ಪಾಟ್ನಾದಲ್ಲಿ 30 ವರ್ಷದ ಒಬ್ಬ ಹುಡುಗಿ ತನ್ನ ಶಾಲಾ ಸ್ನೇಹಿತ "ಡೊಮಿನೋಸ್ನಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತಿದ್ದವ್ನನ್ನು" ಭೇಟಿಯಾದಳು.ಆಕೆ ಫೋನ್ ತೆಗೆದು "ಕಂಟೆಂಟ್ಗಾಗಿ ಅವನ ವಿಡಿಯೋ ಚಿತ್ರೀಕರಿಸಿದಳು. ನಂತರ ವ್ಯಂಗ್ಯವಾಗಿ ನಗುತ್ತಾ "ನೀನು ಶಾಲೆ ಎಲ್ಲಕ್ಕಿಂತ ತುಂಬಾ ಬುದ್ದಿವಂತ ಆಗಿದ್ದೆ.ಆದ್ರೆ ನೀನು ಈಗ ಪಿಜ್ಜಾ ಡೆಲಿವರಿ ಬಾಯ್ ಆಗಿದಿಯಾ.ನಿನ್ನ ಕೆಲಸದ ಅನುಭವ ಹೇಗಿದೆ?” ಎಂದು ಅಹಂಕಾರದಿಂದ ಕೇಳಿದಳು.ಜೊತೆಗೆ ಅವಳು ವಿಕೃತ ಸಂತೋಷದಿಂದ "ನೋಡಿದ ವಿಡಿಯೋವನ್ನು ಇತರ ನಮ್ಮಿಬ್ಬರ ಧ್ವನಿಯನ್ನು ಈ ಮೂಲಕ ಕಳುಹಿಸುತ್ತೇನೆ" ಅಂತ ಎಂದಳು.
ಆದರೆ ನನ್ನ ಅಭಿಪ್ರಾಯದಲ್ಲಿ ಹುಡುಗ ಅವನ ಕುಟುಂಬದ ಹೊಣೆಗಾರಿಕೆಯನ್ನು ನಿಭಾಯಿಸಲು ದುಡಿತಾ ಇದಾನೆ ಅಂತ. 40-45 ವರ್ಷಗಳ ಹಿಂದೆಯೇ "ಪದವಿ ಇದ್ರೂ ಕೆಲಸ ಸಿಗುವುದಿಲ್ಲ, ನಿರುದ್ಯೋಗ ತಾಂಡವ ಆಡ್ತಾ ಇದೆ.ಪದವಿದರರು, ಡಬಲ್ ಪದವಿ ಪಡೆದವ್ರು ಕೂಡ ಆಟೋ ಚಾಲಕರು ಅಂತ ದಿನಪತ್ರಿಕೆಗಳಲ್ಲಿ "50 ವರ್ಷದ ಹಿಂದೆ, 25 ವರ್ಷದ ಹಿಂದೆ" ಅನ್ನೋ ಕಾಲಂ ಓದಿದ್ರೆ ಗೊತ್ತಾಗುತ್ತೆ.
ಆದರೆ ಸಾಮಾನ್ಯವಾಗಿ ಇತ್ತೀಚಿಗೆ ಪೀಳಿಗೆಗೆ ಸುದೈವಕ್ಕೆ ನಿಷ್ಠೆಯಿಂದ ದುಡಿಯುವ ಪ್ರತಿಯೊಬ್ಬರಿಗೂ ಡೆಲಿವರಿ ಬಾಯ್, ಹೋಟೆಲ್ ಉದ್ಯೋಗ, ಸ್ವಂತ ಉದ್ಯೋಗ, ರಸ್ತೆ ಬದಿಗಳಲ್ಲಿ ಗಾಡಿಗಳಲ್ಲಿ, ವಾಹನಗಳಲ್ಲಿ ಇಡ್ಲಿ, ದೋಸೆ, ಬಾತ್ ಗಳು, ಸಂಜೆ ಬಜ್ಜಿ ಬೋಂಡಾ ಇತ್ಯಾದಿಗಳ ತಿಂಡಿ, ಊಟ, ಕಾಫಿ, ಚಹಾ, ಸ್ನಾಕ್ಸ್ ತಂದು ಮಾರಾಟ ಮಾಡಿ, ಒಂದಲ್ಲ ಒಂದು ಉದ್ಯೋಗ ಮಾಡಿ ಆದಾಯ ತಗೋತಿದಾರೆ.
