ಫಾರ್ಮಲ್ಸ್ ವಿಥ್ ಬ್ಲಾಕ್ ಬ್ಲೇಜರ್.
ವಿಜಯ್ ಲುಕ್ ನೀವು ನೋಡಬೇಕಿತ್ತು. ಥೇಟ್ ಕಾರ್ಪೊರೇಟ್ CEO ಥರಾನೆ ಕಾಣಿಸ್ತಿದ್ರು. ಅಂದ್ರೆ ನೀವು ತಮಿಳುನಾಡಿನ ರಾಜಕಾರಣಿಗಳನ್ನ ಗಮನಿಸಿದ್ರೆ ಅವರೆಲ್ಲರದ್ದು ಒಂದೇ ಡ್ರೆಸ್ ಕೋಡ್, ಬಿಳಿ ಶರ್ಟ್ ಬಿಳಿ ಪಂಚೆಯಲ್ಲೇ ಕಾಣಿಸಿಕೊಳ್ತಿದ್ರು. ಅದು ಅವರ ಸಾಂಪ್ರದಾಯಿಕ ಉಡುಪು. ತಮಿಳುನಾಡು ಯಾಕೆ ನನಗೆ ಗೊತ್ತಿರುವ ಹಾಗೆ ದೇಶದಲ್ಲಿ ಯಾವ ಸಿಎಂ ಕೂಡ ಪ್ರಮಾಣ ವಚನ ಸಮಾರಂಭದಲ್ಲಿ ಫಾರ್ಮಲ್ಸ್ ವಿಥ್ ಬ್ಲೇಜರ್ ಹಾಕೊಂಡಿದ್ದನ್ನು ನಾನು ನೋಡಿಲ್ಲ. ಅದು ವಿಜಯ್ ಒಬ್ಬರೇ ಇರಬೇಕು. (ಗೊತ್ತಿದ್ದರೆ ತಿಳಿಸಿ)
ರಾಜಕೀಯ ಬಿಡಿ. ಅದು ನಡೆಯುತ್ತೆ. ರಾಜಕೀಯ ಮಾಡಲಿಲ್ಲ ಅಂದ್ರೆ ಪವರ್ ಸಿಗಲ್ಲ. ಪವರ್ ಸಿಕ್ಕಿದ ಮೇಲೂ ಅದನ್ನ ಉಳಿಸಿಕೊಳ್ಳಬೇಕಾದ್ರೆ ತೀವ್ರ ರಾಜಕೀಯ ಮಾಡಲೇಬೇಕು. ಆ ಎರಡು ಶಕ್ತಿ ಇದ್ದವರು ಮಾತ್ರವೇ ರಾಜಕೀಯಕ್ಕೆ ಎಂಟ್ರಿ ಕೊಡೋದು. ಅದನ್ನು ವಿಜಯ್ ಕೂಡ ಮಾಡ್ತಾರೆ ಮಾಡಲೇಬೇಕು.
ಆದ್ರೆ ವಿಜಯ್ರ ಈ ಯೂಥ್ಫುಲ್ ಬದಲಾವಣೆ, ನನಗೆ ಸೂಪರ್ ಅನಿಸ್ತು. ಅವರ ಮಾತುಗಳಲ್ಲೂ ಒಂದು ಸ್ಪಾರ್ಕ್ ಇತ್ತು. ಎಮೋಷನ್ ಇತ್ತು. ಕಮಿಟ್ಮೆಂಟ್ ಇತ್ತು. ಮಾಸ್ ಅಟ್ರಾಕ್ಷನ್ ಇತ್ತು. ಈ ವೈಬ್ ಇನ್ನು ಅಲ್ಲಿ ಬಹುಕಾಲ ಉಳಿಯಬಹುದು!
ನಾನು ವಿಜಯ್ ಬಗ್ಗೆ ಆತ್ಮೀಯರಲ್ಲಿ ಯಾವಾಗಲೂ ಹೇಳುತ್ತಿದ್ದ ಒಂದು ಮಾತಿತ್ತು. ವಿಜಯ್ಗೆ ಈಗ ಜಸ್ಟ್ ಐವತ್ತೆರಡು ವರ್ಷ. ಈಗಲ್ಲ ಇನ್ನು ಹತ್ತು ವರ್ಷ ಬಿಟ್ಟಾದರೂ ಸರಿ ತಮಿಳುನಾಡಿಗೆ CM ಆಗೇ ಆಗ್ತಾರೆ ಅಂತ. ನನಗೆ ಅಷ್ಟು ಕಾನ್ಫಿಡೆನ್ಸ್ ಇತ್ತು ವಿಜಯ್ ಮೇಲೆ. ಆದ್ರೆ ಹೆಜ್ಜೆ ಇಟ್ಟ ಮೊದಲ ಸಲವೇ CM ಆದರು.
ಅದು ಅವರ ತಾಕತ್ತು. ಪರಿಶ್ರಮ. ಮತ್ತು ಗುರಿ.
ಸಕ್ಸಸ್ ಗೆ ಹೊಸ ಉದಾಹರಣೆ.
…
ರವಿ ಅಜ್ಜೀಪುರ