ದೇಶದ ಕೃಷಿ ವಲಯದ ಆಧಾರ ಸ್ಥಂಭವಾಗಿರುವ ನೈರುತ್ಯ ಮುಂಗಾರು ಮಾರುತಗಳು ವಾಡಿಕೆಗಿಂತ ಮುಂಚಿತವಾಗಿ ಕೇರಳ ಪ್ರವೇಶಿಸುತ್ತವೆ ಎಂದು ಭಾರತೀಯ ಹವಮಾನ ಇಲಾಖೆ ತಿಳಿಸಿದೆ. ಮೇ.27ರಂದು ಕೇರಳಕ್ಕೆ ಮುಂಗಾರು ಅಪ್ಪಳಿಸುವ ಸಾಧ್ಯತೆ ಇದ್ದು. ಇದರಲ್ಲಿ 4 ದಿನಗಳ ಏರಿಳಿತ ಇರಬಹುದು ಎಂದು ಇಲಾಖೆ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.
ಸಾಮಾನ್ಯವಾಗಿ ಜೂನ್ 1ರ ನಂತರ ಮಾನ್ಸೂನ್ ಮಾರುತಗಳು ದೇಶ ಪ್ರವೇಶಿಸುತ್ತವೆ, ಆದರೆ ಈ ಬಾರಿ ಒಂದು ವಾರ ಮುಂಚಿತವಾಗಿಯೇ ಮುಂಗಾರು ಆರಂಭವಾಗುತ್ತಿದ್ದು. ಈ ವಿಷಯ ರೈತರಲ್ಲಿ ಸಂತಸ ತಂದಿದೆ. ಈಗಾಗಲೇ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿಗೆ ಮುಂಗಾರು ಪ್ರವೇಶಿಸಿದ್ದು, ಅಲ್ಲಿಂದ ಕೇರಳದತ್ತ ವೇಗವಾಗಿ ಚಲಿಸುತ್ತಿದೆ.
ಇನ್ನು ಕೇರಳ ಪ್ರವೇಶಿಸಿದ ಮಾನ್ಸೂನ್ ಮಾರುತಗಳು ಒಂದು ವಾರದ ನಂತರ ಕರ್ನಾಟಕ ಪ್ರವೇಶಿಸಲಿದ್ದು. ಲೆಕ್ಕಾಚಾರದ ಪ್ರಕಾರ ಜೂನ್ ಮೊದಲ ವಾರದಲ್ಲೇ ಕರುನಾಡಿಗೆ ಮಳೆಯ ಸಿಂಚನವಾಗುವ ನಿರೀಕ್ಷೆ ಇದೆ.