ಬೆಂಗಳೂರು: ಸ್ಯಾಂಡಲ್‌ವುಡ್ ನಟ ಚಿಕ್ಕಣ್ಣ ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ತಮ್ಮ ಮದುವೆ ಕುರಿತು ಮಾತನಾಡಿರುವ ಅವರು, ಇದು ಸಂಪೂರ್ಣ ಅರೇಂಜ್ಡ್ ಮ್ಯಾರೇಜ್ ಅಲ್ಲ, ಅರೇಂಜ್ಡ್ ಕಮ್ ಲವ್ ವೆಡ್ಡಿಂಗ್ ಎಂದು ಹೇಳಿದ್ದಾರೆ. ಚಿಕ್ಕಣ್ಣ ಅವರು ಪಾವನಾ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದು, ಆಗಸ್ಟ್ 29 ಮತ್ತು 30ರಂದು ಮೈಸೂರಿನಲ್ಲಿ ಮದುವೆ ಸಮಾರಂಭ ನಡೆಯಲಿದೆ ಎಂದು ವರದಿಯಾಗಿದೆ.
ಮದುವೆ ಬಗ್ಗೆ ಮಾತನಾಡಿರುವ ಚಿಕ್ಕಣ್ಣ, ಮನೆಯವರ ಮೂಲಕ ಪಾವನಾ ಪರಿಚಯವಾದ ಬಳಿಕ ಇಬ್ಬರ ನಡುವೆ ಪ್ರೀತಿ ಬೆಳೆದಿದೆ. ಹೀಗಾಗಿ ತಮ್ಮದು ಅರೇಂಜ್ಡ್ ಕಮ್ ಲವ್ ಮ್ಯಾರೇಜ್ ಎಂದು ಹೇಳಿದ್ದು, ಪಾವನ ಸಿಗಲು ನಾನು ಪುಣ್ಯ ಮಾಡಿದ್ದೆ ಎಂದು ಹೇಳಿದ್ದಾರೆ ಇನ್ನು ಮದುವೆ ಸಮಾರಂಭದಲ್ಲಿ ಕುಟುಂಬಸ್ಥರು, ಆಪ್ತರು ಹಾಗೂ ಚಿತ್ರರಂಗದ ಗಣ್ಯರು ಭಾಗಿಯಾಗುವ ಸಾಧ್ಯತೆ ಇದೆ. ಚಿಕ್ಕಣ್ಣ ಅವರ ಮದುವೆ ವಿಚಾರ ತಿಳಿಯುತ್ತಿದ್ದಂತೆ ಅಭಿಮಾನಿಗಳು ಶುಭಾಶಯಗಳನ್ನು ಕೋರಿದ್ದಾರೆ.
ಇನ್ನು ರೇಣುಕಾಸ್ವಾಮಿ ಕೊಲೆ ಪ್ರಕಾರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಅವರನ್ನ ಮದುವೆಗೆ ಕರೆದಿದ್ರಾ ಎಂಬ ಪ್ರಶ್ನೆಗೆ ಉತ್ತರಿಸಿರುವ ಚಿಕ್ಕಣ್ಣ ' ಈ ಪ್ರಕರಣದಲ್ಲಿ ನಾನು ಸಾಕ್ಷಿಯಾಗಿರುವ ಕಾರಣ ಅವರನ್ನ ನಾನು ಭೇಟಿಯಾಗಿಲ್ಲ, ಆದರೆ ದರ್ಶನ್ ಅಭಿನಯದ ಡೆವಿಲ್ ಸಿನಿಮಾವನ್ನ ಪಾವನ ಜೊತೆ ಕುಳಿತು ನೋಡಿದ್ದೇ ಎಂದು ಹೇಳಿದ್ದಾರೆ.