Search


2023ರ ಚುನಾವಣೆ ಗೆಲುವಿಗೆ ಪರಂ ಪ್ರಣಾಳಿಕೆ; ತುಮಕೂರಿನಿಂದ ಹೈಕಮಾಂಡ್‌ಗೆ ಸಿದ್ದು ಸಂದೇಶ..?

ತುಮಕೂರು: ರಾಜ್ಯದಲ್ಲಿ ಕಾಂಗ್ರೇಸ್‌ ಸರ್ಕಾರ ಅಧಿಕಾರಕ್ಕೆ ಬಂದು 3 ವರ್ಷ ತುಂಬಿರುವ ನಡುವೆ ತುಮಕೂರಿನಲ್ಲಿ ಸರ್ಕಾರ ಸಾಧನ ಸಮಾವೇಶ ನಡೆಸಿದೆ. ಸರ್ಕಾರದ ಮೂರು ವರ್ಷದ ಸಾಧನೆಯನ್ನ ಜನರ ಮುಂದಿಡುವ ಕೆಲಸವನ್ನ ಸಿದ್ದು ಸರ್ಕಾರ ಯಶಸ್ವಿಯಾಗಿ ಮಾಡಿದ್ದು. ಇದರ ನಡುವೆ ಸಿಎಂ ಸಿದ್ದರಾಮಯ್ಯ ಮುಖ್ಯಮಂತ್ರಿ ಬದಲಾವಣೆ ಕುರಿತು ಸೈಲೆಂಟ್‌ ಆಗಿಯೇ ಹೈಕಮಾಂಡ್‌ಗೆ ಸಂದೇಶ ರವಾನಿಸುವ ಕೆಲಸ ಮಾಡಿದ್ದಾರೆ.

ಕಳೆದ 6 ತಿಂಗಳಿಂದ ರಾಜ್ಯದಲ್ಲಿ ಕಗ್ಗಂಟಾಗಿರುವ ಸಿಎಂ ಬದಲಾವಣೆ ಚರ್ಚೆಗೆ ಪುಲ್‌ಸ್ಟಾಪ್‌ ಇಡುವ ಸಮಯ ಸಮೀಪಿಸಿದೆ. ಪಂಚರಾಜ್ಯಗಳ ಚುನಾವಣೆಯನ್ನು ಮುಂದಿಟ್ಟುಕೊಂಡು ಸಮಯ ದೂಡುತ್ತಿದ್ದ ಕಾಂಗ್ರೆಸ್‌ ಹೈಕಮಾಂಡ್‌ ಕಡೆಗೂ ಈ ವಿಶಯದಲ್ಲಿ ದೃಡ ನಿರ್ಧಾರ ತೆಗೆದುಕೊಳ್ಳುವಂತೆ ಒತ್ತಡವು ಹೆಚ್ಚಾಗಿದೆ. ಇದರ ನಡುವೆ ಸಿಎಂ ಸಿದ್ದರಾಮಯ್ಯ ತಮ್ಮ ಆಟವನ್ನ ಆರಂಭಿಸಿದ್ದಾರೆ. 

2023ರ ಚುನಾವಣೆ ಗೆಲುವಲ್ಲಿ ಪರಮೇಶ್ವರ್‌ ಪಾತ್ರ..!

ಸಿಎಂ ಬದಲಾವಣೆ ವಿಶಯದಲ್ಲಿ ಹೈಕಮಾಂಡ್‌ ಯಾವ ನಿರ್ಧಾರ ತೆಗೆದುಕೊಳ್ಳುತ್ತದೋ, ಅದಕ್ಕೆ ಬದ್ದವಾಗಿರುತ್ತೇನೆ ಎಂದಿರುವ ಸಿಎಂ ಸಿದ್ದು. ಒಂದು ವೇಳೆ ಕುರ್ಚಿಯಿಂದ ಕೆಳಗಿಳಿಯುವ ಸಂದರ್ಭ ಎದುರಾದರೆ, ಆ ಕುರ್ಚಿಯ ಮೇಲೆ ಸಚಿವ ಪರಮೇಶ್ವರ್‌ ಅವರನ್ನ ಕೂರಿಸುವ ಸಾಧ್ಯತೆಗಳು ರಾಜ್ಯ ಕಾಂಗ್ರೆಸ್‌ನಲ್ಲಿ ಗೋಚರಿಸುತ್ತಿವೆ. ಇದರ ಜೊತೆಗೆ ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರ ಹಿಡಿಯಲು ಅಹಿಂದ ಮತಗಳು ನಿರ್ಣಾಯಕವಾಗಿದ್ದು. ದಲಿತ ಸಿಎಂ ಕೂಗು ಕೂಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದೇ ಕಾರಣವನ್ನ ಇಟ್ಟುಕೊಂಡು ಪರಮೇಶ್ವರ್‌ಗೆ ಪಟ್ಟಾಭಿಷೇಕ ಮಾಡಲು ಸಿದ್ದು ಬಣ ತಯಾರಾಗಿರುವಂತೆ ಕಾಣುತ್ತಿದೆ.

