲಾಗಿದೆ. ಲೋಕಾಯುಕ್ತರು ಈಗಾಗಲೇ ತನಿಖೆ ನಡೆಸಿ ವರದಿಯನ್ನು ಸಲ್ಲಿಸಿದ್ದಾರೆ, ಅದನ್ನು ಪ್ರತಿನಿಧಿಗಳ ನ್ಯಾಯಾಲಯ ಅಂಗೀಕರಿಸಿದೆ. ತನಿಖೆ ಪೂರ್ಣಗೊಂಡಿರುವುದರಿಂದ, ನಾವು ಹಸ್ತಕ್ಷೇಪ ಮಾಡುವ ಅಥವಾ ಪ್ರಭಾವ ಬೀರುವ ಯಾವುದೇ ಸನ್ನಿವೇಶವಿಲ್ಲ, ಹಿತಾಸಕ್ತಿ ಸಂಘರ್ಷವಿಲ್ಲ" ಎಂದು ಅವರು ಹೇಳಿದರು.
"ನಾನು ಏನನ್ನೂ ನಿರೀಕ್ಷಿಸಿರಲಿಲ್ಲ. ಹೈಕಮಾಂಡ್ ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೆ ನಾವು ಬದ್ಧರಾಗಿರುತ್ತೇವೆ. ಖಾತೆಗಳನ್ನು ಈಗಾಗಲೇ ನಿಯೋಜಿಸಲಾಗಿದೆ ಮತ್ತು ನಾನು ಯಾವುದೇ ಹೆಚ್ಚುವರಿ ಖಾತೆಗಳನ್ನು ಬಯಸಿಲ್ಲ