ನವದೆಹಲಿ: ಬ್ರ್ಯಾಂಡ್ವೊಂದರ ಜಾಹೀರಾತಿನಲ್ಲಿ ನಟಿ ಕೃತಿ ಸನೋನ್ ಧರಿಸಿದ್ದ ಬಟ್ಟೆ ಬಗ್ಗೆ ಟೀಕೆ ವ್ಯಕ್ತವಾದ ಬೆನ್ನಲ್ಲೇ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ನಟಿ ಬೆನ್ನಿಗೆ ನಿಂತಿದ್ದಾರೆ. ʻಮಹಿಳೆ ಏನು ಧರಿಸಬೇಕು ಎಂಬುದು ಆಕೆಯ ಆಯ್ಕೆ, ಅದನ್ನು ಯಾರು ವಿರೋಧಿಸಬಾರದು ಮತ್ತು ಟ್ರೋಲ್ ಮಾಡುವುದನ್ನ ನಿಲ್ಲಿಸಿ ಎಂದು ರಾಗಾ ಕಿಡಿಕಾರಿದ್ದಾರೆ.
ಕೃತಿ ಸನೋಲ್ ಬಿಕನಿ ಧರಿಸಿ ರಾಖಿ ಕಟ್ಟುವು ಜಾಹೀರಾತು ವೈರಲ್ ಆಗಿತ್ತು, ಈ ಕುರಿತು ಪ್ರತಿಕ್ರಿಯೆ ನೀಡಿದ್ದ ಸಂಸದೆ ಕಂಗನಾ ರಣಾವತ್ (Kangana Ranaut) ಬಿಕಿನಿಯಲ್ಲಿಯೇ ರಾಖಿ ಕಟ್ಟುವ ಅವಶ್ಯಕತೆಯೆನಿತ್ತು? ಉದ್ದೇಶಪೂರ್ವಕವಾಗಿ ಅಸಹ್ಯ ಮಾಡಿದಂತಿದೆ ಎಂದು ಕಿಡಿಕಾರಿದ್ದರು. ಇದರ ಬೆನ್ನಲ್ಲೇ ನಟಿ ಕೃತಿ ಪ್ರತಿಕ್ರಿಯಿಸಿ, ಸಂಸ್ಕೃತಿ, ಸಂಪ್ರದಾಯ ಎನ್ನುವುದು ಧರಿಸುವ ಬಟ್ಟೆಯಲ್ಲ. ಬದಲಿಗೆ ಆಕೆಯ ಹೃದಯದಲ್ಲಿದೆ ಎಂದು ಟಾಂಗ್ ನೀಡಿದ್ದರು. ಇದೀಗ ನಟಿ ಕೃತಿಗೆ ರಾಗಾ ಸಾಥ್ ನೀಡಿದ್ದು, ಇನ್ಸ್ಟಾದಲ್ಲಿ ಸ್ಟೋರಿ ಶೇರ್ ಮಾಡಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ ವಿಪಕ್ಷ ನಾಯಕ ರಾಹುಲ್ ಗಾಂಧಿ ಈ ಕುರಿತು ಸ್ಟೋರಿ ಹಂಚಿಕೊಂಡಿದ್ದು ʻಮಹಿಳೆಯೊಬ್ಬಳು ಏನು ಧರಿಸುತ್ತಾಳೆ, ಏನು ಮಾಡುತ್ತಾಳೆ ಮತ್ತು ಎಲ್ಲಿಗೆ ಹೋಗುತ್ತಾಳೆ ಎಂಬುದು ಆಕೆಯ ಆಯ್ಕೆ. ಆಕೆಯ ಸ್ವಾತಂತ್ರ್ಯವನ್ನು ಟ್ರೋಲ್ ಮಾಡುವುದನ್ನು ನಿಲ್ಲಿಸಿ ಎಂದು ಕಿಡಿಕಾರಿದ್ದಾರೆ.
ಕಂಗನಾ ಟೀಕೆಗೆ ಕೃತಿ ಕಿಡಿ:
ರಕ್ಷಾ ಬಂಧನವೆಂಬುದು ರಕ್ಷಣೆಗಾಗಿರುವ ಒಂದು ಬಂಧ ಎಂದರ್ಥ. ನಾನು ಮತ್ತು ನನ್ನ ಸಹೋದರಿ ಪರಸ್ಪರ ರಾಖಿ ಕಟ್ಟಿಕೊಳ್ಳುತ್ತೇವೆ. ಒಬ್ಬ ಸಹೋದರ ಮಾಡುವುದಕ್ಕಿಂತ ಹೆಚ್ಚಾಗಿ ನಾವು ಒಬ್ಬರನ್ನೊಬ್ಬರು ರಕ್ಷಿಸಬಲ್ಲೆವು. ನಾವಿಬ್ಬರು ಕೂಡ ಪರಸ್ಪರ ಆರೋಗ್ಯ, ಸಂತೋಷ ಮತ್ತು ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸುತ್ತೇವೆ. ನಮ್ಮ ಈ ಪ್ರಾರ್ಥನೆ ಮತ್ತು ಭರವಸೆ ಕೇವಲ ನಮಗಲ್ಲ, ನಮ್ಮ ನಾಯಿಗಳಿಗೂ ಅನ್ವಯಿಸುತ್ತದೆ. ಯಾಕೆಂದರೆ, ಅವುಗಳು ಕೂಡ ನಮ್ಮ ಕುಟುಂಬದ ಸದಸ್ಯರೇ.
ಮಹಿಳೆಯರು ಏನು ಧರಿಸಬೇಕು ಎಂದು ಹೇಳುವುದನ್ನು ನಾವು ಯಾವಾಗ ನಿಲ್ಲಿಸುತ್ತೇವೆ? ಸಾಂಪ್ರದಾಯಿಕ ಉಡುಪುಗಳ ಶೈಲಿ ಕಾಲದಿಂದ ಕಾಲಕ್ಕೆ ಬದಲಾಗುತ್ತಾ ಬಂದಿದ್ದರೂ, ಇಂದಿಗೂ ಒಬ್ಬ ಮಹಿಳೆಯ ಸಂಸ್ಕೃತಿ ಮತ್ತು ಗೌರವವನ್ನು ಕೇವಲ ಅವಳ ಬಟ್ಟೆಯಿಂದಲೇ ಅಳಿಯುವ ಕೆಟ್ಟ ಮನಸ್ಥಿತಿ ನಮ್ಮ ಸಮಾಜದಲ್ಲಿದೆ. ಆದರೆ ನಿಜವಾದ ಸಂಸ್ಕೃತಿ ಮತ್ತು ಸಂಪ್ರದಾಯ ಇರುವುದು ಕೇವಲ ಬಟ್ಟೆಯಲಲ್ಲ, ಬದಲಿಗೆ ಅವಳ ಹೃದಯದಲ್ಲಿ ಮತ್ತು ಆಚಾರ-ವಿಚಾರಗಳಲ್ಲಿ. ಧರಿಸುವ ಉಡುಪಿನಿಂದ ಯಾರ ವ್ಯಕ್ತಿತ್ವವನ್ನೂ ಅಥವಾ ಸಂಸ್ಕಾರವನ್ನೂ ಅಳೆಯಲು ಸಾಧ್ಯವಿಲ್ಲ