ಪರಮೇಶ್ವರ್‌ ನೇತೃತ್ವದಲ್ಲಿ ನಿನ್ನೆ (ಮೇ.19) ತುಮಕೂರಿನಲ್ಲಿ ನಡೆದ  "ಮೂರು ವರ್ಷಗಳ ಸಾಧನಾ ಸಮರ್ಪಣಾ" ಸಮಾವೇಶ ಅದ್ದೂರಿಯಾಗಿ ನೆರವೇರಿದ್ದು. ಈ ಕಾರ್ಯಕ್ರಮದಲ್ಲಿ ಸಚಿವ ಪರಮೇಶ್ವರ್‌ ಅವರ ಶಕ್ತಿ ಪ್ರದರ್ಶನ ಕೂಡ ನಡೆದಿದೆ. ಇನ್ನು  ಸಮುಖ್ಯಮಂತ್ರಿಗಳು ಕೂಡ 2023ರ ಚುನಾವಣೆಯಲ್ಲಿ ಪರಮೇಶ್ವರ್‌ ಪಾತ್ರವನ್ನ ಕೊಂಡಾಡಿದ್ದಾರೆ. ವೇದಿಕೆ ಮೇಲೆ ಮಾತನಾಡಿದ ಸಿಎಂ " 2023ರ ಚುನಾವಣೆಯಲ್ಲಿ ಪರಮೇಶ್ವರ್‌ರನ್ನು ಪ್ರಣಾಳಿಕೆ ಸಮಿತಿಯ ಅಧ್ಯಕ್ಷರನ್ನಾಗಿ ಮಾಡಲಾಗಿತ್ತು. ಅವರು ಸಿದ್ದಪಡಿಸಿದ ಪ್ರಣಾಳಿಕೆಯಲ್ಲಿನ 580 ಭರವಸೆಗಳಲ್ಲಿ 290ಕ್ಕೂ ಹೆಚ್ಚು ಭರವಸೆಯನ್ನ ಈಡೇರಿಸಿದ್ದೇವೆ, ಉಳಿದ ಎರಡು ವರ್ಷಗಳಲ್ಲಿ ಬಾಕಿ ಭರವಸೆಗಳನ್ನೂ ಈಡೇರಿಸಲಾಗುವುದು. ಪ್ರಮುಖವಾಗಿ ನಾವು ಘೋಷಿಸಿದ್ದ ಐದು ಗ್ಯಾರಂಟಿಗಳನ್ನು ಅಧಿಕಾರಕ್ಕೆ ಬಂದ ಕ್ಷಣದಿಂದಲೇ ಒಂದೊಂದಾಗಿ ಈಡೇರಿಸಿದ್ದಲ್ಲದೆ ಉಳಿದ ಭರವಸೆಗಳನ್ನೂ ಈಡೇರಿಸಿ ನಾವು ನಿಮ್ಮ ಮುಂದೆ ಧನ್ಯತೆ ಅರ್ಪಿಸಲು ಇಲ್ಲಿ ನಿಮ್ಮ ಮುಂದೆ ನಿಂತಿದ್ದೇವೆ ಎಂದರು.


ಕರ್ನಾಟಕದ ಅಭಿವೃದ್ಧಿ ಮುಂದೆ ಗುಜರಾತ್ ಮಾದರಿ ಟೊಳ್ಳು

35 ವರ್ಷಗಳಿಂದ ಗುಜರಾತ್ ನಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಇಲ್ಲಿ ಅಭಿವೃದ್ಧಿಯೇ ಆಗಿಲ್ಲ. ಮೊನ್ನೆಯಷ್ಟೆ ಕೇವಲ 2500 ರೂ ಮನೆ ಬಾಡಿಗೆ ಕಟ್ಟಲಾಗದ ಕಾರಣಕ್ಕೆ ಬಾಡಿಗೆಗಿದ್ದ ಬಡ ಕುಟುಂಬದ 13 ವರ್ಷದ ಮಗಳ ಮೇಲೆ ಮನೆ ಮಾಲೀಕ ಅತ್ಯಾಚಾರ ಎಸಗಿರುವ ಘಟನೆ ಗುಜರಾತ್ ನಲ್ಲಿ ನಡೆದಿದೆ. ಇದು ನಿಜವಾದ ಗುಜರಾತ್ ಮಾದರಿ.  ಕರ್ನಾಟಕ ಮಾದರಿ ಅಭಿವೃದ್ಧಿ ಮುಂದೆ ಗುಜರಾತ್ ಮಾದರಿ ಟೊಳ್ಳು ಎನ್ನುವುದನ್ನು ಉದಾಹರಣೆ ಸಮೇತ ವಿವರಿಸಿದರು.

ಮೋದಿಯವರು ಪ್ರಧಾನಿ ಆಗುವ ಮೊದಲು ದೇಶದಲ್ಲಿ ಡೀಸೆಲ್, ಪೆಟ್ರೋಲ್, ಚಿನ್ನದ ಬೆಲೆ ಎಷ್ಟಿತ್ತು. ಈಗ ಅದು ಆಕಾಶಕ್ಕೆ ಏರಿದೆ. ಟ್ರಂಪ್ ಬಾಲ ಹಿಡಿದು ಸುತ್ತುತ್ತಿದ್ದ ಮೋದಿಯವರೇ ಈ ಬೆಲೆ ಏರಿಕೆಗೆ ಕಾರಣ. ಮೋದಿ ದರ್ಬಾರಿನಲ್ಲಿ ಅಂಬಾನಿ ಮತ್ತು ಅದಾನಿ ಮಾತ್ರ ಲಾಭ ಮಾಡಿಕೊಂಡು ಈಗ ಇವರ ಆಸ್ತಿ 8 ಲಕ್ಷ ಕೋಟಿಗೆ ಏರಿಕೆಯಾಗಿದೆ. ಬಡವರು ಮತ್ತು ಮಧ್ಯಮ ವರ್ಗದವರ ಆದಾಯ ಮತ್ತು ಬದುಕು ನೆಲಕಚ್ಚಿದೆ ಎಂಬುದನ್ನ ವಿವರಿಸಿದರು, 

By News Desk - 20-05-2026


Ads in Post