ಯಾವ ಕೆಲಸ ಕೂಡ ನಿಕೃಷ್ಟ ಅಲ್ಲ.ಕೆಲಸ ಯಾವ್ದಾದ್ರು ಏನು?? ಆದಾಯ ತಾನೇ ಮುಖ್ಯ.ಹೇಳ್ಬೇಕು ಅಂತ ಅಂದ್ರೆ ಇತ್ತೀಚಿಗೆ ದುಡಿಯುವ ವರ್ಗ ಹೆಚ್ಚಾಗುತ್ತಿದೆ. ಸರ್ಕಾರಿ ಕೆಲಸವೇ ಬೇಕು, ಕಾರ್ಪೊರೇಟ್ ಕೆಲಸವೇ ಬೇಕು ಅಂದವರು ಕೆಲವರಿಗೆ ಸಿಗುತ್ತೆ ಕೆಲವರಿಗೆ ಸಿಗಲ್ಲ.. ಏನ್ ಮಾಡೋಕಾಗುತ್ತೆ..??ಆದ್ರೆ ಇದನ್ನೆಲ್ಲಾ ಆ ಹುಡುಗಿ ಅಹಂಕಾರದಿಂದ ಆಡಿದ ಮಾತುಗಳನ್ನೇ ಇಂದಿನ ಸಮಾಜದಲ್ಲಿ ಸಮಾಜ ಕೂಡ ಹೇಳುತ್ತೆ. ಆದರೆ "ಇದೇ ಸಮಾಜ ಮಾತ್ರ ಇವರಿಗೆ ಯಾರಿಗೂ ಉದ್ಯೋಗ ಕೊಟ್ಟು ಕಾಪಾಡಲ್ಲ. ಅಲ್ವಾ..??
ಹೀಗೆ ಸ್ವಂತ ವ್ಯಾಪಾರ, ಉದ್ಯೋಗ, ಯಾವದೇ ಕೆಲಸ ಮಾಡ್ಕೊಂಡು ತಮ್ಮ ಶಕ್ತಿ ಅನುಸಾರವಾಗಿ ಮನೆ ತಗೊಂಡಿದ್ದಾರೆ, ಸೈಟ್ ತಗೊಂಡಿದ್ದಾರೆ, ಫ್ಲ್ಯಾಟ್ ತಗೊಂಡಿದ್ದಾರೆ.ಇದಂತೂ ತುಂಬಾ ಖುಷಿ ಕೊಡುತ್ತೆ. ಹಾಗಂತ ಎಲ್ಲರಿಗೂ ಸ್ವಂತ ಇದೆ ಅಂತ ಹೇಳ್ತಾ ಇಲ್ಲ ನಾನು. ಕೊನೆಪಕ್ಷ ಬಾಡಿಗೆ ಕೊಡೋಕ್ಕಾದ್ರೂ, ಜೀವನ ನಡ್ಸೋಕ್ಕಾದ್ರೂ ಕೆಲಸ ಮಾಡ್ತಾ ಇದಾರಲ್ಲ, ಇದು ತುಂಬಾ ಖುಷಿ ಅಲ್ವಾ..??
ಆದರೆ ಇವರುಗಳಿಗೆ ಇದನ್ನೆಲ್ಲಾ ಕೊಟ್ಟಿದ್ದು ಅಹಂಕಾರ ಮಾಡಿ ಅವಮಾನ ಮಾಡಿದ ಸಮಾಜ ಅಲ್ಲ ಅಲ್ವಾ..??